ದಕ್ಷಿಣ ಭಾರತದ ಖ್ಯಾತ ನಟಿ, ಕನ್ನಡದವರೇ ಆಗಿರುವ ಪ್ರಿಯಾಮಣಿ (Priyamani) ತಮ್ಮ ಮದುವೆ ಬಗ್ಗೆ ಈಹೊತ್ತಿನವರೆಗೂ ಮನಬಿಚ್ಚಿ ಮಾತನಾಡಿರಲಿಲ್ಲ. ಅವರು ಮುಸ್ಲಿಂ (Muslim) ಹುಡುಗನನ್ನು ಮದುವೆಯಾದರು (Marriage) ಎನ್ನುವ ಕಾರಣಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಟ್ರೋಲ್ ಗೆ ಗುರಿಯಾಗಿದ್ದಾರೆ. ಲವ್ ಜಿಹಾದ್ ಮಾತುಗಳನ್ನೂ ಎದುರಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ಪರಭಾಷಾ ಮಾಧ್ಯಮವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ.
Advertisement
ಬೆಂಗಳೂರಿನಲ್ಲೇ ನೆಲೆಸಿರುವ ಪ್ರಿಯಾಮಣಿ, 2017ರಲ್ಲಿ ತಾವು ಮೆಚ್ಚಿದ್ದ ಮುಸ್ತಫಾ (Mustafa) ಎನ್ನುವವರ ಜೊತೆ ಬೆಂಗಳೂರಿನಲ್ಲಿ ರೆಜಿಸ್ಟರ್ ಮದುವೆಯಾದರು. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಮುಸ್ತಫಾ ಮತ್ತು ಪ್ರಿಯಾಮಣಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಮುಸ್ತಫಾ ಅವರಿಗೆ ಇದು ಎರಡನೇ ಮದುವೆ ಆಗಿದ್ದರಿಂದ ಮತ್ತಷ್ಟು ನೋವುಗಳನ್ನು ಅನುಭವಿಸಬೇಕಾದ ಪ್ರಸಂಗವೂ ಪ್ರಿಯಾಮಣಿ ಮುಂದಿತ್ತು. ಎಲ್ಲವನ್ನೂ ಎದುರಿಸಿಕೊಂಡೆ ಅವರೇ ಸಿನಿಮಾ ರಂಗದಲ್ಲಿ ಮುಂದುವರೆದರು.
Advertisement
Advertisement
ಇದೇ ಮೊದಲ ಬಾರಿಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಪ್ರಿಯಾಮಣಿ, ‘ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದನ್ನು ನೆನಪಿಸಿದ್ದಾರೆ. ಮುಸ್ಲಿಂ ಎಲ್ಲರನ್ನೂ ಉಗ್ರರು ಎನ್ನುವಂತೆ ನೋಡಲಾಗುತ್ತಿದೆ. ಅವರಿಗೆ ಹುಟ್ಟುವ ಮಕ್ಕಳು ಜಿಹಾದಿಗಳು ಆಗಿರಲ್ಲ. ಮುಸ್ಲಿಂ ಎಲ್ಲರೂ ಲವ್ ಜಿಹಾದ್ (Love Jihad) ಮಾಡಲ್ಲ’ ಎನ್ನುವುದನ್ನು ನೆನಪಿಸಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್
Advertisement
ಅನ್ಯ ಧರ್ಮೀಯರನ್ನು ಇಷ್ಟಪಟ್ಟು ಮದುವೆ ಆಗುವುದೇ ತಪ್ಪು ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ನಾನು ಯಾರನ್ನು ಇಷ್ಟಪಟ್ಟೆನೋ ಅವರನ್ನು ಮದುವೆಯಾಗಿದ್ದೇನೆ. ಪ್ರೀತಿಯಲ್ಲಿ ಜಾತಿ, ಧರ್ಮಗಳು ಇರುವುದಿಲ್ಲ. ಬೇರೆ ಧರ್ಮ ಅಥವಾ ಜಾತಿಯವರನ್ನು ಮದುವೆಯಾದರೆ ಏನು ತಪ್ಪು?’ ಎಂದು ಪ್ರಶ್ನೆ ಮಾಡಿದ್ದಾರೆ ಪ್ರಿಯಾಮಣಿ.
ನನ್ನ ಮದುವೆಯನ್ನು ಹಲವರು ವಿರೋಧಿಸಿದರು. ಕೆಲವರು ಒಪ್ಪಿದರು. ನಾನು ನನ್ನ ಹುಡುಗನನ್ನು ಮತ್ತು ಮದುವೆಯನ್ನು ಒಪ್ಪಿಕೊಳ್ಳಿ ಎಂದು ಯಾವತ್ತೂ ಹೇಳಿಲ್ಲ. ಒಪ್ಪುವುದು ಮತ್ತು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ, ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಿದ್ದೇನೆ ಎನ್ನುವ ಕಾರಣಕ್ಕಾಗಿ ಹಿಂಸೆ ನೀಡುವುದು ಸರಿಯಲ್ಲ. ನಾನು ಆಧುನಿಕ ಭಾರತದಲ್ಲಿ ಬದುಕುತ್ತಿದ್ದೇವೆ. ಭಾರತ ಜಾತ್ಯತೀತ ರಾಷ್ಟ್ರ ಎಂದಿದ್ದಾರೆ ಪ್ರಿಯಾಮಣಿ.
Web Stories