ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳನ್ನು ಕಣ್ಣಕ್ಕೀಳಿಸಬೇಕೆಂದು ಮೂರು ಪಕ್ಷಗಳು ನಿರ್ಣಯಿಸಿವೆ. ಯಾವ ಕ್ಷೇತ್ರವನ್ನು ಯಾವ ಪಕ್ಷ ಹಂಚಿಕೊಳ್ಳಬೇಕು ಎಂಬುದರ ಕುರಿತಾಗಿ ದೋಸ್ತಿಗಳಲ್ಲಿ ಉಂಟಾಗಿದ್ದ ಗೊಂದಲ ಕೊನೆಗೂ ಬಗೆಹರಿದಿದೆ. ನಿರೀಕ್ಷೆಯಂತೆ ರಾಮನಗರ, ಮಂಡ್ಯ ಜೆಡಿಎಸ್‍ಗೆ ಸಿಕ್ಕಿದ್ದು, ಶಿವಮೊಗ್ಗ, ಬಳ್ಳಾರಿ ಲೋಕಸಭೆ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್‍ಗೆ ದಕ್ಕಿದೆ.
ಮಂಗಳವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಮಿನಿ ಸಮರವನ್ನು ಜಂಟಿಯಾಗಿ ಎದುರಿಸಲು ಎರಡು ಪಕ್ಷಗಳು ನಿರ್ಧರಿಸಿವೆ. ಕಾಂಗ್ರೆಸ್-ಜೆಡಿಎಸ್ ಸಭೆ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸಮ್ಮಿಶ್ರ ಸರ್ಕಾರ ಬರುವುದಕ್ಕೂ ಮೊದಲು ಬದ್ಧ ವೈರಿಗಳಂತೆ ಕರೆಯಲ್ಪಡುತ್ತಿದ್ದ, ಒಂದು ಕಾಲದ ಒಡನಾಡಿಗಳೂ ಆದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅಕ್ಕ ಪಕ್ಕದಲ್ಲೇ ಕುಳಿತು ಪರಸ್ಪರ ಚರ್ಚೆ ನಡೆಸಿದರು.
Advertisement
Advertisement
ಸಭೆ ಬಳಿಕ ಮಾತನಡಿದ ಈ ಬಗ್ಗೆ ಸ್ಪಷ್ಟಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಒಟ್ಟಿಗೆ ಚುನಾವಣಾ ಪ್ರಚಾರ ಮಾಡೋದಾಗಿ ಹೇಳಿದ್ರು. ಕೊಮುವಾದಿ ಪಕ್ಷವನ್ನ ಮಟ್ಟ ಹಾಕುವುದೇ ನಮ್ಮ ಉದ್ದೇಶ ಅಂತಾ ಹೇಳಿದರು. ಈ ಸಭೆಯಲ್ಲಿ ಜೆಡಿಎಸ್‍ನಿಂದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಕಾಂಗ್ರೆಸ್‍ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಭಾಗವಹಿಸಿದ್ದರು.
Advertisement
ಬಿಜೆಪಿಯಲ್ಲೂ ಅಭ್ಯರ್ಥಿ ಆಯ್ಕೆ ಜೋರಾಗಿದೆ. ಡಾಲರ್ಸ್ ಕಾಲೋನಿಯಾ ಯಡಿಯೂರಪ್ಪ ಅವರ ನಿವಾಸದಲ್ಲಿ ಪಕ್ಷದ ಪ್ರಮುಖರು ಸಭೆ ಸೇರಿದ್ದರು. ಕಾಂಗ್ರೆಸ್ ಸಭೆಯಲ್ಲಿ ರಾಮನಗರದ ಬಗ್ಗೆ ಚರ್ಚೆಯಾದ್ರೆ, ಬಿಜೆಪಿ ಸಭೆಯಲ್ಲಿ ಜಮಖಂಡಿ ಕ್ಷೇತ್ರದ ಅಭ್ಯರ್ಥಿ ವಿಷಯವಾಗಿ ಬಿಸಿಬಿಸಿ ಚರ್ಚೆಯಾಯ್ತು. ಕೊನೆಗೆ ಸಂಧಾನ ಸಮಾಧಾನ ನಡೆದು ಹೆಸರು ಅಂತಿಮವಾಗಿದ್ದು, ಇನ್ಮೂರು ದಿನಗಳಲ್ಲಿ ಘೋಷಿಸಲಿದ್ದಾರೆ.
Advertisement
ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳು
* ರಾಮನಗರ ವಿಧಾನಸಭಾ ಕ್ಷೇತ್ರ – ರುದ್ರೇಶ್
* ಜಮಖಂಡಿ ವಿಧಾನಸಭಾ ಕ್ಷೇತ್ರ – ಶ್ರೀಕಾಂತ್ ಕುಲಕರ್ಣಿ
* ಮಂಡ್ಯ ಲೋಕಸಭಾ ಕ್ಷೇತ್ರ – ಅಶ್ವಥ್ ನಾರಾಯಣ್
* ಶಿವಮೊಗ್ಗ ಲೋಕಸಭಾ ಕ್ಷೇತ್ರ – ಬಿ.ವೈ. ರಾಘವೇಂದ್ರ
* ಬಳ್ಳಾರಿ ಲೋಕಸಭಾ ಕ್ಷೇತ್ರ – ಜೆ.ಶಾಂತ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv