ಲಂಡನ್: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ತಮ್ಮ ತಾಯಿಯನ್ನು ವ್ಹೀಲ್ ಚೇರ್‌ನಲ್ಲಿ ಕೂರಿಸಿ ಲಂಡನ್ ಸುತ್ತಾಡಿಸಿದ್ದಾರೆ. ಅಲ್ಲದೆ ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಸಂದೇಶವನ್ನು ನೀಡಿದ್ದಾರೆ.
ಅಕ್ಷಯ್ ಕುಮಾರ್ ತಮ್ಮ ತಾಯಿ ಅರುಣಾ ಭಾಟಿಯಾ ಅವರ ಜೊತೆ ಕಾಲ ಕಳೆದಿದ್ದಾರೆ. ಈ ವಿಡಿಯೋದಲ್ಲಿ ಅಕ್ಷಯ್ ತಮ್ಮ ತಾಯಿ ಕುಳಿತಿರುವ ವ್ಹೀಲ್ ಚೇರ್ ತಳ್ಳುತ್ತಾ ಅವರ ಜೊತೆ ಮಾತನಾಡುತ್ತಾ ಹೋಗುತ್ತಿದ್ದಾರೆ.
Advertisement
Advertisement
ವಿಡಿಯೋ ಹಾಕಿ ಅಕ್ಷಯ್ ಅದಕ್ಕೆ, “ಅಮ್ಮನ ಜೊತೆ ಸಮಯ ಕಳೆಯಲು ಶೂಟಿಂಗ್‍ನಿಂದ ಬಿಡುವು ಮಾಡಿಕೊಂಡಿದ್ದೇನೆ. ನೀವು ಎಷ್ಟೇ ಬ್ಯುಸಿಯಿದ್ದರೂ ಹಾಗೂ ಬೆಳೆಯುತ್ತಿದ್ದರೂ, ನಿಮ್ಮ ಪೋಷಕರಿಗೆ ವಯಸ್ಸಾಗುತ್ತಿದೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ಸಾಧ್ಯವಾದಾಗಲೆಲ್ಲಾ ಅವರೊಂದಿಗೆ ಸಮಯ ಕಳೆಯಿರಿ” ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
Advertisement
ಅಕ್ಷಯ್ ಅವರ ಈ ವಿಡಿಯೋ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ. ಅಲ್ಲದೆ ಕಮೆಂಟ್ ಮಾಡುವ ಮೂಲಕ ಅಕ್ಷಯ್ ಅವರನ್ನು ಹೊಗಳುತ್ತಿದ್ದಾರೆ. ಈ ಪೋಸ್ಟ್ ಗೆ ನಟಿ, ಅಕ್ಷಯ್ ಅವರ ಪತ್ನಿ ಟ್ವಿಂಕಲ್ ಖನ್ನಾ ಕಿಸ್ ಎಮೋಜಿ ಹಾಕುವ ಮೂಲಕ ಕಮೆಂಟ್ ಮಾಡಿದ್ದಾರೆ.
Advertisement
ಕೆಲವು ದಿನಗಳ ಹಿಂದೆ ಅಕ್ಷಯ್ ಅವರ ತಾಯಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಆಗಿದೆ. ಅಂತರಾಷ್ಟ್ರೀಯ ಯೋಗ ದಿನದಂದು ಅಕ್ಷಯ್ ಕುಮಾರ್ ಅವರು ತಮ್ಮ ತಾಯಿ ಯೋಗ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.