ಮಂಗಳೂರು: ತುಮಕೂರು (Tumkur) ಜಿಲ್ಲೆಯ ಮಧುಗಿರಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ (Throwball Competition) ಮಂಗಳೂರಿನ ಅಲ್ ಬದ್ರಿಯಾ ಪ್ರೌಢಶಾಲೆಯ 17 ವರ್ಷದೊಳಗಿನ ಬಾಲಕರ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಬೆಳಗಾವಿ ಮತ್ತು ಕಲಬುರಗಿ ಜಿಲ್ಲಾ ತಂಡಗಳ ವಿರುದ್ಧ ನೇರ ಸೆಟ್‌ಗಳಲ್ಲಿ ಗೆದ್ದು, ಬಳಿಕ ಬೆಂಗಳೂರು ತಂಡವನ್ನ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸೈಬರ್ ವಂಚನೆ ಬಗ್ಗೆ ಜಾಗೃತರಾಗಿರಬೇಕು: ಎಸಿಪಿ ನಜ್ಮಾ ಫಾರೂಕಿ
ಪ್ರಶಸ್ತಿ ಗೆದ್ದ ಬಾಲಕರ ತಂಡ, ತರಬೇತುದಾರರಾದ ಸಿನಾನ್ ಮತ್ತು ಶರತ್, ಮುಖ್ಯಶಿಕ್ಷಕರಾದ ಸತೀಶ್ ಹಾಗೂ ಪ್ರಾಂಶುಪಾಲರಾದ ದೀಪಾ ಅವರಿಗೆ ಕಾಲೇಜು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
ಅಲ್ಲದೇ ಅಲ್ ಬದ್ರಿಯಾ ಪ್ರೌಢಶಾಲೆಯ ಇತಿಹಾಸದಲ್ಲಿ ಇದೊಂದು ಅವಿಸ್ಮರಣಿಯ ಕ್ಷಣವೆಂದು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಇದನ್ನೂ ಓದಿ: ಬಿಪಿಎಲ್ ಪರಿಷ್ಕರಣೆ – ಆಕ್ಷೇಪಣೆಗೆ ಎರಡೇ ದಿನ ಮಾತ್ರ ಬಾಕಿ!


