ಮುಂಬೈ: ಬಾಲಿವುಡ್ ಕ್ಯೂಟ್ ಕಪಲ್ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮುಂದಿನ ತಿಂಗಳು ಫ್ರಾನ್ಸ್ನಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಿ-ಟೌನ್ನಲ್ಲಿ ಹರಿದಾಡುತ್ತಿದೆ.
ರಣ್ಬೀರ್ ಹಾಗೂ ಆಲಿಯಾ ಮುಂದಿನ ತಿಂಗಳು ಫ್ರಾನ್ಸ್ನಲ್ಲಿ ಮದುವೆ ಆಗಲಿದ್ದಾರೆ ಎಂದು ವೆಬ್ಸೈಟ್ವೊಂದು ಸುದ್ದಿ ಪ್ರಕಟಿಸಿದೆ. ಮದುವೆಯಲ್ಲಿ ಶೆಫ್ ರಿತು ಡಾಲ್ಮಿಯಾ ಅವರಿಗೆ ಕ್ಯಾಟರಿಂಗ್ ಜವಾಬ್ದಾರಿ ನೀಡಲಾಗಿದೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಮದುವೆಯಲ್ಲೂ ಇವರೇ ಕ್ಯಾಟರಿಂಗ್ ಮಾಡಿದ್ದರು.
ಮದುವೆ ಬಗ್ಗೆ ಆಲಿಯಾ ಹಾಗೂ ರಣ್ಬೀರ್ ಕುಟುಂಬದವರು ಅಧಿಕೃತ ಮಾಹಿತಿ ನೀಡಲಿಲ್ಲ. ಆದರೆ ಈ ಸುದ್ದಿ ಬಿ-ಟೌನ್ನಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ರಣ್ಬೀರ್ ಹಾಗೂ ಆಲಿಯಾ ಭಟ್ ಅವರ ನಕಲಿ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು. ಈ ಆಮಂತ್ರಣ ಪತ್ರಿಕೆಯಲ್ಲಿ 2020, ಜನವರಿ 22ರಂದು ಜೋಧಪುರ್ನ ಉಮೇದ್ ಭವನದಲ್ಲಿ ರಣ್ಬೀರ್ ಹಾಗೂ ಆಲಿಯಾ ಮದುವೆಯಾಗಲಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.
ಈ ಹಿಂದೆ ರಣ್ಬೀರ್ ಹಾಗೂ ಆಲಿಯಾ ಮದುವೆ ಆಗಿರುವ ಫೋಟೋವೊಂದು ವೈರಲ್ ಆಗಿತ್ತು. ಮದುವೆ ಜಾಹೀರಾತಿನಲ್ಲಿ ನಟಿಸಿದ ಆಲಿಯಾ ಇರುವ ಫೋಟೋವನ್ನು ರಣ್ಬೀರ್ ಅವರನ್ನು ಫೋಟೋಶಾಪ್ ಮಾಡಿ ವೈರಲ್ ಮಾಡಲಾಗಿತ್ತು. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಇಟಲಿಯಲ್ಲಿ ಮದುವೆಯಾಗಿದ್ದರು.