ನವದೆಹಲಿ: ರಾಜ್ಯದಲ್ಲಿ ಹಿಜಬ್ ವಿವಾದ ತಣ್ಣಗಾಗುತ್ತಿದೆ. ಆದರೆ ಇದೀಗ ಈ ಬಗ್ಗೆ ಜಾಗತಿಕ ಭಯೋತ್ಪಾದಕ ಗುಂಪು ಅಲ್ ಖೈದಾದ ನಾಯಕ ಅಯ್ಮಾನ್ ಅಲ್ ಜವಾಹಿರಿ ಪ್ರತಿಕ್ರಿಯಿಸಿ ಭಾರತೀಯ ಮುಸ್ಲಿಂರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾನೆ.
ಒಂಬತ್ತು ನಿಮಿಷಗಳ ವೀಡಿಯೋ ಇರುವ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ವೀಡಿಯೋದಲ್ಲಿ ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದ ಮುಸ್ಕಾನ್ ಖಾನ್‍ನ್ನು ಹೊಗಳಿದ್ದಾನೆ. ಮುಸ್ಕಾನ್ ಖಾನ್ ಬುರ್ಖಾ ಧರಿಸುವವರನ್ನು ವಿರೋಧಿಸುವವರ ವಿರುದ್ಧವೇ ಅಲ್ಲಾಹು ಅಕ್ಬರ್ ಎಂದು ಕೂಗುವ ಮೂಲಕ ಅವರ ಜೈ ಶ್ರೀರಾಮ್ ಘೋಷಣೆಯನ್ನು ವಿರೋಧಿಸಿದ್ದಾಳೆ ಎಂದು ಶ್ಲಾಘಿಸಿದ್ದಾನೆ.
ದಿ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಬರೆಯಲಾದ ಪೋಸ್ಟರ್‌ನ ಶೀರ್ಷಿಕೆಯಿರುವ ವೀಡಿಯೋದಲ್ಲಿ ಮುಸ್ಕಾನ್‍ನನ್ನು ಹೊಗಳಿ ರಚಿಸಿದ ಕವನವನ್ನು ಓದಿದ್ದಾನೆ. ಈ ಕವಿತೆಯಲ್ಲಿ ಮುಸ್ಕಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವೀಡಿಯೋಗಳನ್ನು ನೋಡುವ ಮೂಲಕ ತಿಳಿದುಕೊಂಡಿದ್ದೇನೆ. ಇವಳಿಂದ ತುಂಬಾ ಪ್ರಭಾವಿತರಾಗಿದ್ದೇನೆ ಎಂಬ ಸಾಲಿದೆ. ಕವಿತೆ ಓದಿದ ನಂತರ ಫ್ರಾನ್ಸ್ ಹಾಗೂ ಈಜಿಪ್ಟ್ ಸೇರಿದಂತೆ ಹಿಜಬ್ ನಿಷೇಧಿಸಿದ ದೇಶಗಳ ಮೇಲೆ ಕಿಡಿಕಾರಿದ್ದಾನೆ.
ನವೆಂಬರ್ ನಂತರದ ಮೊದಲ ವೀಡಿಯೋ ಇದಾಗಿದ್ದು, ಮೋಸ್ಟ್ ವಾಂಟೆಡ್ ಜಿಹಾದಿ ಭಯೋತ್ಪಾದಕರ ಪಟ್ಟಿಯಲ್ಲಿ ಈತ ಸ್ಥಾನ ಪಡೆದಿದ್ದಾನೆ. ಜವಾರಿಯ 2020ರಲ್ಲಿ ಸಹಜವಾ ಗಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಕೆಲ ದಿನಗಳ ನಂತರ ದಿನಾಂಕವಿಲ್ಲದ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಸ್ಕೈವಾಕ್‍ನಿಂದ ಜಿಗಿದ ವ್ಯಕ್ತಿ – ಸೊಂಟಕ್ಕೆ ಗಂಭೀರ ಪೆಟ್ಟು
ನವೆಂಬರ್ 2021ರ ಒಂದು ವೀಡಿಯೊದಲ್ಲಿ, ವಿಶ್ವಸಂಸ್ಥೆ ಒಡ್ಡುವ ಬೆದರಿಕೆಗಳ ಬಗ್ಗೆ ಇಸ್ಲಾಮಿಕ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದ. ಈತ ಎಲ್ಲಿದ್ದಾನೆ ಎಂಬ ವಿಚಾರ ತಿಳಿದು ಬಂದಿಲ್ಲ. ಸದ್ಯ ಈತ ಅಫ್ಘಾನಿಸ್ತಾನಲ್ಲಿ ಇದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ, ನಾನು ಕ್ಯಾಬಿನೆಟ್ ಸೇರಲಿದ್ದೇನೆ: ಆರ್.ಶಂಕರ್