ಸಿಟಿಯಲ್ಲಿ ಬೆಳೆದ ಹುಡುಗಿಯರು ತಮ್ಮ ಆಧುನಿಕ ಜೀವನಶೈಲಿಯನ್ನು ತ್ಯಜಿಸಿ, ಹಳ್ಳಿ ಯುವತಿಯರಂತೆ ಜೀವನ ನಡೆಸುವುದೇ ‘ಹಳ್ಳಿ ಪವರ್’ ಶೋ. ಇಲ್ಲಿ ಹಳ್ಳಿಯ ದಿನನಿತ್ಯದ ಕೆಲಸಗಳನ್ನು ಸ್ಪರ್ಧಿಗಳಿಗೆ ಟಾಸ್ಕ್ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಈ ಶೋನಲ್ಲಿ ಸಿಟಿ ಹುಡುಗಿಯರು ಹಳ್ಳಿಯಲ್ಲಿ ಹೇಗೆ ಜೀವನ ನಡೆಸಲಿದ್ದಾರೆ ಎಂಬುದೇ ಈ ಶೋನ ಹೈಲೆಟ್ ಆಗಿರಲಿದೆ. ರಗಡ್ ರಶ್ಮಿ, ಸೋನಿಯಾ ಜೋಸೆಫ್, ಟೆಲಿನ್ ಮಹಿಮಾ, ಗಾನವಿ ಗೌಡ, ಕಾವ್ಯ, ಗಗನಾ ಮೂರ್ತಿ, ದಿಯಾ ಅರಸ್, ಮೋನಿಷಾ ಪುಟ್ಟಮದು, ಫರೀನ್, ಕವನಾ, ಧನ್ಯ, ಸಿಂಚನ ಸ್ಪರ್ಧಿಗಳಾಗಿದ್ದಾರೆ. ದಿನ ಹೋದಂತೆ ಟಾಸ್ಕ್ ನ ತೀವ್ರತೆ ಹೆಚ್ಚಾಗಿರುವುದು ವೀಕ್ಷಕರಲ್ಲಿ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ.ಇದನ್ನೂ ಓದಿ: ʻಸಪ್ಟೆಂಬರ್ 21ʼರಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಉಪೇಂದ್ರ
‘ಹಳ್ಳಿ ಪವರ್’ ಶೋ ಶುರು ಆಗಿ ಈಗಾಗಲೇ ತಿಂಗಳುಗಳಾಗಿದ್ದು, ಟಾಸ್ಕ್‌ಗಳು ಇಂಟೆರೆಸ್ಟಿಂಗ್ ಆಗಿ ಮೂಡಿಬರುತ್ತಿರುವುದರಿಂದ ಇನ್ನು ಮುಂದೆ ಇನ್ನಷ್ಟು ಇಂಟರೆಸ್ಟ್ ಮೂಡಿಸಲು ಎಕ್ಸ್ಟ್ರಾ ಪವರ್‌ನೊಂದಿಗೆ ಎಕ್ಸ್ಟ್ರಾ ಮನರಂಜನೆ ವೀಕ್ಷಕರಿಗೆ ನೀಡಲು ಅರ್ಧ ಗಂಟೆ ಮುಂಚಿತವಾಗಿ ಬರುತ್ತಿದೆ. ಹಾಗೆಯೇ 12 ಸ್ಪರ್ಧಿಗಳು ಇದ್ದು ಇಲ್ಲಿ ಯಾರಿಗೆ ಹಳ್ಳಿ ಪವರ್ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

