ಚೆನ್ನೈ: ರೈಲಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯನ್ನು ರೈಲ್ವೇ ಭದ್ರತಾ ದಳ(ಆರ್ ಪಿಎಫ್) ಸಿಬ್ಬಂದಿಯೊಬ್ಬರು ರಕ್ಷಿಸಿರುವುದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಮಹಿಳೆಯನ್ನು ರಕ್ಷಿಸಿದವರು ಆರ್ ಪಿಎಫ್ ನ ಕಾನ್‍ಸ್ಟೇಬಲ್ ಕೆ.ಶಿವಾಜಿ ಆಗಿದ್ದು, ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಸತ್ಯರಾಜ್ (26) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 11.45 ಗಂಟೆಗೆ ಎಂಆರ್ ಟಿಎಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
Advertisement
ರೈಲು ಪಾರ್ಕ್ ಟೌನ್‍ನಿಂದ ಚಲಿಸುತ್ತಿದ್ದಂತೆ ಮಹಿಳೆ ಕಿರುಚುತ್ತಿದ್ದ ಶಬ್ದವನ್ನು ಕೆ.ಶಿವಾಜಿ ಅವರು ಕೇಳಿಸಿಕೊಂಡಿದ್ದಾರೆ. ತಕ್ಷಣವೇ ಚಿಂತಿದ್ರೆಪ್ ನಿಲ್ದಾಣಕ್ಕೆ ರೈಲು ಬಂದು ನಿಲ್ಲುವಷ್ಟರಲ್ಲಿ ಅವರು ಮಹಿಳಾ ಬೋಗಿಗೆ ದೌಡಾಯಿಸಿದ್ದಾರೆ. ಈ ವೇಳೆ ರಕ್ತ ಸ್ರಾವವಾಗಿ ಮಹಿಳೆ ಬಿದ್ದಿದ್ದರು. ಕೂಡಲೇ ಅವರು ಮಹಿಳೆಯನ್ನು ರಕ್ಷಿಸಿದ್ದು, ಆರೋಪಿಯು ಮದ್ಯ ಸೇವನೆ ಮಾಡಿದ್ದ ಎಂದು ವರದಿಯಾಗಿದೆ.
Advertisement
ಆರೋಪಿ ಸತ್ಯರಾಜ್ ಖಾಸಗಿ ಸಂಸ್ಥೆಯಲ್ಲಿ ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯು 25 ವರ್ಷದವರಾಗಿದ್ದು, ಮಹಿಳಾ ಮೀಸಲು ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಅವರು ಬಡವರಾಗಿದ್ದು, ಕೆಲಸದಿಂದ ಮನೆಗೆ ಮರಳುತ್ತಿರುವ ವೇಳೆ ಈ ಘಟನೆ ನಡೆದಿದೆ.
Advertisement
ನಾನು ಮಹಿಳೆಯರ ಮೀಸಲು ಬೋಗಿಯಲ್ಲಿ ಕುಳಿತ್ತಿದ್ದೆ. ಸ್ವಲ್ಪ ನಿದ್ರೆಗೆ ಜಾರಿದ್ದೆ. ನನ್ನ ಮುಂದೆ ವ್ಯಕ್ತಿ ಬಂದು ನಿಂತ. ತಕ್ಷಣವೇ ನಾನು ಕಿರಿಚಿದೆ. ಆತ ನನ್ನನ್ನು ಎಳೆದು ಕೆಳಗೆ ದೂಡಿದ. ಆಗ ನಾನು ಪ್ರಜ್ಞೆ ತಪ್ಪಿಬಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.
Advertisement
ಹಲ್ಲೆಗೆ ಒಳಗಾದ ಮಹಿಳೆಯಿಂದ ದೂರು ದಾಖಲಿಸಿಕೊಂಡಿದ್ದು, ಆರೋಪಿಯ ಬಂಧಿಸಲಾಗಿದೆ. ಮಹಿಳೆಯು ಕಿರುಚಿದ್ದರಿಂದ ಆರೋಪಿಯನ್ನು ಬಂಧಿಸಲು ಸಹಾಯವಾಗಿದೆ ಎಂದು ರೈಲ್ವೆ ಪೊಲೀಸ್ ಜನರಲ್ ಇನ್ಸ್‍ಪೆಕ್ಟರ್ ಪೊನ್ ಮನಿಕಾವೆಲ್ ಹೇಳಿದ್ದಾರೆ. ಅಲ್ಲದೇ ಅವರು ಪೊಲೀಸ್ ಕಾನ್ಸ್‍ಸ್ಟೇಬಲ್ ಕೆ.ಶಿವಾಜಿ ಅವರ ಸಾಹಸ ಹಾಗೂ ಜಾಗೃತಿಯನ್ನು ಮೆಚ್ಚಿ 5 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.