ರಶ್ಮಿಕಾ ಮಂದಣ್ಣ- ರಣಬೀರ್ ಕಪೂರ್‌ಗೆ (Ranbir Kapoor) ಅದ್ಯಾವ ಗಳಿಗೆಯಲ್ಲಿ ಲಿಪ್‌ಲಾಕ್ (Liplock) ಮಾಡಿದರೋ ಏನೋ ಅಲ್ಲಿಂದ ಇಲ್ಲಿವರೆಗೆ ಅದರ ತಾಪಮಾನ ಏರುತ್ತಲೇ ಇದೆ. ‘ಅನಿಮಲ್’ (Animal) ಚಿತ್ರದಲ್ಲಿ ಈ ಜೋಡಿ ಕಿಸ್ಸಿಂಗ್ ಸೀನ್‌ನಲ್ಲಿ ಭಾಗವಹಿಸಿದ್ದು, ನ್ಯಾಶನಲ್ ಲೆವೆಲ್‌ನಲ್ಲಿ ಸುದ್ದಿಯಾಗಿದೆ. ಅದಕ್ಕೆ ರಣಬೀರ್ ಪತ್ನಿ ಆಲಿಯಾ(Alia Bhatt) ಹೇಳಿದ್ದೇನು ಗೊತ್ತಾ?
ರಶ್ಮಿಕಾ ಟೈಮ್ ಈಗ ಜಬರ್‌ದಸ್ತ್ ಆಗಿದೆ. ಕಳೆದ ಒಂದು ವರ್ಷದಿಂದ ಫ್ಲಾಪ್ ಕೊಟ್ಟು ಕುಂದಿದ್ದರು. ಒಂದು ಹಿಟ್ ಕೊಡು ದೇವರೇ ಎಂದು ಬೇಡಿಕೊಂಡಿದ್ದರು. ಕಾಲ ಕೂಡಿ ಬಂದಿದೆ. ಕಾರಣ ಅನಿಮಲ್‌ನಲ್ಲಿ ರಣಬೀರ್ ತುಟಿಗೆ ಮುತ್ತಿಟ್ಟಿದ್ದು. ಪ್ಯಾನ್ ಇಂಡಿಯಾ ಸಮಾಚಾರ ಆಗಿದೆ. ಒಂದೇ ಹಾಡು, ಮೂರು ಮೂರು ಲಿಪ್‌ಲಾಕ್. ಪಡ್ಡೆಗಳು ರಣಬೀರ್ (Ranbir Kapoor) ತುಟಿ ನೋಡಿ ಕುದಿಯುತ್ತಿದ್ದಾರೆ. ವಿಜಯ್ ದೇವರಕೊಂಡ ಅದ್ಯಾಕೊ ಸೈಲೆಂಟ್ ಮೋಡ್‌ನಲ್ಲಿದ್ದಾರೆ. ಇದನ್ನೂ ಓದಿ:ಆಕ್ಟರ್ ಆಗಿರೋ ಶ್ರೀಲೀಲಾ ಮೆಡಿಕಲ್ ಓದಿದ್ದೇಕೆ ಗೊತ್ತಾ? ಇಲ್ಲಿದೆ ಸೀಕ್ರೆಟ್
ವಿಷಯ ಅದಲ್ಲ. ಇದೀಗ ರಣಬೀರ್ ಪತ್ನಿ ಆಲಿಯಾ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಪತಿ ರಶ್ಮಿಕಾಗೆ (Rashmika Mandanna) ಕಿಸ್ ಮಾಡಿದ್ದು ಏನನ್ನಿಸುತ್ತಿದೆ? ಎಂದು ನೆಟ್ಟಗರು ಪ್ರಶ್ನೆ ಮಾಡಿದ್ದಾರೆ. ಮೊದಲೇ ಬೋಲ್ಡ್ ಅಂಡ್ ಬ್ಯೂಟಿಫುಲ್ ಹೆಣ್ಣಾಗಿರುವ ಆಲಿಯಾ ಪ್ರಶ್ನೆ ಕೇಳಿ ನಕ್ಕಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ, ಇನ್ನಷ್ಟು ಕ್ಲೋಸ್ ಮೂವ್ ಮಾಡಬಹುದಿತ್ತು ಎಂದು ಉತ್ತರಿಸಿದ್ದಾರೆ. ಅಯ್ಯೋ ಅದು ತೆರೆ ಮೇಲಷ್ಟೇ. ಹೀಗಾಗಿ ಇಷ್ಟು ತಣ್ಣಗಿದ್ದೀಯಾ. ಅದೇ ಡೈರೆಕ್ಟ್ ಅಟ್ಯಾಕ್ ಆಗಿದ್ದರೆ ಹೀಗನ್ನುತ್ತಿದ್ದೀರಾ ಎಂದು ನೆಟ್ಟಿಗರು ಆಲಿಯಾ ಕಾಲೆಳೆದಿದ್ದಾರೆ.
‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಮೊದಲ ಬಾರಿಗೆ ರಣ್‌ಬೀರ್‌ಗೆ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]