ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt) ಅವರ ಹೊಟ್ಟೆ ಕೊಂಚ ಉಬ್ಬಿದಂತೆ ಕಾಣಿಸಿಕೊಂಡ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ನಟಿ ಮತ್ತೆ ಗರ್ಭಿಣಿಯಾಗಿದ್ದಾರೆ (Pregnant) ಎಂಬ ವದಂತಿ ಹಬ್ಬಿದ್ದು, ಪರ ವಿರೋಧ ಚರ್ಚೆಯನ್ನೂ ಹುಟ್ಟುಹಾಕಿದೆ.
Alia Bhatt at the L’Oreal Lights On Women Awards at Cannes
byu/Big-Criticism-8926 inBollyBlindsNGossip
ಹೌದು.. ಶುಕ್ರವಾರ ಕಾನ್ ಫಿಲಂ ಫೆಸ್ಟಿವಲ್‌ನಲ್ಲಿ (Cannes Film Festival) ನಟಿ ಆಲಿಯಾ ಭಟ್ ಕಾಣಿಸಿಕೊಂಡ ರೀತಿ ಈ ವದಂತಿಗೆ ಕಾರಣವಾಗಿದೆ. ಇದನ್ನೂ ಓದಿ: ‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!
ಖಾನ್ ಫೆಸ್ಟಿವಲ್‌ಗೆ ನಟಿ ಶಿಯಾಪರೆಲ್ಲಿ ಗೌನ್‌ನಲ್ಲಿ ಎಂಟ್ರಿ ಕೊಟ್ಟಿದ್ದಾಗ ಫ್ಯಾಷನ್ ಪೋಸ್ ಕೊಟ್ಟರು.ಈ ವೇಳೆ ಅವರ ಹೊಟ್ಟೆಯ ಭಾಗ ಸ್ವಲ್ಪ ಉಬ್ಬಿದಂತೆ ಕಂಡುಬಂದಿತ್ತು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಲಿತಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ? ಅಂತ ಪ್ರಶ್ನೆ ಮಾಡತೊಡಗಿದ್ರು. ಇದಕ್ಕೆ ಕೆಲವರು ಯೆಸ್… ಯೆಸ್… ಅಂತಾ ಕಾಮೆಂಟ್ ಮಾಡಿದ್ದಾರೆ. ಆದ್ರೆ ಆಲಿಯಾ ಭಟ್- ರಣಬೀರ್ ಕಪೂರ್ ದಂಪತಿಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.
ಇನ್ನೂ 2022ರಲ್ಲಿ ರಣಬೀರ್ ಕಪೂರ್ (Ranbir Kapoor) ಜೊತೆ ಆಲಿಯಾ ಮದುವೆ ನಡೆಯಿತು. ಇವರ ಸುಂದರ ದಾಂಪತ್ಯಕ್ಕೆ 2 ವರ್ಷದ ಮಗಳು ರಾಹಾ ಸಾಕ್ಷಿಯಾಗಿದ್ದಾಳೆ. ಇದನ್ನೂ ಓದಿ: ತಮನ್ನಾ ರಾಯಭಾರಿ | ತೆರಿಗೆ ಪಾವತಿದಾರರ ಹಣವನ್ನು ವ್ಯರ್ಥ ಮಾಡಿದಂತೆ: ರಮ್ಯಾ ಬೇಸರ
ಮದುವೆ ಬಳಿಕ ಸಿನಿಮಾಗಳಿಗೆ ಬ್ರೇಕ್ ನೀಡಿದ್ದ ಆಲಿಯಾ ಭಟ್ ಇದೀಗ ʻಬ್ರಹ್ಮಾಸ್ತ್ರ-2ʼ ಚಿತ್ರಕ್ಕಾಗಿ ಕೆಲಸ ಮಾಡ್ತಿದ್ದಾರೆ ಎಂದು ತಿಳಿದುಬಂದಿದೆ. 2022ರಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ-1’ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ಬಿಗ್ ಬಿ, ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಅನೇಕರು ನಟಿಸಿದ್ದರು. ಈ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಇದನ್ನೂ ಓದಿ: ಮೃಣಾಲ್ ಠಾಕೂರ್ ಫ್ಯಾನ್ಸ್‌ಗೆ ಡಬಲ್ ಧಮಾಕ!