ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಟೈಗರ್ ಶ್ರಾಫ್ (Tiger Shroff) ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ‘ಬಡೇ ಮೀಯಾ ಚೋಟೆ ಮಿಯಾ’ (Bade Miyan Chote Miyan) ಸಿನಿಮಾದ ಶೂಟಿಂಗ್ ಮುಂಬೈನ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಚಿತ್ರೀಕರಣ ವೇಳೆ ಮೇಕಪ್ ಮ್ಯಾನ್ ಶ್ರವಣ್ ವಿಶ್ವಕರ್ಮ ಎನ್ನುವವರ ಮೇಲೆ ಚಿರತೆ (Cheetah) ದಾಳಿ ಮಾಡಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರು ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿನಿಮಾದ ಶೂಟಿಂಗ್ ಮುಗಿದ ನಂತರ ಶ್ರವಣ್, ತನ್ನ ಸ್ನೇಹಿತನನ್ನು ಅವರ ಮನೆಗೆ ಡ್ರಾಪ್ ಮಾಡಿ ವಾಪಸ್ಸಾಗುತ್ತಿದ್ದರಂತೆ. ಈ ಸಮಯದಲ್ಲಿ ಚಿರತೆ ದಾಳಿ ಮಾಡಿದೆ. ಈ ಘಟನೆ ಕುರಿತಂತೆ ಮಾತನಾಡಿರುವ ಅವರು, ‘ಸ್ನೇಹಿತನನ್ನು ಡ್ರಾಪ್ ಮಾಡಿ ವಾಪಸ್ಸಾಗುತ್ತಿದ್ದೆ. ಮೊದಲು ಹಂದಿಯೊಂದು ಓಡಿ ಬಂತು, ಆನಂತರ ಹಂದಿಯನ್ನು ಅಟ್ಟಿಸಿಕೊಂಡು ಚಿರತೆ ಬಂತು. ಏಕಾಏಕಿ ಚಿರತೆ ನನ್ನ ಮೇಲೆ ದಾಳಿ ಮಾಡಿತು. ನಾನು ಬೈಕ್ ನಿಂದ ಬಿದ್ದೆ. ಆನಂತರ ಏನಾಯಿತು ಎಂದು ಗೊತ್ತಿಲ್ಲ’ ಅಂದಿದ್ದಾರೆ.
ಚಿರತೆ ಏಕಾಏಕಿ ದಾಳಿ ಮಾಡಿದಾಗ ಶ್ರವಣ್ ಬೈಕ್ ನಿಂದ ಬಿದ್ದಿದ್ದಾರೆ. ಆ ನಂತರ ಅವರಿಗೆ ಪ್ರಜ್ಞೆ ತಪ್ಪಿದೆ. ಅದೇ ದಾರಿಯಲ್ಲಿ ಸಂಚಾರ ಮಾಡುತ್ತಿದ್ದವರು ಅದನ್ನು ಗಮನಿಸಿ, ಕೂಡಲೇ ಶ್ರವಣ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುನ್ನೂರಕ್ಕೂ ಹೆಚ್ಚು ಎಕರೆಯಲ್ಲಿ ಫಿಲ್ಮ್ ಸಿಟಿ ಇರುವುದರಿಂದ ಹೀಗೆ ಪದೇ ಪದೇ ಘಟನೆಗಳು ನಡೆಯುತ್ತವೆ ಎನ್ನುತ್ತಾರೆ ಸ್ಥಳೀಯರು.
ಸದ್ಯ ಶ್ರವಣ್ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸಾ ವೆಚ್ಚವನ್ನು ಸಿನಿಮಾ ತಂಡವೇ ನೋಡಿಕೊಳ್ಳಲಿದೆಯಂತೆ. ಈ ಘಟನೆಯ ಬಗ್ಗೆ ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಬೇಸರ ವ್ಯಕ್ತ ಪಡಿಸಿದ್ದಾರೆ. ಬೀದಿ ದೀಪಗಳು ಅಲ್ಲಿ ಸರಿಯಾಗಿ ಉರಿಯುವುದಿಲ್ಲ. ಅವುಗಳನ್ನು ಸರಿ ಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k