-ಪತಿ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆಯ ಕೊನೆ ಮಾತು
ಹಾಸನ: ಪತಿಯ ಕಿರುಕುಳಕ್ಕೆ ಬೇಸತ್ತ 19 ವರ್ಷದ ನವವಿವಾಹಿತೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದೀಗ ಆಕೆಯ ಕೊನೆಯ ವಿಡಿಯೋ ಹೇಳಿಕೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹಾಸನ ನಗರದ ವಿಜಯನಗರ ನಿವಾಸಿ ರೆಹಮಾನ್ ಷರೀಫ್ ಪುತ್ರಿ ನೇಹಾ ಷರೀಫ್‍ಗೆ ಕಳೆದ 5 ತಿಂಗಳ ಹಿಂದೆ ಸಂಬಂಧಿ ಸಕಲೇಶಪುರದ ಆದಿಲ್ ಜೊತೆ ಮದುವೆ ಮಾಡಲಾಗಿತ್ತು. ಎರಡು ತಿಂಗಳ ಗರ್ಭಿಣಿಯೂ ಆದ ನೇಹಾ ಪತಿಯ ಕಿರುಕುಳಕ್ಕೆ ನಗರದ ಮಹಿಳಾ ಪೊಲೀಸ್ ಠಾಣೆಗೂ ಹೋದರೆ ನ್ಯಾಯ ಸಿಗಲಿಲ್ಲ. ಪತಿಯ ಲೈಂಗಿಕ ಮತ್ತು ಮಾನಸಿಕ ಕಿರುಕುಳಕ್ಕೆ ನೊಂದಿದ್ದ ನೇಹಾ ತಾನು ವಿಷ ಕುಡಿಯುವ ಮೊದಲು ಹೇಳಿಕೆ ಕೊಟ್ಟು ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾಳೆ.
Advertisement
Advertisement
ವಿಡಿಯೋದಲ್ಲಿ ಏನಿದೆ?
ನನ್ನ ಹೆಸರು ನೇಹಾ ಷರೀಫ್, ನನ್ನ ತಂದೆಯ ಹೆಸರು ರೆಹಮಾನ್ ಷರೀಫ್. ನಾನು ವಿಜಯನಗರದ ನಿವಾಸಿ. ಆದಿಲ್ ಷರೀಫ್ ಎಂಬವರ ಜೊತೆ ನನಗೆ ಮದುವೆ ಮಾಡಲಾಗಿತ್ತು. 5 ತಿಂಗಳ ಹಿಂದೆ ಎಂ. ಹೆಚ್ ಕನ್ವೆಂಷನ್ ಹಾಲ್ ನಲ್ಲಿ ವರದಕ್ಷಿಣೆಯಾಗಿ ವಾಚ್, ಉಂಗುರ, ಚಿನ್ನದ ಚೈನ್, ಬೀರು, ಮಂಚ, ಕ್ಯಾಶ್, ಸೇರಿದಂತೆ ಎಲ್ಲವನ್ನೂ ಕೊಟ್ಟು ಮದುವೆ ಮಾಡಲಾಗಿತ್ತು.
Advertisement
Advertisement
ಮದುವೆಯಾದ ಒಂದು ವಾರದಲ್ಲಿ ನನಗೆ ಇಲ್ಲಿ ತುಂಬಾ ಚಿತ್ರಹಿಂಸೆ ನೀಡಿದರು. ನನ್ನ ಅತ್ತೆ ನನಗೆ ತುಂಬಾ ಹೊಡೆಯುತ್ತಿದ್ದರು. ನನ್ನ ಅತ್ತೆಯ ಎರಡು ಅಕ್ಕ-ತಂಗಿಯರೂ ಕೂಡ ಫೌಸಿಯಾ ಮತ್ತು ಶಾವರ್ ಎಂಬವರು ಸೇರಿಕೊಂಡು ನುಸ್ರತ್ ಎಂಬಾಕೆಯಿಂದ ಚಿತ್ರ ವಿಚಿತ್ರ ಹಿಂಸೆ ಕೊಡಿಸಿದ್ದಾರೆ. ನನಗೆ ಎಲ್ಲಿಯೂ ಇರದ ರೀತಿಯಲ್ಲಿ ಮಾಡಿಬಿಟ್ಟಿದ್ದಾರೆ. ನನ್ನ ಗಂಡ ರಾತ್ರಿ ಇಡೀ ಸೆಕ್ಸ್ ಗಾಗಿ ಟಾರ್ಚರ್ ಮಾಡುತ್ತಿದ್ದ. ನನ್ನ ಒಳಗಿನ ಎಲ್ಲಾ ರೀತಿಯ ಅಂಗಗಳು ಡ್ಯಾಮೇಜ್ ಆಗಿವೆ. ಏನೂ ಉಳಿಯಲಿಲ್ಲ. ನಾನು ಗರ್ಭಿಣಿ ಎಂದು ಗೊತ್ತಿದ್ದರೂ ಕೂಡ ನನಗೆ ಚಿತ್ರಹಿಂಸೆ ನೀಡಿದರು.
