ಒಂದೆಡೆ ಆರ್ಥಿಕತೆಯಿಂದ ಬಳಲುತ್ತಿರುವ ಪಾಕಿಸ್ತಾನ (Pakistan), ಚೀನಾ ಸಹಾಯದಿಂದ ತನ್ನ ಸೇನಾ ಬಲವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಹಿಂದೆ ಭಾರತದ ರಫೇಲ್ ಯುದ್ಧ ವಿಮಾನಕ್ಕೆ ಪ್ರಸ್ಪರ್ಧಿಯಾಗಿ ನಿಲ್ಲಲು ಮಿತ್ರ ರಾಷ್ಟ್ರ ಚೀನಾ ಜೆ-10ಸಿ ಫೈಟರ್ ಜೆಟ್ ನೀಡಿತ್ತು. ಅಲ್ಲದೇ ಇತ್ತೀಚೆಗೆ ಚೀನಾದ ಆಧುನಿಕ ತಂತ್ರಜ್ಞಾನ ಹೊಂದಿರುವ ಯುದ್ಧ ವಿಮಾನಗಳನ್ನು ಖರೀದಿಸಲು ಸಕಲ ತಯಾರಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ ಸಹ ತನ್ನ ವಾಯುಪಡೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದ್ದು ಅಮೆರಿಕಾದಿಂದ F-35 ಯುದ್ಧ ವಿಮಾನಗಳನ್ನು (Fighter Jets) ಖರೀದಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ನಡುವೆ ಪಾಕಿಸ್ತಾನಕ್ಕಾಗಿ ಚೀನಾ ಮೊದಲ ʻಹ್ಯಾಂಗೋರ್ʼ ಜಲಾಂತರ್ಗಾಮಿ (Hangor Submarine) ನೌಕೆಯನ್ನು ನೀಡಲು ಮುಂದಾಗಿದ್ದು ವುಹಾನ್ ಹಡಗುಕಟ್ಟೆಯಲ್ಲಿ ಕೆಲಸ ಪ್ರಾರಂಭಿಸಿದೆ. 2028ರ ವೇಳೆಗೆ ತನ್ನ ನೌಕಾಪಡೆಗೆ ಸೇರಿಸಿಕೊಳ್ಳಲು ಸಜ್ಜಾಗಿರುವ 8 ಹ್ಯಾಂಗೋರ್ ಜಲಾಂತರ್ಗಾಮಿ ನೌಕೆಗಳಲ್ಲಿ ಇದು ಮೊದಲನೆಯದ್ದಾಗಿದೆ. ಅಷ್ಟಕ್ಕೂ ʻಹ್ಯಾಂಗೋರ್-ಕ್ಲಾಸ್ʼ ಜಲಾಂತರ್ಗಾಮಿ ಹೇಗಿದೆ? ಸಮುದ್ರದಾಳದಲ್ಲಿ ಎಷ್ಟು ನೀರಿನ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ? ಇದೆಲ್ಲವನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
Advertisement
Advertisement
ಜಲಾಂತರ್ಗಾಮಿ ಎಂದರೇನು?
ಜಲಾಂತರ್ಗಾಮಿ ನೌಕೆ ಅಂದ್ರೆ ನೀರಿನಲ್ಲಿ ಮುಳುಗಿ ಪ್ರಯಾಣ ಮಾಡಲು ಬಳಸುವ ಒಂದು ವಾಹನ. ವಿವಿಧ ದೇಶಗಳ ನೌಕಾ ದಳದಲ್ಲಿ ಜಲಾಂತರ್ಗಾಮಿ ನೌಕೆಗಳೂ ಒಂದು. 2017 ರಲ್ಲಿ ತೆರೆ ಕಂಡ ʻಗಾಝೀ ಅಟ್ಯಾಕ್ʼ ಸಿನಿಮಾ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ನೌಕಾಪಡೆ (Navy) ಯುದ್ಧಗಳಿಗೆ ಯಾವ ರೀತಿ ಜಲಾಂತರ್ಗಾಮಿಗಳನ್ನು ಬಳಸುತ್ತಾರೆ? ಸಮುದ್ರದ ಆಳಕ್ಕೆ ಹೋದಂತೆ ನೀರಿನ ವೇಗ ಎಷ್ಟಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮೊದಲ ವಿಶ್ವಯುದ್ಧದ (World War) ಸಂದರ್ಭದಲ್ಲಿ ಮೊದಲ ಬಾರಿಗೆ ಇದನ್ನು ಬಳಸಲಾಗಿತ್ತು.
