ಬೆಂಗಳೂರು: ಮಹಿಳಾ ಅಧಿಕಾರಿಗಳ ಜಡೆ ಜಗಳ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇಬ್ಬರು ಮಹಿಳಾಧಿಕಾರಿಗಳು ಸೋಮವಾರ ಕೂಡಾ ಕೆಸರೆರೆಚಾಟ ಮುಂದುವರಿಸಿದ್ದಾರೆ.
ಡಿ ರೂಪಾ (D Roopa) ಅವರ ಆರೋಪಗಳಿಗೆ ಇದೇ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಆಲ್ ಐ ಕ್ಯಾನ್ ಸೇ ಗೆಟ್ ವೆಲ್ ಸೂನ್ (All I Can Say Get Well Soon) ಎಂದು ಡಿ ರೂಪಾಗೆ ಟಾಂಗ್ ಕೊಟ್ಟಿದ್ದಾರೆ.
ರೂಪಾ ಮಾಡಿದ ಆರೋಪದ ಬಗ್ಗೆ ಮಾಧ್ಯಮಗಳಿಗೆ ಜಾಲಹಳ್ಳಿಯ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ರೋಹಿಣಿ ಸಿಂಧೂರಿ, ಇದು ಬಹಿರಂಗವಾಗಿ ಮಾತನಾಡುವ ವಿಚಾರ ಅಲ್ಲ. ಸೂಕ್ತವಾದ ಕಡೆಯಲ್ಲೇ ಮಾತಾಡುತ್ತೇನೆ. ಈ ರೀತಿ ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ. ಪ್ರೊಫೆಷನಲ್ ವಿಚಾರ ಮಾತಾಡಲಿ ಆದರೆ ಪರ್ಸನಲ್ ವಿಚಾರ ಮಾತಾಡುವಾಗ ಎಚ್ಚರ ಇರಬೇಕು ಎಂದು ರೂಪಾಗೆ ರೋಹಿಣಿ ಎಚ್ಚರಿಕೆ ನೀಡಿದ್ದಾರೆ.
ರೂಪಾ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ರೋಹಿಣಿ, ರೂಪಾ ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಪತ್ರದ ಮೂಲಕ ಆಕ್ರೋಶ ಹೊರಹಾಕಿದ್ದರು. ರೋಹಿಣಿ ಇದೀಗ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡುವಾಗ ಬೇಗ ಗುಣ ಆಗಲಿ ಎಂದು ಹೇಳುವ ಮೂಲಕ ರೂಪಾ ಕಾಲೆಳೆದಿದ್ದಾರೆ. ಇದನ್ನೂ ಓದಿ: ರೂಪಾ ಮೌದ್ಗಿಲ್ ವಿರುದ್ಧ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿ
ಸಿಎಸ್ಗೆ ದೂರು: ವಿಧಾನಸೌಧ ಅಂಗಳಕ್ಕೆ ಐಪಿಎಸ್, ಐಎಎಸ್ ಕಿತ್ತಾಟ ತಲುಪಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರನ್ನು ಅವರನ್ನು ಭೇಟಿಯಾಗಿ ರೋಹಿಣಿ ದೂರು ಸಲ್ಲಿಕೆ ಮಾಡಿ ರೂಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರಿ ಉದ್ಯೋಗಿಯಾಗಿರುವ ಕಾರಣ ನಾನು ಮಾಧ್ಯಮಗಳ ಜೊತೆ ಮಾತನಾಡುವಂತಿಲ್ಲ. ನಾನು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಇಲ್ಲ. ರೂಪಾ ಆರೋಪಕ್ಕೆ ಸಂಬಂಧಿಸಿದಂತೆ ನಾನು ದಾಖಲೆಯನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಧರ್ಮಪತ್ನಿಯ ತೇಜೋವಧೆ ಮಾಡಿದ್ದಾರೆ – ರೂಪಾ ವಿರುದ್ಧ ದೂರು ಕೊಟ್ಟ ಸಿಂಧೂರಿ ಪತಿ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k