ಬೆಂಗಳೂರು: ಏಪ್ರಿಲ್ 14ರ ನಂತರ ಮದ್ಯ ಸಿಗುತ್ತಾ? ಮದ್ಯ ಪ್ರೇಮಿಗಳ ಈ ಪ್ರಶ್ನೆಗೆ ಶೀಘ್ರವೇ ಶುಭಸುದ್ದಿ ಸಿಗುವ ಲಕ್ಷಣ ಕಾಣಿಸಿದೆ.
ಏಪ್ರಿಲ್ 30ರವರೆಗೆ ಲಾಕ್‍ಡೌನ್ ವಿಸ್ತರಿಸುವ ಸಂಬಂಧ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿಎಂ ಯಡಿಯೂರಪ್ಪ, ಇನ್ನೆರಡು ದಿನದಲ್ಲಿ ನಿರ್ಧಾರವಾಗಲಿದೆ. ಮದ್ಯ ಮಾರಾಟದ ಬಗ್ಗೆಯೂ ಆಗಲೇ ನಿರ್ಧಾರ ಮಾಡುತ್ತೇವೆ. ಪ್ರಧಾನಿ ಮೋದಿ ಮಾರ್ಗಸೂಚಿ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
Advertisement
Advertisement
ಬಾರ್‍ಗಳಿಗೆ ಅವಕಾಶ ನೀಡದೇ ಎಂಎಸ್‍ಐಎಲ್ ಅಂಗಡಿಗಳ ಮೂಲಕ ಮದ್ಯ ಮಾರಾಟಕ್ಕೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಇನ್ನು ಎರಡು ದಿನಗಳ ಈ ಬಗ್ಗೆ ಸರ್ಕಾರದಿಂದ ಸ್ಪಷ್ಟವಾದ ನಿರ್ಧಾರ ಪ್ರಕಟವಾಗಲಿದೆ.
Advertisement
ರಾಜ್ಯದಲ್ಲಿ ಮದ್ಯ ಸಿಗದೇ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಖಿನ್ನತೆಗೆ ಒಳಗಾಗಿ ಮಾನಸಿಕವಾಗಿ ಕುಗುತ್ತಿದ್ದಾರೆ ಎನ್ನುವ ವಿಚಾರವನ್ನು ಮನಶಾಸ್ತ್ರಜ್ಞರು ತಿಳಿಸಿದ್ದರು.
Advertisement
ಮದ್ಯ ಸಿಗದ ಕಾರಣ ದುಬಾರಿ ಬೆಲೆಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದ ಹಲವು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂಗಡಿಗೆ ಕನ್ನ ಹಾಕಿ ಮದ್ಯವನ್ನು ಕಳ್ಳತನ ಮಾಡಿದ್ದ ಪ್ರಕರಣಗಳು ದಾಖಲಾಗಿದ್ದವು.