ಮಾಸ್ಕೋ: ರಷ್ಯಾದ ವಿರೋಧ ಪಕ್ಷದ ನಾಯಕ (Russian Opposition Leader) ಮತ್ತು ರಷ್ಯಾ ಅಧ್ಯಕ್ಷ ಪುಟಿನ್ (Vladimir Putin) ವೈರಿಯಾಗಿದ್ದ ಅಲೆಕ್ಸಿ ನವಲ್ನಿ (Alexei Navalny) ಜೈಲಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನವಲ್ನಿ ವಾಯುವಿಹಾರದ ಬಳಿಕ ಪ್ರಜ್ಞೆ ಕಳೆದುಕೊಂಡರು, ಕೂಡಲೇ ಅವರಿಗೆ ವೈದ್ಯಕೀಯ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Advertisement
Advertisement
ಅಲೆಕ್ಸಿ ನವಲ್ನಿಯವರ ಸಾವಿನ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ ಎಂದು ಅವರ ಸಹಾಯಕರಾದ ಕಿರಾ ಯರ್ಮಿಶ್ ಹೇಳಿಕೊಂಡಿದ್ದಾರೆ. ಅಲೆಕ್ಸಿಯ ವಕೀಲರು ಖಾರ್ಪ್‍ಗೆ ಹೋಗುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕ ತಕ್ಷಣ ಹಂಚಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಅಲೆಕ್ಸಿ ನವಲ್ನಿಯವರನ್ನು ಉಗ್ರವಾದದ ಆರೋಪದ ಮೇಲೆ 19 ವರ್ಷಗಳ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಡಿಸೆಂಬರ್‍ನಲ್ಲಿ ಮಧ್ಯ ರಷ್ಯಾದ ವ್ಲಾಡಿಮಿರ್ ಪ್ರದೇಶದ ಜೈಲಿನಿಂದ ಉತ್ತರದ ಖಾರ್ಪ್‍ನ ಪೋಲಾರ್ ವುಲ್ಫ್‌ನ ಜೈಲಿಗೆ ಅವರನ್ನು ಸ್ಥಳಾಂತರಿಸಲಾಯಿತು. ರಷ್ಯಾದಲ್ಲಿ ಇದನ್ನು ಅತ್ಯಂತ ಕಠಿಣ ಜೈಲು ಎಂದು ಗುರುತಿಸಲಾಗುತ್ತದೆ. ಈ ಜೈಲಿನಲ್ಲಿ ಗಂಭೀರ ಅಪರಾಧಗಳನ್ನು ಎಸಗಿದವರನ್ನು ಇರಿಸಲಾಗುತ್ತದೆ ಎಂಬ ಮಾತಿದೆ.