ಯಶ್‌ ಆಯ್ತು ಈಗ ‘ರಾಮಾಯಣ’ ಆಫರ್‌ಗೆ ನೋ ಎಂದ ಆಲಿಯಾ ಭಟ್

Public TV
2 Min Read
alia bhatt 2

ಬಾಲಿವುಡ್‌ನಲ್ಲಿ(Bollywood) ರಾಮಾಯಣ ಸಿನಿಮಾ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಹಿಂದೆ ರಾವಣನ ಪಾತ್ರದಲ್ಲಿ ನಟಿಸಲು ‘ಕೆಜಿಎಫ್ 2’ (KGF 2) ಹೀರೋ ಯಶ್‌ಗೆ(Yash) ಆಫರ್ ನೀಡಲಾಗಿತ್ತು. ಆದರೆ ರಾಕಿ ಭಾಯ್ ನೋ ಎಂದಿದ್ದರು. ಈಗ ಸೀತಾ ಪಾತ್ರದಲ್ಲಿ ನಟಿಸಲು ಬಂದ ಆಫರ್‌ನ್ನ ಆಲಿಯಾ ಭಟ್ ರಿಜೆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸುದೀಪ್ ಹುಟ್ಟುಹಬ್ಬ: ಮನೆಗೆ ಬರಬೇಡಿ, ಅಭಿಮಾನಿಗಳ ಭೇಟಿಗೆ ಸ್ಥಳ ಫಿಕ್ಸ್

alia bhatt

ಕೆಜಿಎಫ್ 2 ಬಳಿಕ ನ್ಯಾಷನಲ್ ಸ್ಟಾರ್ ಆಗಿ ಯಶ್ ಮಿಂಚುತ್ತಿದ್ದಾರೆ. ಬಾಲಿವುಡ್ ನಿರ್ದೇಶಕ, ನಿರ್ಮಾಪಕರ ಕಣ್ಣು ಯಶ್ ಮೇಲಿದೆ. ಸಾಕಷ್ಟು ಆಫರ್ಸ್‌ಗಳ ನಡುವೆ ಯಶ್ ರಾಮಾಯಣ ಸಿನಿಮಾಗೆ ನೋ ಎಂದಿದ್ದರು ಸಖತ್ ಸುದ್ದಿಯಾಗಿತ್ತು. ಈಗ ಆಲಿಯಾ ಭಟ್(Alia Bhatt) ಬೇಡವೇ ಬೇಡ ನಟಿಸಲ್ಲ ಅಂತಾ ಹೇಳಿರೋದು ಬಿಟೌನ್‌ನಲ್ಲಿ ಸದ್ದು ಮಾಡುತ್ತಿದೆ.

alia bhatt

ಇತ್ತೀಚೆಗೆ ಪುರಣಾಗಳ ಕಥೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನ ನಡೆದಿದೆ. ಆ ಪೈಕಿ ಶಾಕುಂತಲಂ, ಆದಿಪುರುಷ್ ಸಿನಿಮಾಗಳು ಸೋತವು. ಹೀಗಿರುವಾಗ ನಿರ್ದೇಶಕ ನಿತೇಶ್ ತಿವಾರಿ ಅವರು ಮೂರು ಪಾರ್ಟ್‌ಗಳಲ್ಲಿ ರಾಮಾಯಣ (Ramayana) ಮಾಡಲು ಮುಂದಾಗಿದ್ದಾರೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್, ಸೀತೆಯ ಪಾತ್ರಕ್ಕೆ ಆಲಿಯಾ ಭಟ್ ಹಾಗೂ ರಾವಣನ ಪಾತ್ರಕ್ಕೆ ಯಶ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಆಲೋಚನೆ ನಿತೇಶ್‌ಗೆ ಇತ್ತು. ಆದರೆ, ಈಗ ಅವರ ಲೆಕ್ಕಾಚಾರ ಉಲ್ಟಾ ಆಗುತ್ತಿದೆ.

ನಿತೇಶ್ ಅವರು ಈ ಮೂವರನ್ನೂ ಭೇಟಿ ಮಾಡಿ ಆಫರ್ ನೀಡಿದ್ದರು. ಈ ಮೊದಲೇ ಯಶ್ ಅವರು ಆಫರ್ ರಿಜೆಕ್ಟ್ ಮಾಡಿದ್ದರು. ಈಗ ಆಲಿಯಾ ಭಟ್ ಅವರು ಸ್ವಲ್ಪ ಸಮಯ ತೆಗೆದುಕೊಂಡು ಈ ಆಫರ್‌ಗೆ ನೋ ಎಂದಿದ್ದಾರೆ. ಇದಕ್ಕೆ ಕಾರಣ ಡೇಟ್ಸ್ ಹೊಂದಾಣಿಕೆ ಆಗದೇ ಇರುವುದು.

ಸಿನಿಮಾಗಳ ಜೊತೆ ಮುದ್ದು ಮಗಳು ರಾಹಾ(Raha) ಆರೈಕೆಯಲ್ಲೂ ಬ್ಯುಸಿ ಇರುವ ಕಾರಣ, 3 ಪಾರ್ಟ್‌ಗಳಲ್ಲಿ ಬರುತ್ತಿರೋ ರಾಮಾಯಣಗೆ ಸಮಯ ಮೀಸಲಿಡುವುದು ಕಷ್ಟ ಎಂದು ಚಿತ್ರಕ್ಕೆ ನೋ ಹೇಳಿದ್ದಾರೆ ಆಲಿಯಾ ಭಟ್.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article