ನಟ, ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ದಳಪತಿ (Vijay Thalapathy) ವಿರುದ್ಧ ಅಖಿಲ ಭಾರತ ಮುಸ್ಲಿಂ ಜಮಾತ್ ಫತ್ವಾ (Fatwa) ಹೊರಡಿಸಿದೆ. ಮುಸ್ಲಿಂ ಸಮುದಾಯದ ಯಾರು ಕೂಡ ವಿಜಯ್ ಜೊತೆ ನಿಲ್ಲದಂತೆ ಮನವಿ ಮಾಡಿಕೊಂಡಿದೆ.
ಮುಸ್ಲಿಮರನ್ನು ವಿಜಯ್ ನಕಾರಾತ್ಮಕವಾಗಿ ಬಿಂಬಿಸಿದ್ದಾರೆ. ಜೂಜುಕೋರರು ಮತ್ತು ಮದ್ಯ ಗ್ರಾಹಕರನ್ನು ತಮ್ಮ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದರಿಂದ ಫತ್ವಾ ಹೊರಡಿಸಲಾಗಿದೆ ಎಂದು ಎಐಎಂಜೆ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ನಟಿಸಲು ಹಲವು ಕಥೆಗಳನ್ನು ಕೇಳಿದ್ದೆ, ಯಾವುದು ಇಷ್ಟವಾಗಿಲ್ಲ: ಪೂಜಾ ಹೆಗ್ಡೆ
ನಟ ವಿಜಯ್ ರಾಜಕೀಯ ಪಕ್ಷವನ್ನು ರಚಿಸಿದ್ದಾರೆ. ಮುಸ್ಲಿಮರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಆದರೆ, ಅವರು ತಮ್ಮ ಚಲನಚಿತ್ರಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದನೆ ಹರಡುವವರಂತೆ ನಕಾರಾತ್ಮಕ ರೀತಿಯಲ್ಲಿ ಬಿಂಬಿಸಿದ್ದರು ಎಂದು ರಜ್ವಿ ಆರೋಪಿಸಿದ್ದಾರೆ.
ಅವರು ಈಚೆಗೆ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಜೂಜುಕೋರರು ಮತ್ತು ಮದ್ಯ ಸೇವಿಸುವವರನ್ನು ಆಹ್ವಾನಿಸಲಾಗಿತ್ತು. ಇದೆಲ್ಲದರಿಂದ ತಮಿಳುನಾಡಿನ ಸುನ್ನಿ ಮುಸ್ಲಿಮರು ಅವರ ಮೇಲೆ ಕೋಪಗೊಂಡಿದ್ದಾರೆ. ಅವರು ಫತ್ವಾ ಕೇಳಿದರು. ಹೀಗಾಗಿ, ಮುಸ್ಲಿಮರು ವಿಜಯ್ ಜೊತೆ ನಿಲ್ಲಬಾರದು ಎಂದು ಉಲ್ಲೇಖಿಸಿ ಫತ್ವಾ ಹೊರಡಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಫ್ಯಾನ್ಸ್‌ಗೆ ಪತ್ರ ಬರೆದ ನಜ್ರಿಯಾ
ನಟ, ರಾಜಕಾರಣಿ ವಿಜಯ್ ಅವರಿಗೆ ಮುಸ್ಲಿಮರಿಂದ ಬೆದರಿಕೆ ಇದೆ ಎಂದು ಕೇಂದ್ರದಿಂದ ವೈ-ಭದ್ರತೆ ಕೋರಲಾಗಿದೆಯೆಂದು ಪ್ರತಿಸ್ಪರ್ಧಿಗಳು ಆರೋಪಿಸಿದ್ದರು. ಇದರ ಬೆನ್ನಲ್ಲೇ ವಿವಾದ ಭುಗಿಲೆದ್ದಿತ್ತು.
ವಿಜಯ್ ತಮ್ಮ ‘ಕಥಿ’ ಮತ್ತು ‘ಬೀಸ್ಟ್’ ಚಿತ್ರಗಳಲ್ಲಿ ಮುಸ್ಲಿಮರನ್ನು ನಕಾರಾತ್ಮಕವಾಗಿ ತೋರಿಸಿದ್ದಾರೆ. ಆದ್ದರಿಂದ, ನಟನಿಗೆ ಮುಸ್ಲಿಮರಿಂದ ಬೆದರಿಕೆ ಬರಬಹುದು ಎಂದು ವಿಜಯ್ ಮತ್ತು ಟಿವಿಕೆ, ಗೃಹ ಸಚಿವಾಲಯದಿಂದ ರಕ್ಷಣೆ ಕೋರಿದ್ದಾರೆ ಎಂದು ವಿಸಿಕೆ ವಕ್ತಾರ ವನ್ನಿಯರಸು ಹೇಳಿದ್ದರು. ಇದನ್ನೂ ಓದಿ: ಪೀರಿಯಡ್ಸ್ ಬಗ್ಗೆ ಸಮಂತಾ ಓಪನ್ ಟಾಕ್
ಆದರೆ, ಟಿವಿಕೆ ಮತ್ತು ಮಿತ್ರ ಪಕ್ಷ ತಮಿಳುನಾಡು ಮುಸ್ಲಿಂ ಲೀಗ್ ಈ ಆರೋಪಗಳನ್ನು ನಿರಾಕರಿಸಿದೆ. ಇದು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಮುಸ್ಲಿಮರನ್ನು ಟಿವಿಕೆಯಿಂದ ದೂರವಿಡಲು ಮಾಡಿದ ತಂತ್ರವಾಗಿದೆ ಎಂದು ಆರೋಪಿಸಿದೆ.