Advertisement
Advertisement
ಹ್ಯಾಂಗೋರ್ ಜಲಾಂತರ್ಗಾಮಿಯ ವಿಶೇಷತೆ ಏನು?
ಹ್ಯಾಂಗೋರ್-ಕ್ಲಾಸ್ ಜಲಾಂತರ್ಗಾಮಿಯು ಚೀನಾದ ʻ039A ಯುವಾನ್ ಕ್ಲಾಸ್ʼ ಜಲಾಂತರ್ಗಾಮಿಯ ರೂಪಾಂತರವಾಗಿದೆ. ಸುಧಾರಿತ ಸ್ಟೆಲ್ತ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಜಲಾಂತರ್ಗಾಮಿ ಎಂತಹ ವಾತಾವರಣದಲ್ಲೂ ದಾಳಿಗಳನ್ನು ಸಮರ್ಥವಾಗಿ ಎದುರಿಸುತ್ತದೆ. ಅಲ್ಲದೇ ನಿರ್ದಿಷ್ಟ ಗುರಿಯೊಂದಿಗೆ ಶತ್ರುಗಳನ್ನು ಬಗ್ಗು ಬಡಿಯುವ ಸಾಮರ್ಥ್ಯ ಹೊಂದಿರುವ ಈ ನೌಕೆ, ಡೀಸೆಲ್ ಮತ್ತು ಎಲೆಕ್ಟ್ರಿಕ್ ಇಂಜಿನ್‌ಗಳ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಜಲಾಂತರ್ಗಾಮಿಗೆ ನಿಷ್ಕ್ರಿಯಗೊಳಿಸಲಾಗಿದ್ದ ʻಪಿಎಸ್‌ಎನ್ ಹ್ಯಾಂಗೋರ್ʼ (PSN Hangor) ನೌಕೆಯ ಹೆಸರನ್ನೇ ಇಡಲಾಗಿದೆ. ಇದೇ ಹೆಸರಿನ ನೌಕೆ 1971ರ ಯುದ್ಧದ ಸಂದರ್ಭದಲ್ಲಿ ಭಾರತೀಯ ಯುದ್ಧನೌಕೆ ʻಐಎನ್‌ಎಸ್ ಖುಕ್ರಿʼಯನ್ನು ಮುಳುಗಿಸಿತ್ತು.
ಡೀಸೆಲ್ ಮತ್ತು ಎಲೆಕ್ಟ್ರಿಕ್ ಈ ವ್ಯವಸ್ಥೆಯು ಪ್ರೊಪಲ್ಷನ್ ಮೋಡ್ ಅನ್ನು ಸೂಚಿಸುತ್ತದೆ. ಪ್ರೊಪಲ್ಷನ್ ಮೋಡ್ ಅಂದ್ರೆ ವಸ್ತುವಿನ ಚಲನೆಗೆ ಸಹಕರಿಸುವ ಪ್ರಕ್ರಿಯೆಯಾಗಿದೆ. ಡೀಸೆಲ್ ಇಂಜಿನ್‌ಗಳು ಮೇಲ್ಮುಖವಾದಾಗ ಅಥವಾ ಸ್ನಾರ್ಕ್ಲಿಂಗ್ ಮಾಡುವಾಗ (ಸ್ನಾರ್ಕ್ಲಿಂಗ್ ಎಂದರೆ ನೌಕೆ ಕಾರ್ಯನಿರ್ವಹಿಸಲು ಗಾಳಿಯ ಅಗತ್ಯವಿರುವಂತೆ ನೋಡಿಕೊಳ್ಳುವುದು) ಗಾಳಿಯನ್ನ ಲಿಕ್ಟಿಡ್ ಆಗಿ ಪರಿವರ್ತಿಸಿ ಜಲಾಂತರ್ಗಾಮಿ ನೌಕೆಗೆ ಶಕ್ತಿ ನೀಡುತ್ತದೆ. ಅಲ್ಲದೇ ಡೀಸೆಲ್ ಇಂಜಿನ್‌ನಿಂದ ಚಾರ್ಜ್ ಮಾಡಲಾದ ಬ್ಯಾಟರಿಯು ನೌಕೆ ಮುಳುಗಿದ ಸಂದರ್ಭದಲ್ಲಿ ಎಲೆಕ್ಟ್ರಿಕ್ ಇಂಜಿನ್‌ನೊಂದಿಗೆ ಕೆಲಸ ಮಾಡಲು ಸಹಾಯಕವಾಗುತ್ತದೆ. ಅದಕ್ಕಾಗಿಯೇ ಹ್ಯಾಂಗೋರ್‌ಗೆ 4 ಡೀಸೆಲ್ ಇಂಜಿನ್‌ಗಳ ವ್ಯವಸ್ಥೆ ಮಾಡಲಾಗಿದೆ. ನ್ಯೂಕ್ಲಿಯರ್ ನೌಕೆಗಳ ಚಲನೆಯು ಶತ್ರು ಸೇನೆಗಳಿಗೆ ಡಿಕೆಕ್ಟ್ ಮಾಡಲು ಸಹಾಯಕವಾಗುತ್ತದೆ. ಇದರಿಂದ ಎದರಾಳಿಗಳು