BollywoodCinemaLatestMain Post

ಗಣೇಶ್ ಆಚಾರ್ಯ ಡ್ಯಾನ್ಸ್ ಸ್ಟುಡಿಯೋ ಉದ್ಘಾಟಿಸಿದ ಅಕ್ಷಯ್ ಕುಮಾರ್

ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯರ ಡ್ಯಾನ್ಸ್ ಸ್ಟುಡಿಯೋವನ್ನು ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ಅವರು ಇಂದು ಉದ್ಘಾಟಿಸಿದರು.

ಅಕ್ಷಯ್ ಕುಮಾರ್ ಅವರು ಇನ್ನು ಮುಂದೆ ತಾನು ಸಹಿ ಮಾಡಿದ ತಂಬಾಕು ಬ್ರಾಂಡ್‍ನ ರಾಯಭಾರಿಯಾಗುವುದಿಲ್ಲ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಈಗಾಗಲೇ ತಿಳಿಸಿದ್ದಾರೆ. ಮಧ್ಯರಾತ್ರಿಯ ಸುಮಾರಿಗೆ ಈ ಹೇಳಿಕೆಯನ್ನು ನೀಡಿದ ನಂತರ, ನಟ ಮುಂಬೈನಲ್ಲಿ ಬೆಳಗ್ಗೆ ಡ್ಯಾನ್ಸರ್ ಗಣೇಶ್ ಆಚಾರ್ಯ ಅವರ ಡ್ಯಾನ್ಸ್ ಸ್ಟುಡಿಯೋವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಬಾಲಿವುಡ್‍ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಕ್ಷಯ್ ಕುಮಾರ್ ಇತ್ತೀಚೆಗೆ ಪಾನ್ ಮಸಾಲಾ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತಿರುವುದರ ಬಗ್ಗೆ ಭಾರೀ ಟ್ರೋಲ್ ಆಗಿದ್ದರು. ಹಲವು ದಿನಗಳಿಂದ ಅಕ್ಷಯ್ ಅಭಿಮಾನಿಗಳು ಅವರ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದರಿಂದ ಇದೀಗ ಅಕ್ಷಯ್ ಬ್ರ್ಯಾಂಡ್ ಅಂಬಾಸಿಡರ್ ಪಟ್ಟವನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಪಾನ್ ಮಸಾಲಾ ಬ್ರಾಂಡ್ ಒಂದರ ಜಾಹಿರಾತಿಗಾಗಿ ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಕೆಲಸ ಮಾಡುತ್ತಿದ್ದರು. ಆದರೆ ಇದರಿಂದ ಅಕ್ಷಯ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಅಕ್ಷಯ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ.

 

View this post on Instagram

 

A post shared by Akshay Kumar (@akshaykumar)

ಏಪ್ರಿಲ್ 21ರ ಮಧ್ಯರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಅಕ್ಷಯ್, ನನ್ನನ್ನು ಕ್ಷಮಿಸಿ, ನನ್ನ ಎಲ್ಲಾ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ನಾನು ಕ್ಷಮೆ ಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿದೆ. ನಾನು ತಂಬಾಕನ್ನು ಅನುಮೋದಿಸಿಲ್ಲ ಹಾಗೂ ಅನುಮೋದಿಸುವುದಿಲ್ಲ. ಆದರೆ ನಾನು ಗೌರವಿಸುತ್ತೇನೆ. ವಿಮಲ್ ಎಲೈಚಿ ಅವರೊಂದಿಗೆ ನನ್ನ ಒಡನಾಟ ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿರುವುದು ನನಗೆ ತಿಳಿದಿದೆ. ಹೀಗಾಗಿ ನಾನು ಇದರಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಬರೆದಿದ್ದಾರೆ.

ನಾನು ಈ ಜಾಹೀರಾತಿನಿಂದ ಪಡೆದ ಹಣವನ್ನು ಒಳ್ಳೆಯ ಕೆಲಸಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದೇನೆ. ನನ್ನ ಹಾಗೂ ಬ್ರ್ಯಾಂಡ್‍ನೊಂದಿಗಿರುವ ಒಪ್ಪಂದದ ಅವಧಿ ಮುಗಿಯುವವರೆಗೂ ಜಾಹಿರಾತನ್ನು ಪ್ರಸಾರ ಮಾಡುವುದನ್ನು ಕಂಪನಿ ಮುಂದುವರಿಸಬಹುದು. ಆದರೆ ಮುಂದೆ ಯಾವುದೇ ರೀತಿಯಾಗಿ ಹೆಜ್ಜೆ ಇಡುವಲ್ಲಿ ಅತ್ಯಂತ ಜಾಗರೂಕನಾಗಿ ಇರುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Back to top button