ನವದೆಹಲಿ: ದೇಶದ ರಾಜಕೀಯ ಪುಟದಲ್ಲಿ ಯಾರೂ ನಿರೀಕ್ಷೆ ಮಾಡದಂತೆ ಮೇಲೆದ್ದು ಬಂದ ಆಮ್ ಆದ್ಮಿ ಪಾರ್ಟಿಯಲ್ಲಿ ದೊಡ್ಡ ಬಿರುಕು ಕಾಣಿಸಿದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗೆ ಇಳಿಸಲು ವಿರೋಧ ಬಣ ಸಜ್ಜಾಗಿದೆ.
ಆದರೆ ಕುರ್ಚಿಯಿಂದ ಕೆಳಗೆ ಇಳಿಯೋಕೆ ಕೇಜ್ರಿವಾಲ್ ಅಷ್ಟು ಸುಲಭವಾಗಿ ಒಪ್ಪಿಬಿಡ್ತರಾ..? ಒಂದ್ವೇಳೆ ಕೇಜ್ರಿವಾಲ್ ಅವರನ್ನು ಬಲವಂತವಾಗಿ ಕೆಳಗೆ ಇಳಿಸಿದ್ರೆ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆ ಕಾಡ್ತಿದೆ.
Advertisement
ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಆಪ್ ಮುಖಂಡ ಕುಮಾರ್ ವಿಶ್ವಾಸ್, ಆಮ್ ಆದ್ಮಿ ಭ್ರಷ್ಟಚಾರದ ಹಾದಿ ಹಿಡಿದಿದೆ ಅಂತಾ ಗಂಭೀರ ಆರೋಪ ಮಾಡಿದ್ರು. ನನಗೆ ಆಮ್ ಆದ್ಮಿ ಮೇಲೆ ವಿಶ್ವಾಸವಿಲ್ಲ ಅಂತಾ ನೇರವಾಗಿ ಕೇಜ್ರಿವಾಲ್ ಮೇಲೆ ಆರೋಪ ಮಾಡಿದ್ರು. ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕ್ತಾರೆ. ಮೂಲ ಆಮ್ ಆದ್ಮಿಗಳನ್ನ ಕಡೆಗಣಿಸ್ತಿದ್ದಾರೆ ಅಂತಾ ಆರೋಪ ಮಾಡಿದ್ರು.
Advertisement
ಇದೇ ವೇಳೆ ನಾನು ಆಪ್ ನಲ್ಲಿ ಮುಂದುವರಿಯಬೇಕೇ? ಬೇಡವೇ ಎನ್ನುವುದನ್ನು ಬುಧವಾರ ತಿಳಿಸುತ್ತೇನೆ. ಪಕ್ಷಕ್ಕೆ ರಾಜೀನಾಮೆ ನೀಡಿದರೂ ಬೇರೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಲ್ಲ ಎಂದು ಅವರು ತಿಳಿಸಿದರು.
Advertisement
ಮೂಲಗಳ ಪ್ರಕಾರ ಕೇಜ್ರಿವಾಲ್ ಅವರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸ್ತಾರೆ ಎನ್ನಲಾಗಿದೆ. ಈ ನಡುವೆ ದಿಲ್ಲಿ ಪಾಲಿಕೆ ಚುನಾವಣೆ ಗೆಲುವೇ ನಮಗೆ ಮುಂದಿನ ಚುನಾವಣೆಗೆ ಮೆಟ್ಟಿಲು ಅಂತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
Advertisement