ನಮ್ಮಿಂದ ಎಷ್ಟು ಅಂತರದಲ್ಲಿದ್ದಾರೆ? ಟಾರ್ಪಿಡೋ (ನೀರಿನೊಳಗೆ ಉಡಾವಣೆ ಮಾಡುವ ಮಿಸೈಲ್) ಲಾಂಚ್ ಮಾಡಿದಾಗ ಎಷ್ಟು ದೂರದಲ್ಲಿ-ಯಾವ ಕಡೆಗೆ ಬರುತ್ತಿದೆ? ಎಂಬುದನ್ನು ಡಿಟೆಕ್ಟರ್ ಮೂಲಕ ತಿಳಿಯಬಹುದು. ಆದ್ರೆ ಡೀಸೆಲ್ ಆಕ್ಸಿಜನ್ ಜಲಾಂತರ್ಗಾಮಿಯಲ್ಲಿ ಎದುರಾಳಿಯನ್ನು ಗುರುತಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಈ ನೌಕೆಯಲ್ಲಿ ಟಾರ್ಪಿಡೋಗಳ ಬಳಕೆಗೆ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಹ್ಯಾಂಗೋರ್ 21 ಇಂಚಿನ 6 ಟಾರ್ಪಿಡೋಗಳನ್ನು ಏಕಕಾಲಕ್ಕೆ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಜೊತೆಗೆ ನೌಕಾ ವಿರೋಧಿ ಕ್ಷಿಪಣಿಗಳನ್ನು ಭಸ್ಮಮಾಡುವ ಶಕ್ತಿಯಿದೆ. ಅಲ್ಲದೇ 450 ಕಿಮೀ ವ್ಯಾಪ್ತಿಯ ವರೆಗೂ ಶತ್ರು ಸೇನೆಯನ್ನು ಹುಡುಕಿ ಕೊಲ್ಲುವ ಬಾಬರ್-3 ಸಬ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನೂ ಒಳಗೊಂಡಿದೆ.
ಹ್ಯಾಂಗೋರ್ ಸಾಮರ್ಥ್ಯ ಎಷ್ಟಿದೆ?
ಪಾಕಿಸ್ತಾನಕ್ಕಾಗಿ ಚೀನಾ ನಿರ್ಮಿಸಿರುವ ಜಲಾಂತರ್ಗಾಮಿ ನೌಕೆಯು ಭಾರತದ ʻಕಲಾವರಿʼ ನೌಕೆಯ ಮಾದರಿಯಲ್ಲೇ ನಿರ್ಮಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಭಾರತವು ಪ್ರಸ್ತುತ 6 ಕಲಾವರಿ ಜಲಾಂತರ್ಗಾಮಿಗಳನ್ನು ನೌಕಾಪಡೆಗೆ ನಿಯೋಜಿಸಿದ್ದು, 2030ರ ವೇಳೆಗೆ ಇನ್ನೂ ಮೂರು ನೌಕೆಯನ್ನು ಸೇರ್ಪಡೆ ಮಾಡಿಕೊಳ್ಳಲಿದೆ. ಕಲಾವರಿ ಜಲಾಂತರ್ಗಾಮಿಯು 67.5 ಮೀ. ಉದ್ದದ್ದಷ್ಟಿದ್ದು, 1,775 ಟನ್ ತೂಕ ಸಾಗಿಸುವ ಸಾಮರ್ಥ್ಯ ಹೊಂದಿದೆ. ಆದ್ರೆ ಹ್ಯಾಂಗೋರ್ 76 ಮೀಟರ್ ಉದ್ದ, 8.4 ಮೀಟರ್ ಅಗಲವಿದ್ದು, 2,800 ಟನ್‌ಗಳಷ್ಟು ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಗಂಟೆಗೆ 20 ನಾಟ್ಸ್ (37 ಕಿಮೀ) ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಟೈಟಾನಿಕ್ ಅವಶೇಷ ನೋಡಲು ಹೋದವರ ಕಥೆ ಏನಾಯ್ತು?
ಸಮುದ್ರದ ತಳಕ್ಕೆ ಹೋಗೋದು ತುಂಬಾನೇ ಕಷ್ಟ. ಏಕೆಂದರೆ, ಸಮುದ್ರದ ಆಳಕ್ಕೆ ಇಳಿದಂತೆಲ್ಲಾ ಒತ್ತಡ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ, ಭಾರೀ ಪ್ರಮಾಣದ ಒತ್ತಡವನ್ನು ತಡೆದುಕೊಳ್ಳುವಂತಹ ಸುಭದ್ರ ಜಲಾಂತರ್ಗಾಮಿ ನೌಕೆಯನ್ನ ನಿರ್ಮಾಣ ಮಾಡಬೇಕು. ಇಲ್ಲವಾದ್ರೆ ಸಮುದ್ರದ ಆಳದಲ್ಲೇ ನೌಕೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. 2023ರ ಜೂನ್‌ನಲ್ಲಿ ಒಂದು ದುರಂತ ಸಂಭವಿಸಿತ್ತು. ಅಮೆರಿಕದ ಓಷನ್ ಗೇಟ್ ಸಂಸ್ಥೆ ಟೈಟನ್ ಹೆಸರಿನ ಒಂದು ಸಬ್‌ಮರಿನ್ ಅಭಿವೃದ್ದಿಪಡಿಸಿತ್ತು. ಈ ನೌಕೆಯು ಟೈಟಾನಿಕ್ ಹಡಗಿನ ಅವಶೇಷವನ್ನ ನೋಡೋದಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಕೆಲಸ ಮಾಡುತ್ತಿತ್ತು. ಆದರೆ, ತಾಂತ್ರಿಕ ಕಾರಣದಿಂದ ಈ ನೌಕೆ ಸಮುದ್ರದ ಆಳದಲ್ಲಿ ಸ್ಫೋಟಗೊಂಡಿತ್ತು. ಈ ನೌಕೆ ಒಳಗಿದ್ದ ಐವರು ಶ್ರೀಮಂತರೂ ಸಾವನ್ನಪ್ಪಿದ್ದರು. ಹೀಗಾಗಿ, ಈ ರೀತಿಯ ಯಾವುದೇ ಅನಾಹುತ ಸಂಭವಿಸಿದ ರೀತಿಯಲ್ಲಿ ಭಾರತದ ವಿಜ್ಞಾನಿಗಳು ನೌಕೆಯನ್ನ ಅಭಿವೃದ್ಧಿ ಮಾಡುತ್ತಿದ್ದಾರೆ.
ಭಾರತ ಸಹ ಮಹತ್ವಾಕಾಂಕ್ಷಿ ಸಮುದ್ರಯಾನ ಯೋಜನೆ ಆರಂಭಕ್ಕೆ ಸಿದ್ಧತೆ ಶುರುವಾಗಿದೆ. ಬರೋಬ್ಬರಿ 6 ಸಾವಿರ ಮೀಟರ್ ಸಮುದ್ರದ ಆಳಕ್ಕೆ ಮೂವರು ಸಂಶೋಧಕರನ್ನ ಕಳಿಸಲು ಸಿದ್ಧತೆ ನಡೆಸುತ್ತಿದೆ. ಸದ್ಯದಲ್ಲೇ ಚೆನ್ನೈ ಕಡಲ ತೀರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಇದರ ಪರೀಕ್ಷೆಯೂ ನಡೆಯಲಿದೆ. ಈ ಸಬ್‌ಮರಿನ್ ಯೋಜನೆ ಯಶಸ್ವಿಯಾದರೆ, ಈ ಸಾಧನೆ ಮಾಡಿದ ವಿಶ್ವದ 6ನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಈವರೆಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ದೇಶಗಳು ಮಾತ್ರ ಇಂತಹ ಸಾಧನೆ ಮಾಡಿವೆ.
- ಮೋಹನ್ ಬನ್ನಿಕುಪ್ಪೆ