ಬಾಲಿವುಡ್ ನಲ್ಲಿ ಬಾಯ್ಕಾಟ್ ಕಾವು ಜೋರಾಗಿದೆ. ಇದಕ್ಕೆ ಬಾಲಿವುಡ್ ನಿರ್ಮಾಪಕರು ಬೇಸತ್ತು ಹೋಗಿದ್ದಾರೆ. ಬಾಯ್ಕಾಟ್ ಗಾಳಿ ಎಷ್ಟೇ ಜೋರಾದರೂ, ಪಠಾಣ್ ಸಿನಿಮಾವನ್ನು ಏನೂ ಮಾಡುವುದಕ್ಕೆ ಆಗಲಿಲ್ಲ. ಹಾಗಾಗಿ ಅಕ್ಷಯ್ ಕುಮಾರ್ ತಮ್ಮ ಮುಂದಿನ ಸಿನಿಮಾ ಸೆಲ್ಫಿಯಲ್ಲಿ ಬಾಯ್ಕಾಟ್ ಮಾಡುವವರನ್ನೇ ಟ್ರೋಲ್ ಮಾಡಿದ್ದಾರೆ. ಈ ಮೂಲಕ ಅಕ್ಷಯ್ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಸಡನ್ನಾಗಿ ಶಾರುಖ್ ಪರ ಅಕ್ಷಯ್ ನಿಂತಿದ್ದು ಅಚ್ಚರಿಯನ್ನೂ ಮೂಡಿಸಿದೆ.
Advertisement
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಗೆಲುವನ್ನು ಅನೇಕರು, ಅನೇಕ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಬಾಲಿವುಡ್ ಸಿನಿಮಾ ರಂಗಕ್ಕೆ ಚೈತನ್ಯ ತುಂಬಿದ ಸಿನಿಮಾವಿದು ಎಂದು ಕೆಲವರು ಪ್ರಶಂಸೆ ಮಾಡುತ್ತಿದ್ದರೆ, ಶಾರುಖ್ ವಿರೋಧಿಗಳು ಈ ಗೆಲುವನ್ನು ಅರ್ಥೈಸುತ್ತಿರುವ ಪರಿಯೇ ವಿಚಿತ್ರವಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಬಾಯ್ಕಾಟ್ ಪರಿಯನ್ನೇ ಅವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಮಂತಾಗೆ ಹೋಲಿಸಿದ ನೆಟ್ಟಿಗರಿಗೆ `ಗಾಳಿಪಟ 2′ ನಾಯಕಿ ಏನಂದ್ರು ಗೊತ್ತಾ?
Advertisement
Advertisement
ಪಠಾಣ್ ಸಿನಿಮಾ ಅತೀ ಹೆಚ್ಚು ಜನರಿಗೆ ತಲುಪುವಂತೆ ಮಾಡಿದ್ದು, ಸಿನಿಮಾದ ಕಂಟೆಂಟ್ ಗಿಂತಲೂ ವಿರೋಧಿಗಳು ನಡೆಸಿದ ಬಾಯ್ಕಾಟ್ ಎನ್ನುವ ಮಾತಿದೆ. ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಹಲವು ಪ್ರತಿಭಟನೆಗಳು ಕೂಡ ನಡೆದವು. ಈ ಬಾಯ್ಕಾಟ್ ಸಿನಿಮಾಗೆ ವರವಾಯಿತು ಎಂದು ಹೇಳಲಾಗುತ್ತಿದೆ. ಇದೀಗ ಆ ಬಾಯ್ಕಾಟ್ ಬಗ್ಗೆಯೇ ಅಗ್ನಿಹೋತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ.
Advertisement
‘ನಿಜವಾಗಿಯೂ ಬಾಯ್ಕಾಟ್ ಮಾಡಿದ್ದು ಯಾರು? ಶಾರುಖ್ ಖಾನ್ ಅವರ ಗ್ಯಾಂಗೇ ಈ ರೀತಿಯಲ್ಲಿ ಪ್ರಚಾರ ಮಾಡಿತಾ ಎನ್ನುವ ಅನುಮಾನ ನನ್ನದು. ಬಾಯ್ಕಾಟ್ ಎನ್ನುವುದು ಸಿನಿಮಾ ಪ್ರಚಾರದ ಒಂದು ಭಾಗ ಆಗಿತ್ತಾ? ‘ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪಠಾಣ್ ಗೆಲುವನ್ನು ತಾವು ಗೆಲುವು ಎಂದು ಕರೆಯುವುದಿಲ್ಲ ಎಂದೂ ಅವರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k