ಚೆನ್ನೈ: ಕೋವಿಡ್-19 ಲಸಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ, ಸರ್ಕಾರಿ ಸ್ವಾಮ್ಯದ ಟಿಎಎಸ್‍ಎಂಸಿ ಮಳಿಗೆಗಳಿಂದ ಮದ್ಯ ಖರೀದಿಸುವವರು ಎರಡೂ ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕೆಂದು ತಮಿಳುನಾಡಿನ ನೀಲಗಿರಿ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
Advertisement
ತಮಿಳುನಾಡಿನಲ್ಲಿ ಇಂತಹ ನಿಯಮವನ್ನು ಜಾರಿಗೊಳಿಸಿದ ಮೊದಲ ಜಿಲ್ಲೆ ನೀಲಗಿರಿಯಾಗಿದ್ದು, ಇಲ್ಲಿನ ಟಿಎಎಸ್‍ಎಂಸಿ ಮಳಿಗೆಗಳಿಂದ ಮದ್ಯ ಖರೀದಿಸುವವರು ಲಸಿಕೆ ಪಡೆದ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್‍ನನ್ನು ಸಲ್ಲಿಸಬೇಕಾಗುತ್ತದೆ. ಇದನ್ನೂ ಓದಿ:ಪಬ್ಲಿಕ್ ಟಿವಿ ಇಂಪಾಕ್ಟ್ – ರಸ್ತೆ ಗುಂಡಿಗಳನ್ನು ಮುಚ್ಚಲು ಟಾಸ್ಕ್ ಪೋರ್ಸ್ ರಚಿಸಿದ ಬಿಬಿಎಂಪಿ
Advertisement
Advertisement
ಕೆಲವು ಮಂದಿ ಮದ್ಯಸೇವನೆ ಮಾಡದೇ ತಮಗೆ ಇರಲು ಆಗುವುದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಮದ್ಯ ಖರೀದಿಸುವವರು ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರವನ್ನು ತೋರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಶೇ 97ರಷ್ಟು ಜನರು ವ್ಯಾಕ್ಸಿನ್ ಮೊದಲ ಡೋಸ್ ಸ್ವೀಕರಿಸಿದ್ದು, ಇದೀಗ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುತ್ತಿದೆ. ಇದನ್ನೂ ಓದಿ:ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!
Advertisement