Connect with us

Bollywood

ಹೃದಯ ಸಂಬಂಧಿ ಕಾಯಿಲೆಯಿರುವ ಮಕ್ಕಳ ನೆರವಿಗೆ ನಿಂತ ಅಲಿಯಾ

Published

on

ಮುಂಬೈ: ಬಾಲಿವುಡ್ ನಟಿ ಅಲಿಯಾ ಭಟ್ ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ನೆರವಿಗೆ ಮುಂದಾಗಿದ್ದಾರೆ.

ಅಲಿಯಾ ಪೇಟಿಂಗ್ ಪ್ರದರ್ಶನ(ಎಕ್ಸಿಬಿಷನ್)ನಲ್ಲಿ ಭಾಗವಹಿಸುವ ಮೂಲಕ ಹೃದಯ ಸಂಬಂಧಿ ಕಾಯಿಲೆಯಿರುವ ಮಕ್ಕಳಿಗೆ ಸಹಾಯ ಮಾಡಲಿದ್ದಾರೆ. ಈ ಎಕ್ಸಿಬಿಷನ್‍ನಿಂದ ಬಂದ ಹಣವನ್ನು ಮಕ್ಕಳ ಚಿಕಿತ್ಸೆಗೆ ಉಪಯೋಗಿಸಲಾಗುತ್ತದೆ.

ಬುಧವಾರ ಅಲಿಯಾ ಅವರು ಮುಂಬೈನ ಬಾಯಿ ಜರ್ಬಾಯಿ ವಾಡಿಯಾ ಆಸ್ಪತ್ರೆಯಲ್ಲಿ ‘ಆರ್ಟ್ ಫಾರ್ ದಿ ಹಾರ್ಟ್’ ಎಕ್ಸಿಬಿಷನ್ ಉದ್ಘಾಟಿಸಿದ್ದರು. ಅಲ್ಲದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯ ಮಾಡುವ ಸಲುವಾಗಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅಲಿಯಾ, “ಮಕ್ಕಳು ದೊಡ್ಡವರಿಗಿಂತ ಹೆಚ್ಚು ಪಾಸಿಟಿವ್ ಆಗಿರುತ್ತಾರೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಏಕೆಂದರೆ ಅವರ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಇರುವುದಿಲ್ಲ. ಇದೇ ಕಾರಣಕ್ಕೆ ಅವರು ಬೇಗ ಗುಣಮುಖರಾಗುತ್ತಾರೆ” ಎಂದು ಹೇಳಿದ್ದಾರೆ.

ನಾನು ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕ(ಎನ್‍ಐಸಿಯು)ಗೆ ಹೋಗಿದ್ದೆ. ಇಡೀ ಏಷಿಯಾದಲ್ಲಿ ಇದು ಅತಿದೊಡ್ಡ ಘಟಕ. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಎಕ್ಸಿಬಿಷನ್ ಆಯೋಜಿಸಲಾಗಿದೆ. ಇದರಿಂದ ಸಂಗ್ರಹಿಸಲಾದ ಹಣವನ್ನು ಮಕ್ಕಳ ಸರ್ಜರಿಗೆ ಉಪಯೋಗಿಸಲಾಗುತ್ತದೆ ಎಂದು ಅಲಿಯಾ ಭಟ್ ತಿಳಿಸಿದ್ದಾರೆ.

 

View this post on Instagram

 

#aliabhatt today at wadia hospital

A post shared by Viral Bhayani (@viralbhayani) on

Click to comment

Leave a Reply

Your email address will not be published. Required fields are marked *

www.publictv.in