ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಬಾಕಿ ಉಳಿದಿದ್ದ ಒಟ್ಟು 24 ಪಶು ವೈದ್ಯಕೀಯ ಸೀಟುಗಳ ಹಂಚಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಂಗಳವಾರ (ಜ.6) ನಡೆಸಿತು.
ಕೋರ್ಸ್ ಶುಲ್ಕದ ಡಿ.ಡಿ. ಸಮೇತ 251 ಮಂದಿ ಇಂದಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ 18 ಮಂದಿ ಪಶು ವೈದ್ಯಕೀಯ ರ‍್ಯಾಂಕ್ ಹಾಗೂ 6 ಮಂದಿ ಪ್ರ್ಯಾಕ್ಟಿಕಲ್ ಪರೀಕ್ಷೆಯ ರ‍್ಯಾಂಕ್ ಹೊಂದಿದ್ದವರನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಯಿತು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.ಇದನ್ನೂ ಓದಿ: ಬ್ಯಾನರ್ ಗಲಾಟೆ | ಮೃತ `ಕೈ’ ಕಾರ್ಯಕರ್ತನ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ – ಸಚಿವ ಜಮೀರ್ ವಿರುದ್ಧ ಐಟಿಗೆ ದೂರು
ಬಳಿಕ ಅವರಿಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ನಾಳೆಯೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಯಿತು. ಈ ಮೂಲಕ ಎಲ್ಲ ಪಶು ವೈದ್ಯಕೀಯ ಸೀಟುಗಳು ಖಾಲಿಯಾದಂತಾಯಿತು ಎಂದು ಅವರು ವಿವರಿಸಿದರು.
ಕಲ್ಯಾಣ ಕರ್ನಾಟಕ ನೇಮಕಾತಿ: ತಾತ್ಕಾಲಿಕ ಅಂಕಪಟ್ಟಿ ಪ್ರಕಟ
ವಿವಿಧ ಇಲಾಖೆಗಳ ಕಲ್ಯಾಣ ಕರ್ನಾಟಕ ವೃಂದದ ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ಅರ್ಹರ ತಾತ್ಕಾಲಿಕ ಅಂಕಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಗಿಲ್ಲಿ ಜೊತೆ ಜಗಳಕ್ಕೆ ಬಿದ್ದ ರಾಶಿಕಾ; ಕಾರಣವೇನು ಗೊತ್ತಾ?

