ಸೋಫಿಯಾ: 2023ರ ಅವಧಿಯಲ್ಲಿ ಅನ್ಯಗ್ರಹ ಜೀವಿಗಳ ದಾಳಿ (Alien Attack), ಸೋಲರ್ ಸುನಾಮಿಯಂತಹ (Solar Storm) ಅನೇಕ ಗಂಡಾ ತರಗಳಿಂದ ವಿಶ್ವ ನಾನಾ ರೀತಿಯ ತೊಂದರೆಗಳನ್ನು ಎದುರಿಸಲಿದೆ ಎಂದು ನಾಸ್ಟ್ರಾಡಾಮಸ್ (Nostradamus) ಮಹಿಳೆ ಎಂದೇ ಹೆಸರಾಗಿರುವ ಬಾಬಾ ವಂಗಾ (Baba Vanga) ಭವಿಷ್ಯವಾಣಿ ನುಡಿದಿದ್ದಾರೆ. ವಿಶ್ವದ ಅಂತ್ಯದ ಬಗ್ಗೆಯೂ ಇದೇ ವೇಳೆ ಸುಳಿವು ಕೊಟ್ಟಿದ್ದಾರೆ.
Advertisement
ಕೆಲ ತಿಂಗಳ ಹಿಂದೆಯಷ್ಟೇ ಭಾರತದ ಭವಿಷ್ಯ ನುಡಿದು ಆತಂಕ ಸೃಷ್ಟಿಸಿದ್ದ ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ, ಇದೀಗ ವಿಶ್ವದ ಭವಿಷ್ಯ ನುಡಿದು ಮತ್ತೊಮ್ಮೆ ಆತಂಕ ಉಂಟಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದ ನಾಯಕ-ಭಾರತದ ಬೌಲರ್ – ಏಕದಿನ ಸರಣಿ ಆರಂಭಕ್ಕೂ ಮುನ್ನ ಔಟ್
Advertisement
Advertisement
ಬಾಬಾ ವಂಗಾರ 2023ರ ಭವಿಷ್ಯವಾಣಿ ಏನು?
2023ರಲ್ಲಿ ಸೋಲಾರ್ ಸುನಾಮಿ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಭೂಮಿಯ ಕಾಂತೀಯ ಕವಚವು ನಾಶವಾಗುತ್ತದೆ. ಭೂಮಿಯ ಮೇಲೆ ಏಲಿಯನ್ಗಳ (ಅನ್ಯಗ್ರಹ ಜೀವಿ) ದಾಳಿಯಿಂದ ಲಕ್ಷಾಂತರ ನಿವಾಸಿಗಳು ಸಾಯುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಊರು ಬಿಡುವಂತೆ ರೌಡಿಗಳಿಗೆ ಸಿಸಿಬಿ ಖಡಕ್ ಸೂಚನೆ – ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರೆ ಕ್ರಮದ ಎಚ್ಚರಿಕೆ
Advertisement
ಬಾಬಾ ವಂಗಾ (Baba Vanga) ಅವರ 2023ರ ಭಯಾನಕ ಭವಿಷ್ಯವಾಣಿಗಳು, ಭೂಮಿಯು ಈಗ ಬ್ರಹ್ಮಾಂಡದಲ್ಲಿ ಅನಿಶ್ಚಿತ ಸಮತೋಲನದಲ್ಲಿ ಉಳಿದಿದೆ. ನಂತರ ಅದು ತನ್ನ ಕಕ್ಷೆಯನ್ನು ಬದಲಿಸುತ್ತದೆ. ಇದರಲ್ಲಿನ ಸಣ್ಣ ಬದಲಾವಣೆಯೂ ಹವಾಮಾನದಲ್ಲಿ ಭಾರೀ ಬದಲಾವಣೆ ಉಂಟುಮಾಡಬಹುದು. ಆಗ ಪರಿಸ್ಥಿತಿ ನಿಜಕ್ಕೂ ಭೀರಕವಾಗಿರುತ್ತದೆ ಎಂದು ಹೇಳಲಾಗಿದೆ.
2023ರ ವೇಳೆಗೆ ಪ್ರಯೋಗಾಲಯಗಳಲ್ಲಿ ಮಾನವರನ್ನು ಉತ್ಪಾದಿಸಲಾಗುತ್ತದೆ (Humans Produce Laboratories). ಹುಟ್ಟದ ಮಗುವಿಗೆ ತಮ್ಮ ಆಯ್ಕೆಯ ಬಣ್ಣ ಮತ್ತು ಗುಣಲಕ್ಷಣಗಳನ್ನು ಆಯ್ಕೆ ಮಾಡುವ ಸಂದರ್ಭ ಬರುತ್ತದೆ. ಈ ಜನನದ ಪ್ರಕ್ರಿಯೆಯು ಮಾನವನ ನಿಯಂತ್ರಣದಲ್ಲಿರುತ್ತದೆ ಮತ್ತು ಬಾಡಿಗೆ ತಾಯ್ತನದ ಸಮಸ್ಯೆಯು ಅದರ ಆವಿಷ್ಕಾರದೊಂದಿಗೆ ಕೊನೆಗೊಳ್ಳುತ್ತದೆ. ವಿದ್ಯುತ್ ಸ್ಥಾವರದಲ್ಲಿನ ಸ್ಫೋಟವು ವಿಷಕಾರಿ ಮೋಡಗಳ ರಚನೆಗೆ ಕಾರಣವಾಗಬಹುದು. ಇದು ಇಡೀ ಏಷ್ಯಾ ಖಂಡವೇ ಮಂಜು ಕವಿಯುವಂತೆ ಮಾಡುತ್ತದೆ. ಈ ಬದಲಾವಣೆಯಿಂದಾಗಿ ಇತರ ದೇಶಗಳು ಸಹ ಗಂಭೀರ ಕಾಯಿಲೆಗಳಿಂದ ಬಾಧಿಸತೊಡಗುತ್ತವೆ.