ಲಂಡನ್: ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ಮೋಸದಾಟವಾಡಿ ಶಿಕ್ಷೆಯನ್ನು ಅನುಭವಿಸಿದ್ದರು. ಆದರೆ ಅವರು ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರವಲ್ಲದೇ ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲೂ ಬಾಲ್ ಟ್ಯಾಂಪರಿಂಗ್ ಮಾಡುತ್ತಿದ್ದ ಸಂಗತಿ ಸದ್ಯ ಬೆಳಕಿಗೆ ಬಂದಿದೆ.
ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಅಲಿಸ್ಟ್ರೈರ್ ಕುಕ್ ಈ ಸಂಗತಿಯನ್ನು ಬಹಿರಂಗ ಪಡಿಸಿದ್ದು, ಸೆ.5 ರಂದು ಬಿಡುಗಡೆಯಾದ ಕುಕ್‍ರ ಆತ್ಮಚರಿತ್ರೆಯಲ್ಲಿ ಈ ಕುರಿತು ವಿವರಿಸಿದ್ದಾರೆ.
Advertisement
Advertisement
2017-18ರ ಆ್ಯಶಸ್ ಸರಣಿಯ ವೇಳೆ ನಡೆದ ಘಟನೆಯನ್ನು ಕುಕ್ ತಿಳಿಸಿದ್ದು, ವಾರ್ನರ್ ಹಾಗೂ ಇಂಗ್ಲೆಂಡಿನ ಕೆಲ ಆಟರೊಂದಿಗೆ ಬಿಯರ್ ಕುಡಿಯುತ್ತಿದ್ದ ವೇಳೆ ವಾರ್ನರ್ ಈ ಸಂಗತಿಯನ್ನು ತಿಳಿಸಿದ್ದಾಗಿ ಹೇಳಿದ್ದಾರೆ. 2 ಬಾಟಲ್ ಬಿಯರ್ ಕುಡಿದ ಮೇಲೆ ವಾರ್ನರ್ ದೇಶಿಯ ಕ್ರಿಕೆಟ್ ಪಂದ್ಯವೊಂದರ ಸಂದರ್ಭದಲ್ಲಿ ಬಾಲ್ ಟ್ಯಾಪರಿಂಗ್ ನಡೆಸಲು ಬೇಕಾದ ವಸ್ತುವನ್ನು ಕೈಬೆರಳಿಗೆ ಕಟ್ಟಿಕೊಂಡು ತೆರಳುತ್ತಿದ್ದಾಗಿ ತಿಳಿಸಿದ್ರು. ಆದರೆ ಸ್ಮಿತ್ ತಕ್ಷಣ ಎಚ್ಚೆತ್ತು, ಇದನ್ನು ನೀನು ಹೇಳಬಾರದಿತ್ತು ಎಂದು ಎಚ್ಚರಿಕೆ ನೀಡಿದ್ದಾಗಿ ಅಂದು ಘಟನೆಯ ಬಗ್ಗೆ ಕುಕ್ ವಿವರಿಸಿದ್ದಾರೆ.
Advertisement
ದಕ್ಷಿಣ ಆಫ್ರಿಕಾ ಸರಣಿ ಸಂದರ್ಭದಲ್ಲಿ ನಡೆದ ಬಾಲ್ ಟ್ಯಾಪರಿಂಗ್ ಪ್ರಕರಣದಲ್ಲಿ ತಂಡದ ನಾಯಕರಾಗಿದ್ದ ಸ್ಮಿತ್, ಉಪನಾಯಕ ವಾರ್ನರ್ 1 ವರ್ಷ ನಿಷೇಧ ಅನುಭವಿಸಿದ್ದರು. ಇತ್ತ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಸಿಡಿಸಿ ದಾಖಲೆ ಹೊಂದಿರುವ ಕುಕ್ 2018ರಲ್ಲಿ ಭಾರತ ಪ್ರವಾಸ ಬಳಿಕ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.