ಬಾಲಿವುಡ್ನ ಕ್ಯೂಟ್ ಕಪಲ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ದಿನಗಣನೆ ಶುರುವಾಗಿದೆ. ಐದು ವರ್ಷಗಳ ಲವ್ ರಿಲೇಶನ್ಶಿಪ್ಗೆ ಮದುವೆಯೆಂಬ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದೆ. ತನ್ನ ಮದುವೆಯ ಬಗ್ಗೆ ಎಲ್ಲಿಯೂ ತುಟಕ್ ಪಿಟಕ್ ಎನ್ನದ ಆಲಿಯಾ ಇದೀಗ ಆ ಒಂದು ಕಮೆಂಟ್ನಿಂದ ಮದುವೆ ವಿಚಾರ ಬಹಿರಂಗ ಪಡಿಸಿದ್ದಾರೆ.
Advertisement
ಸ್ಟಾರ್ ಜೋಡಿ ರಣಬೀರ್ ಆಲಿಯಾ ಮದುವೆಗೆ ಕೌಂಟ್ಡೌನ್ ಶುರುವಾಗಿದೆ. ಈ ಜೋಡಿ ಹಕ್ಕಿಗಳು ಮದುವೆ ಆಗುತ್ತಿರುವುದರ ಬಗ್ಗೆ ದಿನಕ್ಕೊಂದು ಮಾಹಿತಿ ಸಿಗುತ್ತಿದೆ. ಈಗ ಮದುವೆಯಾಗುತ್ತಿರುವ ವಿಚಾರವನ್ನ ಪರೋಕ್ಷವಾಗಿ ನಟಿ ಆಲಿಯಾ ಖಚಿತಪಡಿಸಿದ್ದಾರೆ.
Advertisement
View this post on Instagram
Advertisement
`ಅರ್ಜುನ್ ರೆಡ್ಡಿ’ ಚಿತ್ರದ ಒಂದು ದೃಶ್ಯದಲ್ಲಿ ತಾನು ಪ್ರೀತಿಸಿದ ಹುಡುಗಿಯ ಮದುವೆ ವಿಚಾರ ತಿಳಿದು ರಸ್ತೆಯಲ್ಲಿ ಓಡಿ ಬರುತ್ತಾನೆ ಹೀರೋ. ಅದೇ ಕಾನ್ಸೆಪ್ಟ್ನಲ್ಲಿ ಯೂಟ್ಯೂಬ್ ಸ್ಟಾರ್ ನಿಕ್ ಅವರು ವಿಡಿಯೋ ಮಾಡಿ, ಆಲಿಯಾ ರಣಬೀರ್ ಅನ್ನೋ ಪಲಕವಿರೋ ಕಾರಿನ ಹಿಂದೆ ಬಿಳಿ ಬಟ್ಟೆಯಲ್ಲಿ ರಸ್ತೆಯ ಮೇಲೆ ಓಡುತ್ತಾನೆ. ನಿಕ್ ಅವರು ಆಲಿಯಾ ಭಟ್ ಫ್ಯಾನ್ ಆಗಿರೋದರಿಂದ `ಏಪ್ರಿಲ್ 17ರಂದು ನಾನು ಹೀಗೆಯೇ ಓಡುತ್ತೇನೆ’ ಎಂಬರ್ಥದಲ್ಲಿ ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ:
Advertisement
ನಿಕ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಲಿಯಾ ಮದುವೆಗೆ ಕುರಿತ, ವಿಡಿಯೋ ಭಾರೀ ವೈರಲ್ ಆಗ್ತಿದೆ. ಇದೀಗ ಈ ವಿಡಿಯೋಗೆ ಆಲಿಯಾ `ಡೆಡ್’ ಅಂತಾ ಕಮೆಂಟ್ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಈ ನಟಿ ಮದುವೆಯ ವಿಚಾರ ಖಚಿತಪಡಿಸಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿ ಆಲಿಯಾ ಮತ್ತು ರಣಬೀರ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.