Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bollywood

PM-CARES Fundಗೆ 25 ಕೋಟಿ ರೂ. ದೇಣಿಗೆ ಘೋಷಿಸಿದ ಅಕ್ಷಯ್ ಕುಮಾರ್

Public TV
Last updated: March 28, 2020 9:31 pm
Public TV
Share
2 Min Read
akshay kumar1
SHARE

ಮುಂಬೈ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಹೋರಾಟ ನಡೆಸುತ್ತಿದೆ. ಈ ಹೋರಾಟಕ್ಕೆ ಸಾಮಾನ್ಯ ಜನರು, ಉದ್ಯಮಿಗಳು, ಸೆಲೆಬ್ರಿಟಿಗಳು ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ. ತಮ್ಮ ಕೈಲಾದ ಧನ ಸಹಾಯ ಮಾಡುವ ಮೂಲಕ ಸೋಂಕಿತ ವಿರುದ್ಧ ಹೋರಾಡಲು ನೆರವಾಗಿದ್ದಾರೆ. ಈಗ ಈ ಸಾಲಿಗೆ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರು ಕೂಡ ಸೇರಿದ್ದು, PM-CARES Fundಗೆ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡಲು ಮುಂದಾಗಿದ್ದಾರೆ.

The PM-CARES Fund accepts micro-donations too. It will strengthen disaster management capacities and encourage research on protecting citizens.

Let us leave no stone unturned to make India healthier and more prosperous for our future generations. pic.twitter.com/BVm7q19R52

— Narendra Modi (@narendramodi) March 28, 2020

ಮಹಾಮಾರಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕೂಡ ಕಷ್ಟ ಪಡುತ್ತಿದ್ದು, ಇದನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನರಿಂದಲೇ ದೇಣಿಗೆ ಸ್ವೀಕರಿಸಲು ಮುಂದಾಗಿದ್ದಾರೆ. PM-CARES Fund ಮೂಲಕ ಹಣ ಸಂಗ್ರಹ ಮಾಡುವುದಾಗಿ ಮೋದಿ ಅವರು ತಿಳಿಸಿದ್ದಾರೆ. ಇತ್ತ ಮೋದಿ ಅವರು PM-CARES Fundಗೆ ದೇಣಿಗೆ ನೀಡುವಂತೆ ಕೋರುತ್ತಿದ್ದಂತೆ ಅಕ್ಷಯ್ ಕುಮಾರ್ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.

This is that time when all that matters is the lives of our people. And we need to do anything and everything it takes. I pledge to contribute Rs 25 crores from my savings to @narendramodi ji’s PM-CARES Fund. Let’s save lives, Jaan hai toh jahaan hai. ???????? https://t.co/dKbxiLXFLS

— Akshay Kumar (@akshaykumar) March 28, 2020

‘ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕು. ನಾನು ನನ್ನ ಉಳಿತಾಯದ ಹಣದಲ್ಲಿ 25 ಕೋಟಿ ರೂ. ಗಳನ್ನು ನರೇಂದ್ರ ಮೋದಿಯವರ PM-CARES Fundಗೆ ನೀಡುವುದಾಗಿ ಪ್ರಮಾಣಿಸುತ್ತಿದ್ದೇನೆ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು’ ಎಂದು ಬರೆದು ಪ್ರಧಾನಿಗಳ ಟ್ವೀಟ್‍ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

https://www.instagram.com/p/B-HPzBRn9pD/

ಅಕ್ಷಯ್ ಕಾರ್ಯ ಎಲ್ಲರ ಮನ ಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ‘ನೀವೇ ರಿಯಲ್ ಹೀರೋ’ ಎಂದು ಜನರು ಆಕ್ಷನ್ ಕಿಂಗ್‍ನನ್ನು ಹೊಗಳುತ್ತಿದ್ದಾರೆ. ಇತ್ತ ದೇಶದಲ್ಲಿ ಕೊರೊನಾ ವೈರಸ್ ಹರಡಲು ಆರಂಭ ಆದಾಗಿನಿಂದ ಅಭಿಮಾನಿಗಳಿಗೆ ಅಕ್ಷಯ್ ಕುಮಾರ್ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಲಾಕ್‍ಡೌನ್ ಆದೇಶ ಇದ್ದರೂ ರಸ್ತೆಗಳಲ್ಲಿ ಜನರು ಗುಂಪು ಗುಂಪಾಗಿ ಓಡಾಡುತ್ತಿರುವುದನ್ನು ಖಂಡಿಸಿ ಅಭಿಮಾನಿಗಳಿಗೆ ಅಕ್ಷಯ್ ಎಚ್ಚರಿಕೆಯನ್ನೂ ನೀಡಿದ್ದರು.

