Connect with us

ಮೂಲ ಹೆಸರು ರಾಜೀವ್ ಭಾಟಿಯಾವನ್ನು ಕೈ ಬಿಟ್ಟದ್ದು ಯಾಕೆ: ಅಕ್ಷಯ್ ಕುಮಾರ್ ವಿವರಿಸಿದ್ರು

ಮೂಲ ಹೆಸರು ರಾಜೀವ್ ಭಾಟಿಯಾವನ್ನು ಕೈ ಬಿಟ್ಟದ್ದು ಯಾಕೆ: ಅಕ್ಷಯ್ ಕುಮಾರ್ ವಿವರಿಸಿದ್ರು

ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಮೂಲ ಹೆಸರು ರಾಜೀವ್ ಭಾಟಿಯಾ. ಆದರೆ ಈಗ ಅಕ್ಷಯ್ ಕುಮಾರ್ ತಾವು ರಾಜೀವ್ ಹೆಸರನ್ನು ಯಾವ ಕಾರಣಕ್ಕಾಗಿ ಬದಲಾವಣೆ ಮಾಡಿಕೊಂಡಿದ್ದೇನೆ ಎನ್ನುವ ಬಹು ದಿನಗಳ ಪ್ರಶ್ನೆಗೆ ಈಗ ಉತ್ತರ ನೀಡಿದ್ದಾರೆ.

ನಾಮ್ ಶಬನಾ ಚಿತ್ರದ ಪ್ರಚಾರಕ್ಕಾಗಿ ಪತ್ರಿಕೆಯೊಂದರ ಕಚೇರಿಗೆ ಅಕ್ಷಯ್ ಕುಮಾರ್ ಆಗಮಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಮೂಲ ಹೆಸರನ್ನು ಬದಲಾಯಿಸಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಗೆ ಅಕ್ಷಯ್ ಕುಮಾರ್, ಇದೂವರೆಗೂ ನನಗೆ ಈ ಪ್ರಶ್ನೆಯನ್ನು ಯಾರು ಕೇಳಿರಲಿಲ್ಲ. ನನ್ನ ಹೆಸರು ಬದಲಾಗಲು ನಟ ಕುಮಾರ್ ಗೌರವ್ ಕಾರಣ. 1987 ರಲ್ಲಿ ಮಹೇಶ್ ಭಟ್ ನಿರ್ದೇಶನದ ನಟ ಕುಮಾರ್ ಗೌರವ್ ನಟನೆಯ `ಆಜ್’ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದೆ. ಅದು ಕೇವಲ 4.5 ಸೆಕೆಂಡ್‍ಗಳ ಪಾತ್ರವಾಗಿತ್ತು. ನಾಯಕ ನಟ ಕುಮಾರ್ ಗೌರವ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಎಂಬ ಹೆಸರಿನಲ್ಲಿ ನಟಿಸಿದ್ದರು. ಈ ಚಿತ್ರದ ಬಳಿಕ ನನಗೆ ನನಗೆ ಏನಾಯಿತೋ ಗೊತ್ತಿಲ್ಲ, ನೇರವಾಗಿ ಕೋರ್ಟ್ ಗೆ ಹೋಗಿ ರಾಜೀವ್ ಹರಿ ಓಂ ಭಾಟಿಯಾ ಎಂಬ ಹೆಸರಿನ ಬದಲಾಗಿ ಅಕ್ಷಯ್ ಕುಮಾರ್ ಎಂದು ಬದಲಾಯಿಸಿಕೊಂಡೆ ಎಂದು ಉತ್ತರಿಸಿದರು.

ನಾನು ಕುಮಾರ್ ಗೌರವ್ ನಟನೆಯನ್ನು ನೋಡುತ್ತಿದ್ದೆ. ಅಂದು ನನಗೆ ಏನಾಯಿತೋ ಗೊತ್ತಿಲ್ಲ. ನೇರವಾಗಿ ಮುಂಬೈನ ಬಾಂದ್ರಾ ಕೋರ್ಟ್ ಗೆ ಹೋಗಿ ನನ್ನ ಹೆಸರನ್ನು ಬದಲಾಯಿಸಿದೆ. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಆದರೂ ನಾನು ವಿಸಿಟಿಂಗ್ ಕಾರ್ಡ್ ಮಾಡಿಸಿಕೊಂಡಿದ್ದೆ ಎಂದು ನಗುತ್ತಾ ಅಕ್ಷಯ್ ಉತ್ತರಿಸಿದರು.

`ನಾಮ್ ಶಬನಾ’ ಚಿತ್ರದ ನಾಯಕಿ ಪ್ರಧಾನ ಚಿತ್ರವಾಗಿದ್ದು, ನಟಿ ತಾಪ್ಸಿ ಪನ್ನು, ನಟ ಮನೋಜ್ ಬಾಜ್‍ಪೇಯಿ, ನಿರ್ದೇಶಕ ಶಿವಂ ನಾಯರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈಗಾಗಲೇ ಟ್ರೇಲರ್ ನಿಂದ ನಿರೀಕ್ಷೆ ಹುಟ್ಟಿಸಿರುವ `ನಾಮ್ ಶಬನಾ’ ಚಿತ್ರ ಇದೇ ತಿಂಗಳು ಮಾರ್ಚ್ 31 ರಂದು ಬಿಡುಗಡೆಯಾಗಲಿದೆ.

 

Advertisement
Advertisement