ಮೃತ ನವಲ್ನಿಗೆ ಗೌರವ ಸಲ್ಲಿಸಲು ಬೀದಿಗಿಳಿದ 400 ಮಂದಿಯ ಬಂಧನ

Public TV
1 Min Read
RUSSIA ARREST

ಮಾಸ್ಕೋ: ಎರಡು ದಿನಗಳ ಹಿಂದೆ ಅಧ್ಯಕ್ಷ ಪುಟಿನ್ ಕಟ್ಟಾ ವಿರೋಧಿ ಅಲೆಕ್ಸಿ ನವಲ್ನಿ (Alexei Navalny) ಅವರು ಜೈಲಿನಲ್ಲಿ ಮೃತಪಟ್ಟ ಬಳಿಕ ರಷ್ಯಾದಲ್ಲಿ ಭಾರೀ ಕೋಲಾಹಲ ಉಂಟಾಗಿದೆ. ನವಲ್ನಿಗೆ ಗೌರವ ಸಲ್ಲಿಸಲು ಬೀದಿಗಿಳಿದ ಸುಮಾರು 400 ಮಂದಿಯನ್ನು ಬಂಧಿಸಲಾಗಿದೆ.

ರಷ್ಯಾದ ವಿವಿಧ ನಗರಗಳಲ್ಲಿ ನವಲ್ನಿಗೆ ಶ್ರದ್ಧಾಂಜಲಿ ಸಲ್ಲಿಸಲು ಜನರು ಬೀದಿಗಿಳಿದರು. ಜೊತೆಗೆ ಕೈಯಲ್ಲಿ ಮೇಣದ ಬತ್ತಿ, ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ನವಲ್ನಿಯವರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿ ಪುಟಿನ್ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಪುಟಿನ್ ವಿರುದ್ಧ ಘೋಷಣೆಗಳನ್ನು ಕೂಡ ಕೂಗಿದರು.

ಇತ್ತ ರಸ್ತೆಯಲ್ಲಿ ಹೆಚ್ಚುತ್ತಿರುವ ಪ್ರತಿಭಟನಾಕಾರರ ಗುಂಪನ್ನು ಕಂಡು ರಷ್ಯಾದ ಪೊಲೀಸರು ಗೊಂದಲಕ್ಕೊಳಗಾದರು. ಇದಾದ ಬಳಿಕ ಜನರನ್ನು ಬಂಧಿಸುವ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 12 ಕ್ಕೂ ಹೆಚ್ಚು ನಗರಗಳಲ್ಲಿ ಪೊಲೀಸರು ಶನಿವಾರ ರಾತ್ರಿಯವರೆಗೆ 401 ಜನರನ್ನು ಬಂಧಿಸಿದ್ದಾರೆ. ರಷ್ಯಾದ ಎರಡನೇ ಅತಿದೊಡ್ಡ ನಗರವಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

RUSSIA

ನವಲ್ನಿ (47) ಅವರ ಹಠಾತ್ ಸಾವು ರಷ್ಯಾದ (Russia) ಅನೇಕ ಜನರಿಗೆ ಆಘಾತವನ್ನುಂಟು ಮಾಡಿದೆ. ನವಲ್ನಿ ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಗೆ ಹೆಸರುವಾಸಿಯಾಗಿದ್ದರು. ವಿಷಪ್ರಾಸನದಿಂದ ಬದುಕುಳಿದ ಬಳಿಕ ಹಾಗೂ ಜೈಲು ಶಿಕ್ಷೆಗೆ ಒಳಗಾದ ನಂತರವೂ ನವಲ್ನಿ ಪುಟಿನ್ ಅವರನ್ನು ಟೀಕಿಸುವುದನ್ನು ಮುಂದುವರಿಸಿದ್ದರು.

Share This Article