ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಬಿಯರ್ ಬೆಲೆ ಹೆಚ್ಚಳ (Beer Rate Hike) ಮಾಡಿದ ಹಿನ್ನಲೆ ದುಬಾರಿ ಹಣ ತೆತ್ತು ಬಿಯರ್ ಕುಡಿಯುವುದರ ಬದಲು, ಮದ್ಯಪ್ರಿಯರು ಹಾಟ್ ಡ್ರಿಂಕ್ಸ್ (Hot Drinks) ಮೊರೆ ಹೋಗಿದ್ದಾರೆ. ಇದ್ರಿಂದ ಬಿಯರ್ ಮಾರಾಟ ಹಾಗೂ ಬೇಡಿಕೆಯಲ್ಲಿ ಗಣನೀಯವಾಗಿ ಕುಂಠಿತವಾಗಿದ್ದು, ಹಾಟ್ ಡ್ರಿಂಕ್ಸ್ ಬೇಡಿಕೆ ಹೆಚ್ಚಳವಾಗಿದೆ.
ಹೌದು.. ಜನವರಿ 20, 2025ರಂದು ರಾಜ್ಯ ಸರ್ಕಾರ ಕರ್ನಾಟಕ ಅಬಕಾರಿ ನಿಯಮಗಳಲ್ಲಿ ತಿದ್ದುಪಡಿ ತಂದು ಬಿಯರ್ ಬೆಲೆ ಹೆಚ್ಚಳ ಮಾಡಿದೆ. ಹೊಸ ಅಬಕಾರಿ ನಿಯಮಗಳ ಪ್ರಕಾರ ಲೀಟರ್ ಬಿಯರ್ ಮೇಲೆ ಶೇ.12 ರಿಂದ ಶೇ.20ರಷ್ಟು ಬೆಲೆ ಹೆಚ್ಚಳವಾಗಿದೆ. ಇದರ ಪರಿಣಾಮ ಬಿಯರ್ ಪ್ರಿಯರು ದುಬಾರಿ ಬಿಯರ್ ಕುಡಿಯುವುದರ ಬದಲು, ಹಾಟ್ ಡ್ರಿಂಕ್ಸ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ – ‘ಡೆವಿಲ್’ ಸಿನಿಮಾದ ಟೀಸರ್ ರಿಲೀಸ್
ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಕಳೆದ ಒಂದು ತಿಂಗಳಲ್ಲಿ ಶೇ.30 ರಷ್ಟು ಬಿಯರ್ ಬೇಡಿಕೆ ಕುಂಠಿತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2024ರ ಡಿಸೆಂಬರ್ ತಿಂಗಳಿನಲ್ಲಿ ಬರೋಬ್ಬರಿ 63,303 ಕೇಸ್ ಬಿಯರ್ ಮಾರಾಟವಾಗಿದ್ರೆ ಜನವರಿ 2025 ಜನವರಿಯಲ್ಲಿ 44,428 ಕೇಸ್ ಮಾರಾಟವಾಗಿದ್ದು, ಕೇವಲ ಒಂದೇ ತಿಂಗಳಲ್ಲಿ ಬರೋಬ್ಬರಿ 18,875 ಕೇಸ್ ಬಿಯರ್ ಮಾರಾಟ ನಿಲ್ ಆಗಿದೆ. ಇದನ್ನೂ ಓದಿ: ಶಿವಮೊಗ್ಗ | ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು – ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು
ಇನ್ನೂ ಮದ್ಯ ಪ್ರಿಯ ಹೊಸ ಗ್ರಾಹಕರು, ಮೊದಲು ಬಿಯರ್ ಅಭ್ಯಾಸ ಮಾಡಿಕೊಂಡು ನಂತರ ಹಾಟ್ ಡ್ರಿಂಕ್ಸ್ ಸೇವನೆ ಸರ್ವೆ ಸಾಮಾನ್ಯವಾಗಿತ್ತು. ಆದ್ರೆ ಬಿಯರ್ ಖರೀದಿಗೆ ಹೋದ ಅದೇಷ್ಟೊ ಗ್ರಾಹಕರು ಬಿಯರ್ ಬೆಲೆ ಕೇಳಿ ಶಾಕ್ ಆಗ್ತಿದ್ದು ಹಾಟ್ ಡ್ರಿಂಕ್ಸ್ ಖರೀದಿ ಮಾಡ್ತಿದ್ದಾರಂತೆ, ಸ್ವತಃ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಬಾರ್‌ನಲ್ಲಿ ಒಂದು ಬಾಟಲ್ ʻಕೆಎಫ್ʼ ಬಿಯರ್ ಬೆಲೆ 185 ರೂ., ಹಾಗೆ ಟೂಬೊರ್ಗೊ 195 ರೂ., ಯು.ಬಿ 160 ರೂ., ಬುಲೆಟ್ 150 ರೂ., ಬಡ್‍ವೈಜರ್ 245 ರೂ., ಕಾಲ್ಸ್ ಬರ್ಗ್ 250 ರೂ. ಸೇರಿದಂತೆ ಯಾವುದೆ ಬಿಯರ್ ಕೇಳಿದ್ರೂ 150 ರೂಪಾಯಿ ಮೇಲಿದೆ. ಇದ್ರಿಂದ ಬಿಯರ್ ಪ್ರಿಯರು ಬಿಯರ್ ಬಾಟಲ್ ಸಹವಾಸ ಬಿಟ್ಟು ನೈಂಟಿ ಹಾಟ್ ಡ್ರಿಂಕ್ಸ್ ಹೊಡೆದು ಕಿಕ್ ಏರಿಸಿಕೊಳ್ತಿದ್ದಾರೆ.
ಬಿಯರ್ ಬೇಡಿಕೆ ಗಮನಿಸಿದ ರಾಜ್ಯ ಸರ್ಕಾರ, ಸ್ವತಃ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತಂದು ಬಿಯರ್ ಬೆಲೆ ಹೆಚ್ಚಳ ಮಾಡಿದೆ, ಇದ್ರಿಂದ ಬಿಯರ್ ಪ್ರೀಯರು ಬಿಯರ್ ಮೇಲೆ ಮುನಿಸಿಕೊಳ್ಳುವಂತಾಗಿದೆ. ಇನ್ನೂ ಬೇಸಿಗೆಗೂ ಆರಂಭಕ್ಕೂ ಮುನ್ನವೇ ಬಿಸಿಲಿನ ತಾಪ ತಾರಕಕ್ಕೇರಿದ್ದು ತಣ್ಣನೆಯ ಬಿಯರ್ ಕುಡಿದು ದೇಹ ತಣ್ಣಗೆ ಮಾಡಿಕೊಳ್ಳೋಣ ಅಂದುಕೊಂಡಿದ್ದ ಬಿಯರ್ ಪ್ರಿಯರಿಗೆ ಸರ್ಕಾರದ ದರ ಏರಿಕೆಯಿಂದ ಬಿಯರ್ ಬಿಟ್ಟು ಐಎಂಎಲ್ ಹಾಟ್‍ಡ್ರಿಂಕ್ಸ್ ಕುಡಿಯುವಂತಾಗಿದೆ. ಇದನ್ನೂ ಓದಿ: ಮೆಟ್ಟಿಲುಗಳ ಮೇಲೆ ಉಸಿರು ಚೆಲ್ಲಿದ ಪ್ರಯಾಣಿಕರು – ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತಕ್ಕೆ ಕಾರಣವೇನು?