ಬೆಂಗಳೂರು: ಮಹದಾಯಿ, ಕಾವೇರಿ ನೀರು (Kaveri Water) ವಿಚಾರವಾಗಿ ಇದೇ ಆಗಸ್ಟ್ 23 ರಂದು ಸರ್ವಪಕ್ಷಗಳ ಸಭೆ ನಡೆಯಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಬೆಳಗ್ಗೆ 11 ಗಂಟೆಗೆ ಸರ್ವಪಕ್ಷಗಳ ಸಭೆ (All Party Meeting) ನಡೆಯಲಿದೆ. ಸಭೆಗೆ ಸಿಎಂ ಅವರೇ ದಿನಾಂಕ ನಿಗದಿ ಮಾಡಿದ್ದು, ಎಲ್ಲ ಸಂಸದರನ್ನ ಆಹ್ವಾನಿಸಲಾಗಿದೆ. ಸಭೆಯಲ್ಲಿ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಆ.21ರಂದು ಮಾಜಿ ಕಾರ್ಪೊರೇಟರ್ಸ್ ಸೇರಿದಂತೆ ಹಲವರ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೂ ಅರ್ಜಿ ಹಾಕಿಲ್ಲ, ಮುಂದೆ ಕಾದು ನೋಡಬೇಕು. ಅವರವರ ಬದುಕು ಭವಿಷ್ಯ ನೋಡಿಕೊಳ್ತಾರೆ. ಸಿಟಿ ರವಿ ಹಿರಿಯರಿದ್ದಾರೆ, ಅವರು ಬೆದರಿಕೆಯೊಡ್ಡುತ್ತಿದ್ದಾರೆ, ಕೈಕತ್ತರಿಸಿಬಿಡ್ತೀವಿ ಅಂತಾ? ಜೆಡಿಎಸ್, ಕಾಂಗ್ರೆಸ್ ಶಾಸಕರನ್ನ ಕರ್ಕೊಂಡು ಮಜಾ ಮಾಡಿದ್ರಲ್ಲ ಆವಾಗ ಏನಾಗಿತ್ತು? ಅವರ ರಾಜಕಾರಣ ಅವರು ಮಾಡಲಿ, ನಿಮಗೆ ಬರೋ ಬೆದರಿಕೆ ತರ, ಬೇರೆಯವರಿಗೂ ಬರುತ್ತೆ. ನಾವು ಯಾರನ್ನೂ ಕರೀತಿಲ್ಲ. ನಮಗಿರೋ ನಂಬರ್‌ಗೆ ಯಾರೂ ಅವಶ್ಯಕತೆ ಇಲ್ಲ. ಆದ್ರೆ ಪಕ್ಷಕ್ಕೆ ಬರೋರನ್ನ ನಾನು ತಡೆಯೋಕೆ ಆಗುತ್ತಾ? ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗುತ್ತಾ? ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು – ಮದ್ಯ ಮಾರಾಟ ಪ್ರಮಾಣ 15% ಇಳಿಕೆ
Advertisement
Advertisement
ಎರಡೂವರೆ ವರ್ಷ ಆದ್ಮೇಲೆ ಸಚಿವ ಸ್ಥಾನ ಬಿಟ್ಟುಕೊಡಬೇಕೆಂಬ ಮುನಿಯಪ್ಪ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಡಿಸಿಎಂ, ಪಾರ್ಟಿ, ಹೈಕಮಾಂಡ್ ಏನ್ ಹೇಳುತ್ತೋ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು. ನಾವು ಯಾರು ಅದನ್ನ ಬಹಿರಂಗವಾಗಿ ಚರ್ಚೆ ಮಾಡುವ ವಿಷಯವಲ್ಲ. ಮುಂದಿನ ವಾರ ನಮ್ಮ ರಾಷ್ಟ್ರೀಯ ನಾಯಕರು ಬರುತ್ತಾರೆ, ಅವರ ಬಳಿ ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್ ಆಗುತ್ತೆ – ಕೋಡಿಮಠ ಶ್ರೀಗಳ ಭವಿಷ್ಯ