ಬಾಲಿವುಡ್ ಸಿನಿಮಾಗಳಿಗೆ ಮತ್ತೆ ಸೆಡ್ಡು ಹೊಡೆದು ನಿಂತಿದೆ ದಕ್ಷಿಣದ ಸಿನಿಮಾ. ಬಾಹುಬಲಿ, ಕೆಜಿಎಫ್ 2 ನಂತರ ದಕ್ಷಿಣದ ‘ವಿಕ್ರಮ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿಸಿದೆ. ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಗಳಿಕೆಯಲ್ಲಿ ವಿಕ್ರಮ್ ಗಿಂತ ಹಿಂದಿದೆ. ಹಾಗಾಗಿ, ಬಿಟೌನ್ ಮತ್ತೊಮ್ಮೆ ಆತಂಕ ಎದುರಿಸಬೇಕಾಗಿದೆ.
Advertisement
ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಮತ್ತು ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನಿನ್ನೆ ಒಟ್ಟಿಗೆ ರಿಲೀಸ್ ಆಗಿವೆ. ಎರಡೂ ಸಿನಿಮಾಗಳು ಕೂಡ ಅಷ್ಟೇ ನಿರೀಕ್ಷೆ ಮೂಡಿಸಿದ್ದವು. ಅಕ್ಷಯ್ ಕುಮಾರ್ ಸಿನಿಮಾ ನೋಡಿದ ಅಮಿತ್ ಶಾ, ಯೋಗಿ ಆದಿತ್ಯ ನಾಥ್ ಸೇರಿದಂತೆ ಅನೇಕ ಗಣ್ಯರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ನಿರೀಕ್ಷಿತ ಹಣ ತಂದುಕೊಟ್ಟಿಲ್ಲ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ
Advertisement
Advertisement
ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ರಿಲೀಸ್ ದಿನ ಬಾಕ್ಸ್ ಆಫೀಸು ತುಂಬಿಸಿದೆ. ಕಮಲ್ ಜೊತೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ನಂತಹ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿದ್ದರು. ಈ ಮೂವರು ಅಭಿಮಾನಿಗಳು ಸೇರಿ, ವಿಕ್ರಮ್ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಹಾಗಾಗಿ ಮೊದಲ ದಿನವೇ ಈ ಸಿನಿಮಾ 34 ಕೋಟಿ ಸಂಪಾದಿಸಿದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಸದ್ಯದಲ್ಲೇ 100 ಕೋಟಿ ಕ್ಲಬ್ ಸೇರಲಿದೆ ಎಂದು ಭವಿಷ್ಯ ಕೂಡ ನುಡಿದಿದ್ದಾರೆ.
Advertisement
ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಮೊದಲ ದಿನದ ಗಳಿಕೆ ಕೇವಲ 11 ಕೋಟಿ ಎನ್ನಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಗಳಿಕೆಯಲ್ಲಿ ಚೇತರಿಕೆ ಕಾಣಿಸಬಹುದಾ ಎಂದು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರಂತೆ ನಿರ್ಮಾಪಕರು.