ತುಮಕೂರು: ವಿದ್ಯಾರ್ಥಿಗಳ ವಿದ್ಯಾರ್ಜನೆಯ ಕೇಂದ್ರವಾಗಿ ಜ್ಞಾನ ದೇಗುಲವಾಗ ಬೇಕಿದ್ದ ಕಾಲೇಜು ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.
ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ಬಿಎ ಮತ್ತು ಬಿಕಾಂ ತರಗತಿಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಹಾಡಹಗಲೆನ್ನದೆ, ರಾತ್ರಿಯೆನ್ನದೆ ಆವರಣ ಒಳಗೆಯೇ ಕುಡುಕರು ಎಣ್ಣೆ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.
Advertisement
ನೋಣವಿನಕೆರೆಯ ಕೆಲ ಪುಂಡ-ಪೋಲಿಗಳು ನಿರಂತರವಾಗಿ ಇಲ್ಲೆ ಎಣ್ಣೆ ಪಾರ್ಟಿ ಮಾಡುತಿದ್ದಾರೆ. ಸ್ವಲ್ಪ ಗಿಡಗಂಟೆಗಳು ಬೆಳೆದಿದ್ದರಿಂದ ಇನ್ನೂ ಅನುಕೂಲವಾಗಿದೆ. ಆವರಣದ ತುಂಬಾ ಮದ್ಯದ ಬಾಟಲಿಗಳೇ ತುಂಬಿ ಹೋಗಿದೆ. ಅಷ್ಟೇ ಅಲ್ಲದೇ ಎಣ್ಣೆ ಕುಡಿದ ನಶೆಯಲ್ಲಿದ್ದ ಕುಡುಕರು ಕಾಲೇಜಿನ ಕಿಟಕಿ ಗಾಜು, ನೀರಿನ ಟ್ಯಾಂಕ್ ಗಳನ್ನು ಒಡೆದು ಹಾಕಿ ಅವಾಂತರ ಸೃಷ್ಟಿಸಿದ್ದಾರೆ.
Advertisement