ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ದಿ ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಎಂದು ನಾಮಿನೇಟ್ ಆಗಿದ್ದು, ಇದಕ್ಕೆ ನೆಟ್ಟಿಗರು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ 2019ರ ಅತ್ಯಂತ ಸ್ಫೂರ್ತಿದಾಯಿಕ ಮಹಿಳೆ ವಿಭಾಗದಲ್ಲಿ ಆಲಿಯಾ ಅವರು ಪೀಪಲ್ಸ್ ಚಾಯ್ಸ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಈ ನಾಮಿನೇಟ್ ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಆಲಿಯಾ ಅವರ ಈ ಸಾಧನೆಯನ್ನು ಜನರು ಇಷ್ಟಪಡಲಿಲ್ಲ. ಹಾಗಾಗಿ ಅವರು ಆಲಿಯಾ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
Advertisement
Advertisement
ದೇಶದಲ್ಲಿ ಚಂದ್ರಯಾನ -2 ಮಿಷನ್ ಡೈರೆಕ್ಟರ್ ರಿತು ಕರಿಧಾಲ್ ಅಂತಹ ಮಹಿಳೆಯರು ಇದ್ದಾರೆ. ಅಲ್ಲದೆ ದೇಶವನ್ನು ಚಂದ್ರನತ್ತ ತಲುಪಿಸುವಲ್ಲಿ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಅಂತಹವರಿಗೆ ದಿ ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಎಂದು ನಾಮಿನೇಟ್ ಮಾಡುವ ಬದಲು ಆಲಿಯಾ ಅವರಿಗೆ ಯಾಕೆ ನೀಡುತ್ತಿದ್ದೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.
Advertisement
ಅಲ್ಲದೆ ಮತ್ತೆ ಕೆಲವರು ಆಲಿಯಾ ಭಟ್ ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಮ್ಮ ದೇಶದಲ್ಲಿ ಹಲವು ಮಹಿಳೆಯರು ಇದ್ದಾರೆ. ಅವರನ್ನು ಎಣಿಸುತ್ತಾ ಹೋದರೆ ನೀವು ಸುಸ್ತಾಗುತ್ತೀರಿ ಎಂದು ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಹಿಮಾ ದಾಸ್ ಅವರು ಒಂದೇ ತಿಂಗಳಿನಲ್ಲಿ 5 ಚಿನ್ನದ ಪದಕ ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಗೆಲುವು ಸಾಧಿಸಿದ ಮೊದಲ ಮಹಿಳೆ. ಅವರಿಗೆ ಈ ಪ್ರಶಸ್ತಿ ಯಾಕೆ ನೀಡಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಟ್ರೋಲ್ ಆಗುತ್ತಿದ್ದಂತೆ ಆಲಿಯಾ ಭಟ್ ಅವರ ಅಭಿಮಾನಿಗಳು ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆಲವರು ಆಲಿಯಾ ಅವರಿಗೆ ಎಂಟರ್ ಟೈನ್‍ಮೆಂಟ್ ಕ್ಯಾಟಗೇರಿಯಲ್ಲಿ ದಿ ಮೋಸ್ಟ್ ಇನ್‍ಸ್ಪೈರಿಂಗ್ ವುಮೆನ್ ಎಂದು ನಾಮಿನೇಟ್ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ.