ಪಿಂಕ್ ಕಲರ್ ಡ್ರೆಸ್‌ನಲ್ಲಿ ಗುಲಾಬಿಯಂತೆ ಮಿಂಚಿದ ಆಲಿಯಾ ಭಟ್

Public TV
1 Min Read
alia bhat

ಬಾಲಿವುಡ್ ಬ್ಯೂಟಿ ಆಲಿಯಾ ಭಟ್, ಸಿನಿಮಾ ಮತ್ತು ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ `ಬ್ರಹ್ಮಾಸ್ತ್ರʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರುವ ಆಲಿಯಾ ಭಟ್ ಇದೀಗ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ತನ್ನ ಬೇಬಿ ಬಂಪ್ ತೋರಿಸಿದ್ದಾರೆ.

alia bhat 1

ಬಿಟೌನ್ ರಾಧೆ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ನಟನೆಯ `ಬ್ರಹ್ಮಾಸ್ತ್ರʼ ಚಿತ್ರ ರಿಲೀಸ್‌ಗೆ ರೆಡಿಯಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ದಂಪತಿಗಳಿಬ್ಬರು ಬ್ಯುಸಿಯಾಗಿದ್ದಾರೆ. ಸದ್ಯ ಮುಂಬೈನಲ್ಲಿ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ ಪ್ರಚಾರದಲ್ಲಿ ಆಲಿಯಾ ಭಟ್ ಪಿಂಕ್ ಕಲರ್ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತಿ ರಣ್‌ಬೀರ್ ಜತೆ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ.

alia bhat 1 1

ಬೇಬಿ ಬಂಪ್ ಲುಕ್‌ನಲ್ಲಿ ಆಲಿಯಾ ಪ್ರೆಗ್ನೆನ್ಸಿ ಗ್ಲೋ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಪಿಂಕ್ ಕಲರ್ ಟಾಪ್‌ಗೆ ಬ್ಲ್ಯಾಕ್ ಕೋಟ್ ಜತೆಗೆ ಲೆಗ್ಗಿಂಗ್ಸ್ ಹಾಕಿದ್ದಾರೆ. ಇನ್ನು ಚಿತ್ರದ ಟ್ರೈಲರ್, ಪೋಸ್ಟರ್ ಮೂಲಕ ಹವಾ ಎಬ್ಬಿಸಿರುವ `ಬ್ರಹ್ಮಾಸ್ತ್ರʼ ಇದೇ ಸೆಪ್ಟೆಂಬರ್ 9ಕ್ಕೆ ತೆರೆಗೆ ಬರಲಿದೆ.‌ ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

 

 

View this post on Instagram

 

A post shared by Viral Bhayani (@viralbhayani)

ಇನ್ನು ರಣ್‌ಬೀರ್ ಕಪೂರ್ ಮತ್ತು ಆಲಿಯಾ ಪಾಲಿಗೆ ಈ ಚಿತ್ರ ಬಹಳ ವಿಶೇಷವಾಗಿದೆ. ರಣ್‌ಬೀರ್ ಕಪೂರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ಆಲಿಯಾ ಇಶಾ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *