- ಮೂರೂವರೆ ವರ್ಷದ ಹಿಂದೆ ಏರ್‌ಪೋರ್ಟಲ್ಲಿ ವಿಷ ಪ್ರಾಶನವಾಗಿತ್ತು
– ಜೈಲಲ್ಲಿದ್ದ ನವಲ್ನಿ ಬಿಡುಗಡೆಗೆ ರಷ್ಯಾ ಸರ್ಕಾರವೇ ಮನವಿ ಮಾಡಿತ್ತು
ಮಾಸ್ಕೋ: ರಷ್ಯಾದ (Russia) ವಿರೋಧ ಪಕ್ಷದ ನಾಯಕ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ವಿಮರ್ಶಕ ಅಲೆಕ್ಸಿ ನವಲ್ನಿ (Alexei Navalny) (48) ಜೈಲಿನಲ್ಲೇ ಸಾವನ್ನಪ್ಪಿದ್ದಾರೆ. ನವಲ್ನಿ ಜೈಲಿನಲ್ಲಿ 19 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರು.
Advertisement
ಆರ್ಕ್‌ಟಿಕ್ ಜೈಲು ಕಾಲೊನಿಯಲ್ಲಿ ಅವರನ್ನು ಬಂಧಿಸಿಡಲಾಗಿತ್ತು. ಜೈಲಿನಲ್ಲಿ ನಡೆದುಕೊಂಡು ಹೋಗುವಾಗ ನವಲ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಜೈಲಿನಿಂದ ಅಧಿಕೃತ ವಿವರಣೆ ಹೊರಬಿದ್ದಿದೆ. ನವಲ್ನಿ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜೈಲು ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪತ್ನಿ ಯೂಲಿಯಾ ಹಾಗೂ ಇಬ್ಬರು ಮಕ್ಕಳನ್ನು ನವಲ್ನಿ ಅಗಲಿದ್ದಾರೆ. ಇದನ್ನೂ ಓದಿ: ರಷ್ಯಾದ ಅಧ್ಯಕ್ಷ ಪುಟಿನ್ ವೈರಿ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವು
Advertisement
Advertisement
ಯಾರೀತ ಅಲೆಕ್ಸಿ ನವಲ್ನಿ?
1976ರ ಜೂನ್ 4ರಂದು ಹುಟ್ಟಿದ ನವಲ್ನಿ ರಷ್ಯಾದ ವಿಪಕ್ಷದ ಪ್ರಮುಖ ನಾಯಕ ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಖ್ಯ ರಾಜಕೀಯ ಎದುರಾಳಿ. 2021ರ ಫೆಬ್ರವರಿಯಲ್ಲಿ ವಿವಿಧ ಆರೋಪಗಳ ಮೇಲೆ ಬಂಧಿತರಾದ ನವಲ್ನಿಯನ್ನು ಮಾಸ್ಕೋದಿಂದ 235 ಕಿಲೋಮೀಟರ್ ದೂರದಲ್ಲಿರುವ ಮೆಲೆಖೋವ್‌ನಲ್ಲಿ ಜೈಲಿನಲ್ಲಿರಿಸಲಾಗಿತ್ತು. ಭ್ರಷ್ಟಾಚಾರ ವಿರೋಧಿ ಅಭಿಯಾನದ ಮೂಲಕ ರಷ್ಯಾದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ನವಲ್ನಿ ಅವರನ್ನು ‘ಪುಟಿನ್ ಹೆಚ್ಚು ಭಯಪಡುವ ವ್ಯಕ್ತಿ’ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬಣ್ಣಿಸಿತ್ತು.
Advertisement
ನವಲ್ನಿ ಜನಪ್ರಿಯ ನಾಯಕ
ವಕೀಲರಾಗಿದ್ದ ನವಲ್ನಿ 2008ರಿಂದ ರಷ್ಯಾದ ರಾಜಕೀಯದಲ್ಲಿ ಪ್ರಮುಖರಾಗಿದ್ದಾರೆ. ತನ್ನ ಬ್ಲಾಗ್‌ನ ಮೂಲಕ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದ ಅಲೆಕ್ಸಿ ನವಲ್ನಿ, ಶೀಘ್ರವಾಗಿ ರಷ್ಯಾದ ಪುಟಿನ್ ವಿರೋಧಿ ರಾಜಕೀಯ ಚಳವಳಿಯ ಕೇಂದ್ರ ಬಿಂದುವಾದರು. 2011ರ ರಾಷ್ಟ್ರೀಯ ಸಂಸತ್ತಿನ ಚುನಾವಣೆ ವೇಳೆ ಭುಗಿಲೆದ್ದ ಜನಪ್ರಿಯ ಪ್ರತಿಭಟನೆಗಳಲ್ಲಿ ಅವರು ಜನಪ್ರಿಯ ನಾಯಕರಾಗಿದ್ದರು. ಇದನ್ನೂ ಓದಿ: ರಷ್ಯಾದ ಮಹಿಳೆಯರು 8 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಿ: ಪುಟಿನ್ ಕರೆ
ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷವನ್ನು ಕಳ್ಳರು ಮತ್ತು ಕಪಟಿಗಳ ಪಕ್ಷ ಎಂದು ಬಣ್ಣಿಸಿದ ನವಲ್ನಿ ಮಾಸ್ಕೋ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿದರು. 2017 ರಲ್ಲಿ ರಷ್ಯಾದ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಅವರ ಅಕ್ರಮ ಗಳಿಕೆಯನ್ನು ಬಹಿರಂಗಪಡಿಸುವ ವೀಡಿಯೊವನ್ನು ನವಲ್ನಿ ಬಿಡುಗಡೆ ಮಾಡಿದ ನಂತರ ಭುಗಿಲೆದ್ದ ಭ್ರಷ್ಟಾಚಾರ ವಿರೋಧಿ ಅಭಿಯಾನದ ವೇಳೆ ಸಾವಿರಾರು ಜನರನ್ನು ಬಂಧಿಸಲಾಯಿತು. 2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ವಿರುದ್ಧ ನವಲ್ನಿ ಸ್ಪರ್ಧಿಸಿದ್ದರು. ಪುಟಿನ್ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ. ಹೀಗಾಗಿ ಮತದಾನ ಬಹಿಷ್ಕರಿಸಿ ಎಂದಾಗ ನವಲ್ನಿಯನ್ನು ಬಂಧಿಸಿದ್ದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.
ಮೊದಲು ಮರ ಕದ್ದ ಆರೋಪ!
ಇದರ ಮಧ್ಯೆ ನವಲ್ನಿಯ ಹತ್ಯಾ ಯತ್ನವೂ ನಡೆಯಿತು. ಇದೆಲ್ಲವನ್ನೂ ನವಲ್ನಿ ಎದುರಿಸಿ ನಿಂತರು. 2013ರಲ್ಲಿ ಕಿರೋವ್‌ನಲ್ಲಿನ ಸರ್ಕಾರಿ ಮರದ ಕಂಪನಿಯಿಂದ ಮರವನ್ನು ಕದ್ದ ಆರೋಪದ ಮೇಲೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಿದರು. ಇದನ್ನೂ ಓದಿ: ಪ್ರೇಯಸಿಯನ್ನೇ ರೇಪ್ ಮಾಡಿ, 111 ಬಾರಿ ಇರಿದು ಕೊಂದಿದ್ದ ಪ್ರೇಮಿಯನ್ನ ಬಿಡುಗಡೆಗೊಳಿಸಿದ ಪುಟಿನ್
ಸರ್ಕಾರವೇ ಮಾಡಿತ್ತು ಬಿಡುಗಡೆಗೆ ಮನವಿ!
ಸುಳ್ಳು ಕೇಸ್ ಸೃಷ್ಟಿಸಿ ನವಲ್ನಿಯನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಸಾವಿರಾರು ಜನರು ರಷ್ಯಾದ ನಗರ ನಗರಗಳಲ್ಲಿ ಬೀದಿಗಿಳಿದ ಹಿನ್ನೆಲೆಯಲ್ಲಿ ನವಲ್ನಿ ಅವರನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಬೇಕೆಂದು ಸರ್ಕಾರವು ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಅಸಾಮಾನ್ಯ ಹೆಜ್ಜೆಯಾಗಿತ್ತು ಮತ್ತು ನವಲ್ನಿ ಜನಪ್ರಿಯತೆ ಎಷ್ಟಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ನಂತರ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿತು.
ಏರ್‌ಪೋರ್ಟಲ್ಲಿ ಕುಡಿದ ಟೀಯಿಂದ ವಿಷಪ್ರಾಶನ!
ಸೈಬೀರಿಯಾದಲ್ಲಿ ಚುನಾವಣೆ ಪ್ರಚಾರ ಮಾಡುವಾಗ ನವಲ್ನಿ ವಿಷ ಪ್ರಾಶನಕ್ಕೊಳಗಾದರು. 2020ರ ಆಗಸ್ಟ್ 20ರಂದು ಸೈಬೀರಿಯಾದ ಟಾಮ್ಸ್ಕ್ ನಗರದ ವಿಮಾನ ನಿಲ್ದಾಣದಲ್ಲಿ ನವಲ್ನಿ ಸೇವಿಸಿದ ಚಹಾಕ್ಕೆ ವಿಷ ಬೆರೆಸಿದ್ದಾರೆ ಎಂದು ಬೆಂಬಲಿಗರು ಶಂಕೆ ವ್ಯಕ್ತಪಡಿಸಿದರು. ವಿಮಾನ ಪ್ರಯಾಣದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ನವಲ್ನಿಯನ್ನು ವಿಮಾನ ತುರ್ತು ಭೂಸ್ಪರ್ಶ ಮಾಡಿಸಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜರ್ಮನಿಯಲ್ಲಿ ತಜ್ಞರಿಂದ ಚಿಕಿತ್ಸೆ ಪಡೆದ ನಂತರ ಅವರು 2021ರ ಜನವರಿ 17ರಂದು ರಷ್ಯಾಕ್ಕೆ ಮರಳಿದರು. ಆದರೆ ಇದಕ್ಕೂ ಹಿಂದಿನ ಜೈಲುವಾಸದ ಅವಧಿಯಲ್ಲಿ ಪೆರೋಲ್ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿದರು. ಪೆರೋಲ್ ಉಲ್ಲಂಘನೆಗಾಗಿ ಅವರಿಗೆ ಮೂರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದನ್ನೂ ಓದಿ: ಪುಟಿನ್‌ಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ – ಕ್ರೆಮ್ಲಿನ್ ಸ್ಪಷ್ಟನೆ
ಪುಟಿನ್ ಬದ್ಧವೈರಿ!
ನ್ಯಾಯಾಂಗ ನಿಂದನೆ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಕ್ಕಾಗಿ ಸಂಗ್ರಹಿಸಿದ 47 ಲಕ್ಷ ಡಾಲರ್ ವಂಚನೆ ಸೇರಿ ವಿವಿಧ ಪ್ರಕರಣಗಳನ್ನು ನವಲ್ನಿ ವಿರುದ್ಧ ದಾಖಲಿಸಲಾಯಿತು. 2022ರಲ್ಲಿ ಈ ಪ್ರಕರಣಗಳಲ್ಲಿ ಅವರಿಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ಅವರಿಗೆ 2023ರಲ್ಲಿ ಇನ್ನೂ 19 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಏತನ್ಮಧ್ಯೆ, ನವಲ್ನಿ ಅವರು ವಿಡಿಯೋ ಲಿಂಕ್ ಬಳಸಿ ರಷ್ಯಾದ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಪುಟಿನ್ ನಡೆಸಿದ್ದ ಉಕ್ರೇನ್ ಆಕ್ರಮಣವನ್ನು ಟೀಕಿಸಿದರು.
ಜೈಲಲ್ಲಿದ್ದರೂ ಜನ ಬೆಂಬಲ ಕಮ್ಮಿಯಾಗಿರಲಿಲ್ಲ!
ತೀವ್ರ ಬೆನ್ನು ನೋವು ಮತ್ತು ಬಲಗಾಲಿನ ಮರಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ ನವಲ್ನಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ನವಾಲ್ನಿ ಬಿಡುಗಡೆಗಾಗಿ ರಷ್ಯಾದಾದ್ಯಂತ ಹೋರಾಟಗಳು ನಡೆದವು. ಬರಹಗಾರರು, ಕಲಾವಿದರು ಮತ್ತು ಹಾಲಿವುಡ್ ತಾರೆಯರು ಸೇರಿದಂತೆ ಸೆಲೆಬ್ರಿಟಿಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಬಹಿರಂಗ ಪತ್ರ ಬರೆದು ನವಲ್ನಿ ಅವರಿಗೆ ತಕ್ಷಣ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: