ಬೆಂಗಳೂರು: ಮಂಗಳೂರು ಬ್ಯಾಂಕ್ ದರೋಡೆ (Mangaluru Bank Robbery Case) ಕೇಸ್ ನಲ್ಲಿ ಎಲ್ಲಾ ಹಣ ಮತ್ತು ಚಿನ್ನಾಭರಣಗಳನ್ನ ರಿಕವರಿ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಂಗಳೂರು ದರೋಡೆ ಕೇಸ್‌ನಲ್ಲಿ 6 ಜನರು ಇದ್ದಾರೆ ಎಂದು ಮಾಹಿತಿ ಇತ್ತು. ಈಗಾಗಲೇ 3 ಜನರ ಬಂಧನ ಮಾಡಲಾಗಿದೆ. 10-12 ಕೋಟಿ ಹಣ ಮತ್ತು ಬಂಗಾರವನ್ನು ರಿಕವರಿ ಮಾಡಿದ್ದೇವೆ. ಉಳಿದವರ ಹುಡುಕಾಟಕ್ಕೆ ತನಿಖೆ ನಡೆಯುತ್ತಿದೆ. ಅವರ ಲೊಕೇಶನ್ ಕೂಡ ಪತ್ತೆ ಹಚ್ಚಲಾಗಿದೆ. ಅವರನ್ನು ಬೇಗ ಅರೆಸ್ಟ್ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್ ಅಲಿಗೆ ಹೇಳಿದ್ದೇನು?
Advertisement
ದರೋಡೆ ಕೇಸ್‌ನಲ್ಲಿ ಸ್ಥಳೀಯರ ಕೈವಾಡ ಇದೆ ಎಂಬ ಬಿಜೆಪಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ತನಿಖೆ ಆಗುತ್ತದೆ.ಬಿಜೆಪಿ ಶಾಸಕರಿಗೆ ಗೊತ್ತಿದ್ದರೆ ಮೊದಲೇ ಹೇಳಬೇಕಿತ್ತು. ಈಗ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲಾ ಗೊತ್ತಾಗುತ್ತದೆ. ಬೀದರ್ ಎಟಿಎಂ ದರೋಡೆ ಕೇಸ್‌ನಲ್ಲಿ ಬಹಳ ಹತ್ತಿರದಲ್ಲಿ ಬಂದಿದ್ದೇವೆ. ಯುಪಿಯಿಂದಲೇ ಬೈಕ್ ತಂದಿದ್ದಾರೆ ಎಂಬ ಮಾಹಿತಿ ಇದೆ. ಆದಷ್ಟು ಬೇಗ ಈ ಕೇಸ್ ಕೂಡಾ ಇತ್ಯರ್ಥ ಮಾಡುತ್ತೇವೆ ಎಂದರು. ಇದನ್ನೂ ಓದಿ: ಲಾರಿ, ಕಾರು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಜೆಸ್ಕಾಂ ಸಿಬ್ಬಂದಿ ಸಾವು
Advertisement
Advertisement
ಕರ್ನಾಟಕ ದರೋಡೆ ರಾಜ್ಯ ಆಗುತ್ತಿದೆ ಎಂಬ ಬಿಜೆಪಿ ಮತ್ತು ವಿಪಕ್ಷ ನಾಯಕ ಅಶೋಕ್ ಆರೋಪದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಅವರ ಕಾಲದಲ್ಲಿ ಯಾವ ರಾಜ್ಯ ಇತ್ತು. ಅವರ ಸರ್ಕಾರದಲ್ಲಿ ಯಾವ ರಾಜ್ಯ ಇತ್ತು ಎಂದು ಅಂಕಿಅಂಶಗಳ ಸಮೇತ ಹೇಳುತ್ತೇನೆ. ಅವರು ಹೇಳೋದು ಹೇಳಲಿ. ಅವರ ಕಾಲದಲ್ಲಿ ಯಾವ ರಾಜ್ಯ ಇತ್ತು ಎಂದು ಸಮಯ ಬಂದಾಗ ಅಂಕಿಅಂಶಗಳ ಸಮೇತ ಹೇಳುತ್ತೇನೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಕಾರಿನಲ್ಲಿ ಹಣ ಇದ್ದಿದ್ದು ಬಿಜೆಪಿಯವರು ನೋಡಿದ್ರಾ? -ಪರಮೇಶ್ವರ್ ಪ್ರಶ್ನೆ
Advertisement