ಮುಂಬೈ: ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ದಂಪತಿಯು ಇಂದು ತಮ್ಮ 21ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿದ್ದಾರೆ.
View this post on Instagram
ದಂಪತಿ ತಮ್ಮ 21 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ಟ್ವಿಂಕಲ್ ತನ್ನ ಪತಿಯೊಂದಿಗೆ ಕುಳಿತಿರುವ ಕ್ಯಾಂಡಿಡ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಲಾಕ್‍ಡೌನ್ ಬೇಡ- ಸರ್ಕಾರಕ್ಕೆ ಪ್ರತಾಪ್ ಸಿಂಹ ಒತ್ತಾಯ
ಮುಂಬೈನ ಪ್ರತಿಷ್ಠಿತ ರೆಸ್ಟೋರೆಂಟ್‍ನಲ್ಲಿ ಕುಳಿತಿರುವುದನ್ನು ನಾವು ನೋಡಬಹುದಾಗಿದ್ದು. ಅಕ್ಷಯ್ ಅವರು ಹೂಡಿ ಮತ್ತು ಜಾಗಿಂಗ್ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದಾರೆ. ಟ್ವಿಂಕಲ್ ಬಿಳಿಯ ಟಾಪ್ ಮೇಲೆ ಸ್ಕಾರ್ಫ್ ಜೊತೆಗೆ ಪುಲ್ ಓವರ್ ಧರಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಚೇತರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಆಶಾ ಭೋಂಸ್ಲೆ
ಚಿತ್ರಕ್ಕೆ ವಿಶೇಷವಾದ ಶೀರ್ಷಿಕೆಯನ್ನು ಟ್ವಿಂಕಲ್ ಅವರು ಬರೆದುಕೊಂಡಿದ್ದಾರೆ. ಅಕ್ಷಯ್ ಮತ್ತು ಟ್ವಿಂಕಲ್ ಜನವರಿ 17, 2001 ರಂದು ವಿವಾಹವಾಗಿದ್ದಾರೆ. ಅವರಿಗೆ ಆರವ್ ಕುಮಾರ್ ಮತ್ತು ಮಗಳು ನಿತಾರಾ ಕುಮಾರ್ ಎಂಬ ಇಬ್ಬರು ಮಕ್ಕಳಿದ್ದಾರೆ.