ಗಾಂಧಿ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಗಾಂಧಿ ಭವನ ಲೋಕಾರ್ಪಣೆಗೆ ಸಕಲ ಸಿದ್ಧತೆ

Public TV
1 Min Read
chikkaballapura gandhi bhavan

ಚಿಕ್ಕಬಳ್ಳಾಪುರ: ಅ.2ರಂದು ಗಾಂಧಿ ಜಯಂತಿ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ ಗಾಂಧಿ ಭವನ ತಲೆ ಎತ್ತಿದ್ದು ಬುಧವಾರ ಲೋಕಾರ್ಪಣೆಯಾಗಲಿದೆ.

ಚಿಕ್ಕಬಳ್ಳಾಪುರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಸರಿಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಎರಡು ಅಂತಸ್ಥಿನ ಬೃಹತ್ ಕಟ್ಟಡ ಎಲ್ಲರ ಮನಸೊರೆಗೊಳ್ಳುತ್ತಿದ್ದು, ಕಟ್ಟಡದ ಮುಂಭಾಗ ಗಾಂಧೀಜಿಯವರ ಪ್ರತಿಮೆಗಳು ಎಲ್ಲರ ಕಣ್ಣು ಕುಕ್ಕುವಂತಿವೆ.

chikkaballapura gandhi museum

ನೆಲಮಹಡಿಯಲ್ಲಿ ಕಸ್ತೂರಿ ಬಾ ಸಭಾಂಗಣ, ತರಬೇತಿ ಕೇಂದ್ರ, ಹೃದಯ ಪುಂಜ ಗಾಂಧೀಜಿಯವರ ಯೋಗ ಪ್ರತಿಮೆ, ಗ್ರಂಥಾಲಯ, ಮೋಹನ್ ದಾಸ್‌ರಿಂದ ಮಹಾತ್ಮ ಗಾಂಧೀಜಿಯವರ ಜೀವನಾಧಾರಿತ ಛಾಯಾಚಿತ್ರ ಪ್ರದರ್ಶನ, ನ್ಯೂಸ್ ಕಾನ್ಫರೆನ್ಸ್ ರೂಂ, ಮ್ಯೂಸಿಯಂ ಸೇರಿದಂತೆ ಗಾಂಧೀಜಿಯವರ ಚರಕ ಪ್ರತಿಮೆ, ಮೂರು ಕೋತಿಗಳು ಪ್ರತಿಮೆಗಳು, ಗಾಂಧಿ ಹಾಗೂ ಮೊಮ್ಮಗ ನಡಿಗೆ ಪ್ರತಿಮೆ, ಗಾಂಧಿ ಮ್ಯೂರಲ್, ಹಾಗೂ ಕೆಸರಲ್ಲಿ ಬಿದ್ದ ಬಾಲಕನಿಗೆ ಸಹಾಯಹಸ್ತ ಚಾಚುತ್ತಿರುವ ಗಾಂಧಿ ಹೀಗೆ ಹತ್ತು ಹಲವು ವೈಶಿಷ್ಠತೆಯ ಪ್ರತಿಮೆಗಳ ಮೂಲಕ ಗಾಂಧಿಭವನ ಕಳೆಗಟ್ಟಿದೆ.

chikkaballapura gandhi museum 1

ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರ ಸಮ್ಮುಖದಲ್ಲಿ ಗಾಂಧಿ ಭವನ ಲೋಕಾರ್ಪಣೆಯಾಗಲಿದೆ.

Share This Article