ಏನೂ ಉಳಿಸಲಿಲ್ಲ. ಮೊಕ್ತಿಯಾರ್, ಛೋಟೂ ಇವರಿಬ್ಬರೂ ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದರು. ಸಕಲೇಶಪುರದಲ್ಲಿ ನಿನ್ನನ್ನು ಹೂತು ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು. ಇನ್ನಷ್ಟು ವರದಕ್ಷಿಣೆ ಬೇಕೆಂದು ನನಗೆ ಹಿಂಸಿಸಿದ್ದಾರೆ. ಅನ್ನ ನೀರು ಏನನ್ನೂ ಕೊಡ್ತಿರಲಿಲ್ಲ. ನನ್ನ ಬದುಕಿನಲ್ಲಿ ಏನೂ ಉಳಿಯಲಿಲ್ಲ. ನನ್ನ ಮಾನವನ್ನೂ ಹರಾಜು ಹಾಕಿದರು. ನನ್ನ ತಂದೆ ತಾಯಿಯ ಮಾನವನ್ನೂ ಹರಾಜು ಹಾಕಿದರು. ನಾನು ಏನಂತ ಉತ್ತರಿಸಲಿ ಎಲ್ಲರಿಗೂ ಪೊಲೀಸರಿಗೆ ದೂರು ನೀಡಲು ಹೋದರೂ ಅಲ್ಲಿಯೂ ಸಹ ನನ್ನ ದೂರು ತೆಗೆದುಕೊಳ್ಳಲಿಲ್ಲ.
ನಮ್ಮ ಬಳಿ ಒಂದು ರೂ.ಯೂ ಇಲ್ಲ, ಪೊಲೀಸರಿಗೆ ಕೊಡಲು ಲಾಯರ್ ಗಳಿಗೆ ಕೊಡಲು ಈ ನ್ಯಾಯಾಲಯದವರಿಗೆ ಕೊಡಲು ನಮ್ಮ ಬಳಿ ಹಣ ಇಲ್ಲ. ನಾನು ನಮ್ಮ ತಂದೆ-ತಾಯಿ ಪಾಲಿಗೆ ತುಂಬ ಕಷ್ಟ ಕೊಟ್ಟುಬಿಟ್ಟೆ. ಅವರಿಗೆ ಮತ್ತೆ ತೊಂದರೆ ಕೊಡಲು ಇಷ್ಟವಿಲ್ಲ. ನಾನು ಅವರಿಗೆ ತುಂಬಾ ತೊಂದರೆ ಕೊಟ್ಟಿದ್ದೇನೆ. ಇನ್ನಷ್ಟು ತೊಂದರೆ ನೀಡಲ್ಲ ಅಮ್ಮ ಅಪ್ಪ. ನಾನೇನು ತಪ್ಪು ಮಾಡಲಿಲ್ಲ. ನಾನೇನು ಅಂತ ಉತ್ತರಿಸಲಿ ಎಲ್ಲರಿಗೂ, ಯಾರಿಗೆ ಅಂತ ಉತ್ತರಿಸಲಿ, ನನ್ನ ಕೈಯಿಂದ ಸಾಧ್ಯವಿಲ್ಲ.
ನಾನು ಸತ್ತ ಮೇಲೆಯದರೂ ನ್ಯಾಯ ಸರಿಯಾಗಿ ತೀರ್ಮಾನವಾಗಲಿ. ನಾನು ಸತ್ತ ಮೇಲೆಯಾದರೂ ನನಗೆ ನ್ಯಾಯಬೇಕು ನನಗೆ ನ್ಯಾಯ ಕೊಡಿಸಿ. ನನ್ನ ಅತ್ತೆ ಮನೆಯವರಾದ ಆಸಿಯಾ, ನನ್ನ ಮಾವನವರಾದ ಏಜಿಯಾಜ್ ಆಹಮದ್, ಮೊಕ್ತಿಯಾರ್ ಪಾಶ್, ಫೌಸಿಯಾ, ಶಾವರ್, ನುಸ್ರತ್ ಮತ್ತು ನನ್ನ ಪತಿ ಆದಿಲ್ ಷರೀಫ್ ಇವರೆಲ್ಲ ನನಗೆ ಚಿತ್ರ ಹಿಂಸೆ ನೀಡಿದ್ದಾರೆ. ನಾನು ಗರ್ಬಿಣಿ ಎನ್ನುವುದನ್ನೂ ನೋಡಲಿಲ್ಲ. ನನ್ನ ಬಳಿ ಏನೂ ಉಳಿಯಲಿಲ್ಲ. ನನ್ನ ತಂದೆ ತಾಯಿ ಉಳಿಸಲು ಪೊಲೀಸರು, ವಕೀಲರು ಎಷ್ಟು ಮಂದಿ ಬಳಿ ಹೊಗಲಿ. ನನಗೆ ಆಗುತ್ತಿರಲಿಲ್ಲ. ನಾನು ಸತ್ತ ಮೇಲಾದರೂ ನನಗೆ ನ್ಯಾಯ ಸಿಗಬೇಕು. ದೇವರೆ ನನಗೆ ನ್ಯಾಯ ಬೇಕು.. ನನಗೆ ನ್ಯಾಯ ಬೇಕು. ನನಗೆ ನ್ಯಾಯ ಬೇಕು ದೇವರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv