ಬಾಲಿವುಡ್ (Bollywood) ಸ್ಟಾರ್ ನಟಿ ಆಲಿಯಾ ಭಟ್ (Alia Bhatt) ಭಾರಿ ಬೇಡಿಕೆ ಇರುವಾಗಲೇ ರಣ್ಬೀರ್ ಕಪೂರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ತಾಯ್ತನದ ಖುಷಿಯಲ್ಲಿದ್ದಾರೆ. ಮಗಳು ರಾಹಾ (Raha) ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮುದ್ದು ಮಗಳಿಗೆ ಹಾಲುಣಿಸುವ ಆಲಿಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.
ರಣ್ಬೀರ್ (Ranbir Kapoor) ಮತ್ತು ಆಲಿಯಾ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಹಸೆಮಣೆ ಏರಿದ್ದರು. ಈಗ ಮಗಳ ಆಗಮನ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಆಲಿಯಾ ಹಾಲುಣಿಸುವ ಫೋಟೋ ವೈರಲ್ ಆಗಿತ್ತು. ಆಲಿಯಾ ಕೆಂಪು ಸೀರೆಯಲ್ಲಿ ಮಗುವಿಗೆ ಹಾಲುಣಿಸುತ್ತಾ ನಗುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಮುಖ ಸ್ವಲ್ಪ ದುಂಡಾಗಿದೆ.
ಈಗೀಗ ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ತಮ್ಮ ಸೌಂದರ್ಯ ಕಡಿಮೆಯಾಗುತ್ತದೆ, ವಯಸ್ಸಾಗುತ್ತದೆ ಎಂದು ಸೆಲೆಬ್ರಿಟಿಗಳು ಕಾರಣ ಹೇಳುತ್ತಿರುವ ಈ ದಿನಗಳಲ್ಲಿ ಆಲಿಯಾ ನಾರ್ಮಲ್ ಡೆಲಿವರಿ ಮೂಲಕ ತಾಯ್ತನದ ಸಂಪೂರ್ಣ ಖುಷಿ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಕ್ರಿಸ್ಮಸ್ ಗೆಟ್ ಟು ಗೆದರ್ ಸಂಭ್ರಮದಲ್ಲಿ ಮೆಗಾ ಕಸಿನ್ಸ್
ಈ ನಡುವೆ ಒಂದಿಷ್ಟು ಜನ, ವೈರಲ್ ಆಗಿರುವ ಆಲಿಯಾ ಫೋಟೋ ನಕಲಿ ಎಂದು ಹೇಳುತ್ತಿದ್ದಾರೆ. ಫೇಕ್ ಫೋಟೋವನ್ನ ಕೆಲ ಕಿಡಿಗೇಡಿಗಳು ಬೇಕೆಂದೇ ಹರಿಬಿಟ್ಟಿದ್ದಾರೆ ಎಂಬ ವದಂತಿ ಕೂಡ ಇದೆ.