ಬಾಲಿವುಡ್ನ ಮುದ್ದಾದ ಜೋಡಿ ರಣ್ಬೀರ್ ಮತ್ತು ಆಲಿಯಾ ಭಟ್ ಸದ್ಯ ʻಬ್ರಹ್ಮಾಸ್ತ್ರʼ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ `ಬೇಬಿ ಆನ್ ಬೋರ್ಡ್’ ಎಂದು ಬರೆದಿದ್ದ ಡ್ರೆಸ್ ಧರಿಸಿ ಬಂದಿದ್ದ ಆಲಿಯಾ ಲುಕ್ ಈಗ ಅಭಿಮಾನಿಗಳ ಸೆಳೆಯುತ್ತಿದೆ.
ಇದೇ ಸೆಪ್ಟೆಂಬರ್ 9ಕ್ಕೆ `ಬ್ರಹ್ಮಾಸ್ತ್ರ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. `ಬ್ರಹ್ಮಾಸ್ತ್ರʼ ಜೋಡಿ ಆಲಿಯಾ ಮತ್ತು ರಣ್ಬೀರ್ ಕೂಡ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ನಲ್ಲಿ ಆಲಿಯಾ ಭಟ್ ಲುಕ್, ಅವರು ಧರಿಸಿದ ಪಿಂಕ್ ಕಲರ್ ಡ್ರೆಸ್ ಇದೀಗ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಧ್ರುವ ಸರ್ಜಾ
ಬೇಬಿ ಆನ್ ಬೋರ್ಡ್ ಎಂದು ಬರೆದಿದ್ದ ಡ್ರೆಸ್ ಧರಿಸಿ ಈ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿ, ಕ್ಯಾಮರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಗರ್ಭಿಣಿ ಆಲಿಯಾ, ಸಮಾರಂಭದಲ್ಲಿ ಪಿಂಕ್ ಕಲರ್ ಡ್ರೆಸ್ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಲಿಯಾ ಭಟ್ ಫೋಟೋಸ್ ಸಖತ್ ವೈರಲ್ ಆಗುತ್ತಿದೆ.
View this post on Instagram
ಇನ್ನು ಬ್ರಹ್ಮಾಸ್ತç ಚಿತ್ರದ ಈವೆಂಟ್ನಲ್ಲಿ ಆಲಿಯಾ, ರಣ್ಬೀರ್, ಮೌನಿ ರಾಯ್, ನಾಗಾರ್ಜುನ, ರಾಜಮೌಳಿ, ಕರಣ್ ಜೋಹರ್ ಭಾಗಿಯಾಗಿದ್ದರು. ಇನ್ನು ಸಮಾರಂಭದ ಮುಖ್ಯ ಅತಿಥಿಯಾಗಿ ಜ್ಯೂ.ಎನ್ಟಿಆರ್ ಕೂಡ ಭಾಗವಹಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದರು.