ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

Public TV
2 Min Read
Alia Bhatt Rajamouli 1

ಬಾಲಿವುಡ್ ಬಹುಬೇಡಿಕೆಯ ನಟಿಯರಲ್ಲಿ ಬಾಲಿವುಡ್ ಬ್ಯೂಟಿ ಆಲಿಯಾ ಕೂಡ ಒಬ್ಬರು. ತಮ್ಮ ಬೋಲ್ಡ್ ನಟನೆ ಮೂಲಕ ಇಡೀ ಚಿತ್ರರಂಗವನ್ನೆ ಸೆಳೆದಿರುವ ಮೊದಲಬಾರಿಗೆ ‘RRR’ ಸಿನಿಮಾ ಮೂಲಕ ದಕ್ಷಿಣ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರು ಎಂಟ್ರಿ ಕೊಟ್ಟ ಮೊದಲ ಸಿನಿಮಾ RRRನಲ್ಲಿ ಪ್ರೇಕ್ಷಕರಿಗೆ ಆಲಿಯಾ ಕಾಣಿಸಿಕೊಳ್ಳುವುದು ಕೆಲವೇ ನಿಮಿಷಗಳು. ಈ ಸಿನಿಮಾ ಕ್ರೆಡಿಟ್ ಜ್ಯೂ.ಎನ್‍ಟಿಆರ್, ರಾಮ್‍ಚರಣ್ ಮತ್ತು ನಿರ್ದೇಶಕ ರಾಜಮೌಳಿಗೆ ಹೋಗುತ್ತಿದೆ. ಇದರಿಂದ ಆಲಿಯಾ ಬೇಸರಗೊಂಡಿದ್ದಾರೆ ಎಂಬ ಸುದ್ದಿ ಎಲ್ಲಕಡೆ ಹಬ್ಬಿದೆ.

RRR film 2

ಆಲಿಯಾ ಹಲವು ದೃಶ್ಯಗಳನ್ನು ‘RRR’ ಸಿನಿಮಾಗಾಗಿ ರಾಜಮೌಳಿ ಚಿತ್ರೀಕರಿಸಿದ್ದರು. ಆದರೆ ಸಿನಿಮಾದ ಅವಧಿ ಉದ್ದವಾದ ಕಾರಣ ಅವಕ್ಕೆ ಕತ್ತರಿ ಹಾಕಿದ್ದಾರೆ. ಇದು ಆಲಿಯಾಗೆ ಬೇಸರ ತಂದಿದ್ದು, ಇನ್‍ಸ್ಟಾದಿಂದ ‘RRR’ ಸಿನಿಮಾದ ಪೋಸ್ಟರ್ ಮತ್ತು ರಾಜಮೌಳಿ ಅವರನ್ನು ಅನ್‍ಫೌಲೋ ಮಾಡಿದ್ದಾರೆ.  ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ

RRR film 4

ಈ ಕುರಿತು ಗಾಸಿಪ್ ಕ್ರಿಯೇಟ್ ಆದ ಬಳಿಕ ಆಲಿಯಾ ಪ್ರತಿಕ್ರಿಯೆ ಕೊಟ್ಟಿದ್ದು, ನಾನು RRR ಸಿನಿಮಾತಂಡದ ಮೇಲೆ ಬೇಸರಗೊಂಡಿದ್ದು, ಸಿನಿಮಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಎಲ್ಲಕಡೆ ಸುದ್ದಿ ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನಾವು ಏನು ಪೋಸ್ಟ್ ಮಾಡುತ್ತೇವೆ ಅದನ್ನೆ ನಂಬಿ ಈ ರೀತಿಯ ಊಹಿಸುವುದು ತಪ್ಪು. ನಾನು ನನ್ನ ಇನ್‍ಸ್ಟಾ ಪ್ರೋಫೈಲ್ ರಿಫ್ರೆಶ್ ಮಾಡುತ್ತಿರುತ್ತೇನೆ. ಕೆಲವು ಫೋಟೋಗಳನ್ನು ತೆಗೆದುಹಾಕುತ್ತೇನೆ. ಅದೇ ರೀತಿ RRR ಸಿನಿಮಾ ಪೋಸ್ಟ್ ಸಹ ಡಿಲೀಟ್ ಮಾಡಿದ್ದೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

RRR 3

RRR ಜಗತ್ತಿಗೆ ನಾನು ಭಾಗಿಯಾಗಿದ್ದಕ್ಕೆ ಕೃತಜ್ಞನಾಗಿದ್ದೇನೆ. ಸೀತಾ ಪಾತ್ರ ನನಗೆ ತುಂಬಾ ಇಷ್ಟವಾಯಿತು. ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಿದ್ದು ನನಗೆ ಸಂತೋಷವಿದೆ. ಎನ್‍ಟಿಆರ್ ಮತ್ತು ರಾಮ್‍ಚರಣ್ ಅವರ ಜೊತೆ ಕೆಲಸ ಮಾಡಿದ್ದು ಖುಷಿ ತಂದುಕೊಟ್ಟಿದೆ. ಈ ಅದ್ಭುತವಾದ ಚಿತ್ರಕ್ಕೆ ಜೀವತುಂಬಲು ರಾಜಮೌಳಿ ಮತ್ತು ತಂಡ ತುಂಬಾ ಕಷ್ಟಪಟ್ಟಿದೆ. ಹಲವು ವರ್ಷಗಳನ್ನು ಈ ಸಿನಿಮಾಗಾಗಿ ಕೊಟ್ಟಿದ್ದಾರೆ. ಕಷ್ಟಪಟ್ಟು ಮಾಡಿರುವ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾಹಿತಿ ಹಬ್ಬಿಸಬೇಡಿ. ಇದನ್ನು ನಾನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

RRR 4

RRR ಸಿನಿಮಾದಲ್ಲಿ ಆಲಿಯಾ ಪಾತ್ರದ ಬಗ್ಗೆ ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದರು. ಆದರೆ ಈ ಸಿನಿಮಾದಲ್ಲಿ ಆಲಿಯಾ ಪಾತ್ರ ತುಂಬಾ ಚಿಕ್ಕದಾಗಿದ್ದು, ಅಷ್ಟು ಮಹತ್ವವನ್ನು ಕೊಟ್ಟಿಲ್ಲದೇ ಇರುವ ಕಾರಣ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ಬಿ’ಟೌನ್‍ನಲ್ಲಿ ಭಾರೀ ಚರ್ಚೆಯಾಗುತ್ತಿತ್ತು. ಇದರ ನಡುವೆಯೇ ಆಲಿಯಾ ಇನ್‍ಸ್ಟಾದಿಂದ RRR ಸಿನಿಮಾ ಪೋಸ್ಟರ್ ಡಿಲೀಟ್ ಮಾಡಿದ್ದು, ಅವರು ಚಿತ್ರತಂಡದ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಗಾಸಿಪ್ ಎಲ್ಲಕಡೆ ಹಬ್ಬಿತ್ತು.

Share This Article
Leave a Comment

Leave a Reply

Your email address will not be published. Required fields are marked *