BollywoodCinemaLatestMain Post

ಆಲಿಯಾ ರಣ್‌ಬೀರ್, ವಿಕ್ಕಿ ಕತ್ರಿನಾ: ಸುಂದರ ಸಂಸಾರಕ್ಕೆ ಅಕ್ಷಯ್ ಕುಮಾರ್ ಟಿಪ್ಸ್

Advertisements

ಬಾಲಿವುಡ್‌ನ ನಂಬರ್ ಒನ್ ಶೋ `ಕಾಫಿ ವಿತ್ ಸೀಸನ್ 7’ರಲ್ಲಿ ಇತ್ತೀಚೆಗಷ್ಟೇ ಸಮಂತಾ ಮತ್ತು ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಈ ಶೋನಲ್ಲಿ ಬಿಟೌನ್‌ನ ನವವಿವಾಹಿತರಾದ ಆಲಿಯಾ ಭಟ್ ಮತ್ತು ರಣ್‌ಬೀರ್, ವಿಕ್ಕಿ ಕತ್ರಿನಾ ದಂಪತಿಗೆ ಸುಂದರ ಸಂಸಾರಕ್ಕೆ ಅಕ್ಷಯ್ ಕಿವಿ ಮಾತೊಂದನ್ನ ಹೇಳಿದ್ದಾರೆ.

`ಕಾಫಿ ವಿತ್ ಕರಣ್ ಸೀಸನ್ 7’ಕ್ಕೆ ಮೊದಲ ಅತಿಥಿಯಾಗಿ ರಣ್‌ವೀರ್ ಮತ್ತು ಆಲಿಯಾ ಭಾಗವಹಿಸಿದ್ದರು. ಎರಡನೇ ಎಪಿಸೋಡ್‌ಗೆ ಸಮಂತಾ ಮತ್ತು ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಈ ಶೋನಲ್ಲಿ ಹೇಳಿರುವ ಅದೆಷ್ಟೋ ಮಾತುಗಳು ಈಗ ಸಖತ್ ಸದ್ದು ಮಾಡುತ್ತಿದೆ. ಇದೀಗ ಶೋನಲ್ಲಿ ನಿರೂಪಕ ಕರಣ್ ಜೋಹರ್ ಅಕ್ಷಯ್‌ಗೆ ನವವಿವಾಹಿತರಾದ ಆಲಿಯಾ ರಣ್‌ಬೀರ್, ಮತ್ತು ವಿಕ್ಕಿ ಕತ್ರಿನಾ ದಂಪತಿಗೆ ದಾಂಪತ್ಯ ಜೀವನಕ್ಕೆ ಎನು ಸಲಹೆ ನೀಡುತ್ತೀರಾ ಎಂದು ಕೇಳಿದ್ದಾರೆ. ಇದನ್ನೂ ಓದಿ:68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಅತ್ಯುತ್ತಮ ಚಲನಚಿತ್ರ ʻಸೂರರೈ ಪೊಟ್ರುʼ

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಚಿತ್ರರಂಗದ ಬೆಸ್ಟ್ ದಂಪತಿಗಳಲ್ಲಿ ಒಬ್ಬರು. ಸಾಕಷ್ಟು ವರ್ಷಗಳಿಂದ ಒಬ್ಬರಿಗೊಬ್ಬರು ಸಾಥ್ ನೀಡುತ್ತಲೇ ಬಂದಿದ್ದಾರೆ. ಈಗ ಸುಂದರ ಸಂಸಾರಕ್ಕೆ ಬಿಟೌನ್ ನವಜೋಡಿಗೆ ಕಿವಿ ಮಾತೊಂದನ್ನ ಅಕ್ಷಯ್ ಕುಮಾರ್ ಹೇಳಿದ್ದಾರೆ. ರಣ್‌ಬೀರ್‌ಗೆ ಹೆಂಡತಿಯನ್ನು ಸಂತೋಷವಾಗಿಡಿ, ಆಗ ಜೀವನ ಸುಂದರವಾಗಿರುತ್ತದೆ ಎಂದು ಹೇಳಿದ್ದಾರೆ. ಕತ್ರಿನಾ ಜತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರೋದರಿಂದ ಕತ್ರಿನಾಗೆ, ವಿಕ್ಕಿ ಕಿವಿಯನ್ನು ತಿನ್ನಬೇಡಿ, ನಿಧಾನವಾಗಿ ಹೇಳಿ ಎಂದು ಸಲಹೆ ನೀಡಿದ್ದಾರೆ.

Live Tv

Leave a Reply

Your email address will not be published.

Back to top button