ಡಿಸ್‍ಪುರ: ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೋಸ್ಟ್ ಮಾಡಿದ್ದ ಅಪ್ರಾಪ್ತ ಬಾಲಕಿಯನ್ನು ಪೊಲೀಸರು, 30 ನಿಮಿಷದೊಳಗೆ ರಕ್ಷಿಸಿದ ಘಟನೆ ಅಸ್ಸಾಂ ಗುವಾಹಟಿಯಲ್ಲಿ ನಡೆದಿದೆ.
ಅಮೆರಿಕದ ಫೇಸ್‍ಬುಕ್ ಪ್ರಧಾನ ಕಚೇರಿಯಿಂದ ಎಚ್ಚರಿಕೆ ಸಂದೇಶ ಬಂದ ನಂತರ ಪೊಲೀಸರು ಅಪ್ರಾಪ್ತೆಯನ್ನು ಕಾಪಾಡಿದ್ದಾರೆ. ಬುಧವಾರ ರಾತ್ರಿ ಫೇಸ್‍ಬುಕ್ ನಲ್ಲಿ ಅಪ್ರಾಪ್ತೆ `ನಾನು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಸ್ಟೇಟಸ್ ಹಾಕಿಕೊಂಡಿದ್ದಾಳೆ. ಇದನ್ನು ಗಮನಿಸಿದ ಫೇಸ್ ಬುಕ್ ಕಚೇರಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದೆ.
Advertisement
ಫೇಸ್ ಬುಕ್ ಕಚೇರಿಯಿಂದ ಬಂದ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು 30 ನಿಮಿಷದಲ್ಲಿ ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಕುರಿತು ಬಾಲಕಿಯ ಕುಟುಂಬಕ್ಕೂ ಮಾಹಿತಿ ನೀಡಿದ್ದು, ಸದ್ಯ ಬಾಲಕಿ ಕುಟುಂಬಸ್ಥರ ಬಳಿ ಸುರಕ್ಷಿತವಾಗಿದ್ದಾಳೆ. ಬಾಲಕಿಯನ್ನು ರಕ್ಷಣೆ ಮಾಡಿದ ಬಳಿಕ ಫೇಸ್ ಬುಕ್ ಸ್ಟೇಟಸ್ ಅನ್ನು ಡಿಲೀಟ್ ಮಾಡಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
Advertisement
Info was received from Facebook last night that a minor girl had updated her status as- 'I am gonna to commit suicide today'. The child was located in 30 mins & her safety ensured. She & her family were counselled. She is safe and in their care. @CMOfficeAssam @IPS_Association pic.twitter.com/w4u3XxZY0a
— Assam Police (@assampolice) July 24, 2018
Advertisement
ಘಟನೆ ಕುರಿತು ವಿವರಣೆ ನೀಡಿದ ಅಸ್ಸಾಂ ಎಜಿಡಿಪಿ ಹರ್ಮೀತ್ ಸಿಂಗ್, ಫೇಸ್ ಬುಕ್ ಕಚೇರಿಯಿಂದ ಕಳೆದ ರಾತ್ರಿ ನಮ್ಮ ನೋಡಲ್ ಅಧಿಕಾರಿಗೆ ಎಚ್ಚರಿಕೆ ಸಂದೇಶ ಬಂದಿದೆ. ಬಳಿಕ ನಮ್ಮ ಸಾಮಾಜಿಕ ಜಾಲತಾಣ ಕೇಂದ್ರದ ಸಹಾಯದಿಂದ ಬಾಲಕಿಯ ವಿಳಾಸ ಪತ್ತೆ ಮಾಡಿ, ರಕ್ಷಣೆ ಮಾಡಲಾಯಿತು. ಇದು ಸಾಮಾಜಿಕ ಜಾಲತಾಣದ ಬಹುದೊಡ್ಡ ಯಶಸ್ಸು ಎಂದು ಹೇಳಿದ್ದಾರೆ.
Advertisement
ಮಕ್ಕಳ ಕಳ್ಳರ ವದಂತಿ ಸೇರಿದಂತೆ ಸುಳ್ಳು ಮಾಹಿತಿಯನ್ನು ರವಾನಿಸುವವರ ವಿರುದ್ಧ ಕ್ರಮಕೈಗೊಳ್ಳಲು ಅಸ್ಸಾಂ ಪೊಲೀಸರು ಸಾಮಾಜಿಕ ಜಾಲತಾಣಾದಲ್ಲಿ ಹರಿದಾಡುತ್ತಿರುವ ವದಂತಿ ವಿರೋಧಿ ಕೇಂದ್ರವನ್ನು ಸ್ಥಾಪಿಸಿದ್ದರು. ಕಳೆದ ತಿಂಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಂದ ವದಂತಿ ನಂಬಿ ಸಾರ್ವಜನಿಕರು ಇಬ್ಬರು ವ್ಯಕ್ತಿಗಳನ್ನು ಅಸ್ಸಾಂನ ಕಾರ್ಬಿ ಅಂಗ್ಲೋನ್ಗ ಜಿಲ್ಲೆಯಲ್ಲಿ ಕೊಲೆ ಮಾಡಿದ್ದರು. ಈ ಘಟನೆ ಬಳಿಕ ಅಸ್ಸಾಂ ಪೊಲೀಸರು ಸಾಮಾಜಿಕ ಜಾಲತಾಣ ಕೇಂದ್ರವನ್ನು ಪ್ರಾರಂಭಿಸಿದ್ದರು.