The man makes me proud. When I asked him if he was sure as it was such a massive amount and we needed to liquidate funds, he just said, ‘ I had nothing when I started and now that I am in this position, how can I hold back from doing whatever I can for those who have nothing.’ https://t.co/R9hEin8KF1

— Twinkle Khanna (@mrsfunnybones) March 28, 2020

ಸೂಪರ್ ಸ್ಟಾರ್ ರಜನೀಕಾಂತ್, ನಟ ಅಲ್ಲು ಅರ್ಜುನ್, ಪ್ರಭಾಸ್, ಪವನ್ ಕಲ್ಯಾಣ್, ನಿತಿನ್, ಮಹೇಶ್ ಬಾಬು, ರಾಮ್ ಚರಣ್, ಹೃತಿಕ್ ರೋಷನ್, ಕಪಿಲ್ ಶರ್ಮಾ ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

TAGGED:Akshay kumarbollywoodCorona VirusdonationsPM-CARES Fundprime minister narendra modiPublic TVಅಕ್ಷಯ್ ಕುಮಾರ್ಕೊರೊನಾ ವೈರಸ್ದೇಣಿಗೆಪಬ್ಲಿಕ್ ಟಿವಿಪ್ರಧಾನಿ ನರೇಂದ್ರ ಮೋದಿಬಾಲಿವುಡ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

mammootty
ಅನಾರೋಗ್ಯದಿಂದ ಚೇತರಿಸಿಕೊಂಡ ಮಮ್ಮುಟ್ಟಿ; ಚೇತರಿಕೆ ಬೆನ್ನಲ್ಲೇ ಗುಡ್‌ನ್ಯೂಸ್
Cinema Latest South cinema Top Stories
Prabhas Anuksha
ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಪ್ರಭಾಸ್-ಅನುಷ್ಕಾ
Cinema Latest South cinema Top Stories
Chahal Dhanashree
ಚಹಲ್‌ಗೆ ಟಕ್ಕರ್ ಕೊಟ್ಟ ಮಾಜಿ ಪತ್ನಿ ಧನಶ್ರೀ
Cinema Cricket Latest Top Stories
amitabh bacchan house
ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ
Cinema Latest National Top Stories
Rukmini Vasanth Pot Making
ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್
Cinema Latest Sandalwood Top Stories

You Might Also Like

Rekha Gupta 2
Latest

ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್‌

Public TV
By Public TV
11 minutes ago
Vijayapura
Districts

ಮಳೆಯಿಂದ ನಷ್ಟ ಅನುಭವಿಸಿದ 2 ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ಎಂ.ಬಿ ಪಾಟೀಲ್

Public TV
By Public TV
16 minutes ago
c.n.manjunath nirmala sitharaman
Latest

ಇಮ್ಯೂನೋಥೆರಪಿಗೆ ಬಳಸುವ ಔಷಧ & ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕಕ್ಕೆ ವಿನಾಯಿತಿಗೆ ಮನವಿ

Public TV
By Public TV
27 minutes ago
Amit shah
Latest

ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣಕ್ಕೆ ಪರಶುರಾಮಪುರಿ ಎಂದು ಮರುನಾಮಕರಣ

Public TV
By Public TV
30 minutes ago
big bulletin 20 August 2025 part 1
Big Bulletin

ಬಿಗ್‌ ಬುಲೆಟಿನ್‌ 20 August 2025 ಭಾಗ-1

Public TV
By Public TV
35 minutes ago
big bulletin 20 August 2025 part 2
Big Bulletin

ಬಿಗ್‌ ಬುಲೆಟಿನ್‌ 20 August 2025 ಭಾಗ-2

Public TV
By Public TV
37 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?