ಲಕ್ನೋ: ಉತ್ತರ ಪ್ರದೇಶದ ಅಲಿಗಢ (Aligarh) ನಗರದ ಹೆಸರು ಹರಿಗಢ(Harigarh) ಎಂದು ಬದಲಾಗುತ್ತಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.
ಅಲಿಗಢ ಮಹಾನಗರ ಪಾಲಿಕೆ (Aligarh Municipal Corporation) ಕೈಗೊಂಡ ನಿರ್ಧಾರದಿಂದ ಈ ಪ್ರಶ್ನೆ ಈಗ ಎದ್ದಿದೆ. ಅಲಿಗಢ ಹೆಸರಿನ ಬದಲು ಹರಿಗಢ ಹೆಸರನ್ನು ನಾಮಕರಣ ಮಾಡಲು ಪಾಲಿಕೆ ನಿರ್ಣಯವನ್ನು ಪಾಸ್ ಮಾಡಿದೆ. ಮೊಬೈಲಿನಲ್ಲೇ ಲೇಟೆಸ್ಟ್ ಸುದ್ದಿ ಓದಲು ಪಬ್ಲಿಕ್ ಟಿವಿ ವಾಟ್ಸಪ್ ಚಾನೆಲಿಗೆ ಸೇರ್ಪಡೆಯಾಗಿ: ಪಬ್ಲಿಕ್ ಟಿವಿ ವಾಟ್ಸಪ್ ಚಾನೆಲ್
Advertisement
Advertisement
ಬಿಜೆಪಿಯ (BJP) ಪಾಲಿಕೆ ಸದಸ್ಯ ಸಂಜಯ್ ಪಂಡಿತ್ ಮಂಡಿಸಿದ ಪ್ರಸ್ತಾಪವನ್ನು ಪಾಲಿಕೆ ಒಪ್ಪಿಗೆ ಸೂಚಿಸಿದೆ. ಇದನ್ನೂ ಓದಿ: ಇಸ್ರೇಲ್ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಕರೆ ಮಾಡಿ ಇರಾನ್ ಅಧ್ಯಕ್ಷ ಮನವಿ
Advertisement
ಪಾಲಿಕೆಯಲ್ಲಿ ನಿರ್ಧಾರ ಕೈಗೊಂಡ ಮಾತ್ರಕ್ಕೆ ಹೆಸರು ಬದಲಾಗುವುದಿಲ್ಲ. ಇದು ಮೊದಲ ಹೆಜ್ಜೆಯಾಗಿದ್ದು ರಾಜ್ಯ ಸರ್ಕಾರ ಹೆಸರು ಬದಲಾವಣೆಗೆ ಒಪ್ಪಿಗೆ ನೀಡಿದ ಬಳಿಕವಷ್ಟೇ ಹೆಸರು ಅಧಿಕೃತವಾಗಿ ಬದಲಾಗಿದೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಪ್ರಶಾಂತ್ ಸಿಂಘಾಲ್, ನಿನ್ನೆ ಸಂಜಯ್ ಪಂಡಿತ್ ಮಂಡಿಸಿದ ಪ್ರಸ್ತಾಪದ ಬಗ್ಗೆ ಸಭೆ ನಡೆಯಿತು. ಈ ಪ್ರಸ್ತಾಪಕ್ಕೆ ಎಲ್ಲಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಈ ನಿರ್ಣಯವನ್ನು ನಾವು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಹರಿಗಢ ಹೆಸರನ್ನು ಇಡಲು ಒಪ್ಪಿಗೆ ಸೂಚಿಸಬಹುದು ಎಂಬ ನಂಬಿಕೆಯಿದೆ ಎಂದು ತಿಳಿಸಿದರು.