ಬೆಂಗಳೂರು: ಕನ್ನಡದಲ್ಲಿ ರ‍್ಯಾಪರ್ ಹಾಡುಗಳ ಮೂಲಕ ಫೇಮಸ್ ಆಗಿರುವ ಅಲೋಕ್ ಬಾಬು ಅಲಿಯಾಸ್ ಆಲ್‍ಓಕೆ ಬಾಬು ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ.
ಹೌದು, 2019ರಲ್ಲಿ ತಮ್ಮ ಬಾಲ್ಯದ ಗೆಳತಿ ನಿಷಾ ಜೊತೆ ಸಪ್ತಪದಿ ತುಳಿದ ಅಲೋಕ್ ಬಾಬು ಇದೀಗ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಗಿನ ಜಾವ 2.14ಕ್ಕೆ ನಿಷಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರು ಕ್ಷೇಮವಾಗಿದ್ದಾರೆ ಎಂದು ಅಲೋಕ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: WhatsApp, Facebook, Instagram 9 ಗಂಟೆ ಬಂದ್ – ಜುಕರ್‌ಬರ್ಗ್‌ಗೆ 44 ಸಾವಿರ ಕೋಟಿ ನಷ್ಟ
ಸದ್ಯ ತಂದೆಯಾಗಿರುವ ಅಲೋಕ್ ಬಾಬು, ಪತ್ನಿ ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ನಿಷಾ ಬೇಬಿ ಬಂಪ್‍ನಲ್ಲಿ ಕಾಣಿಸಿಕೊಂಡಿದ್ದು, ಅಲೋಕ್ ಪತ್ನಿಯ ಬೇಬಿ ಬಂಪ್ ತೋರಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ನಮಸ್ಕಾರ, ನಮಗೆ ಇಂದು ಗಂಡು ಮಗು ಜನಿಸಿರುವ ವಿಚಾರವನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಆರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು, ಹರಸಿ, ಹಾರೈಸಿ, ಕೈ ಹಿಡಿದು, ಬೆಳೆಸಿ ಈ ನಮ್ಮ ಪುಟ್ಟ ಕಂದನನ್ನು, ಇನ್ಮುಂದೆ ಇವನು ನಿಮ್ಮ ಸ್ವತ್ತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR
View this post on Instagram
ಕನ್ನಡದಲ್ಲಿ ಹಲವಾರು ರ‍್ಯಾಪ್ ಸಾಂಗ್ ಹಾಡಿರುವ ಅಲೋಕ್ ಬಾಬು ಅವರು ಇತ್ತೀಚೆಗೆ ಹಾಡಿದ್ದ ಹ್ಯಾಪಿ ಆಗಿದೆ ರ‍್ಯಾಪ್ ಸಾಂಗ್ ಸಿಕ್ಕಾಪಟ್ಟೆ ಜನಪ್ರಿಯಗೊಂಡಿತ್ತು. ಈ ಮುನ್ನ ನಿರ್ದೇಶಕ ಶಿವಮಣಿ ಆ್ಯಕ್ಷನ್ ಕಟ್ ಹೇಳಿದ್ದ 2009ರಲ್ಲಿ ತೆರೆಕಂಡಿದ್ದ ಜೋಶ್ ಸಿನಿಮಾದಲ್ಲಿ ಅಲೋಕ್ ಬಾಬು ಅಭಿನಯಿಸಿದ್ದರು.