ಲಂಡನ್: ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರೇ ಆರ್ಚರ್ ಬೌಲಿಂಗ್ ನಲ್ಲಿ ಗಾಯಗೊಂಡರು. ಈ ಸಂದರ್ಭದಲ್ಲಿ ಅವರ ಗಲ್ಲದಿಂದ ರಕ್ತ ಸುರಿಯುತ್ತಿದ್ದರೂ ಪೆವಿಲಿಯನ್‍ಗೆ ತೆರಳದೆ ಬ್ಯಾಟಿಂಗ್ ನಡೆಸಿ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ.
ಪಂದ್ಯದ 8ನೇ ಓವರಿನ ಅಂತಿಮ ಎಸೆತದಲ್ಲಿ ಘಟನೆ ನಡೆದಿದ್ದು, ಆರ್ಚರ್ ಅವರ ಬೌನ್ಸರ್ ನೇರ ಅಲೆಕ್ಸ್ ರ್ ಮುಖಕ್ಕೆ ಬಡಿದ ಪರಿಣಾಮ ಅವರ ಹೆಲ್ಮೆಟ್ ಕೂಡ ಕಳಚಿ ಬಂದಿತ್ತು. ತಕ್ಷಣ ಕ್ಯಾರಿ ತಮ್ಮ ಹೆಲ್ಮೆಟನ್ನು ಹಿಡಿದರು. ಈ ಸಂದರ್ಭದಲ್ಲಿ ಕ್ಯಾರಿ ಅವರ ಗಲ್ಲದಿಂದ ರಕ್ತ ಸೋರುತ್ತಿತ್ತು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಆಟಗಾರರಲ್ಲಿ ಆತಂಕ ಮನೆ ಮಾಡಿತ್ತು.
Advertisement
https://twitter.com/LucyBluck_/status/1149261581039165440
Advertisement
ಗಾಯಗೊಂಡಿದ್ದರೂ ಮೈದಾನದಿಂದ ಹೊರ ತೆರಳದ ಕ್ಯಾರಿ ಬ್ಯಾಟಿಂಗ್ ಮುಂದುವರಿಸಿದರು. ಪಂದ್ಯದಲ್ಲಿ 70 ಎಸೆತ ಎದುರಿಸಿದ ಕ್ಯಾರಿ 4 ಬೌಂಡರಿ ನೆರವಿನಿಂದ 46 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮೊದಲ 10 ಓವರ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 27 ರನ್ ಗಳಿಸಿತ್ತು.
Advertisement
Alex Carey injured but still Playing ????#ENGvAUS pic.twitter.com/giY3ojh0xg
— Syed Atif (@iemScorpion) July 11, 2019
Advertisement
ಸಾಮಾಜಿಕ ಜಾಲತಾಣದಲ್ಲಿ ಅಲೆಕ್ಸ್ ಕ್ಯಾರಿರ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಅವರ ಹೋರಾಟದ ಮನೋಭಾವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿಶ್ವಕಪ್ ನಂತಹ ಟೂರ್ನಿಯಲ್ಲಿ ತಂಡದ ಪರ ಆಡುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡೇ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ನಡೆಸಿದ್ದರು. ಉಳಿದಂತೆ ಪಂದ್ಯದಲ್ಲಿ ಗೆಲುವು ಪಡೆದ ತಂಡ ಜುಲೈ 14 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
Running repairs ???? Alex Carey battles on #CWC19 pic.twitter.com/NkIQ4lMQZ5
— cricket.com.au (@cricketcomau) July 11, 2019
Smith survives a review for LBW from the final ball of the 46th over – Australia are 210/7. How many more can they get?#AUSvENG | #CWC19 pic.twitter.com/HnxMxCTAsx
— ICC Cricket World Cup (@cricketworldcup) July 11, 2019