ಅಕ್ಷಯ್ ಕುಮಾರ್ ಭಾರತ ದೇಶದವರಲ್ಲ, ದೇಶದಿಂದ ಹೊರ ಹಾಕಿಸುವೆ : ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ

Public TV
1 Min Read
FotoJet 1 51

ಬಿಜೆಪಿ ಪಕ್ಷದ ಫಯರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಗರಂ ಆಗಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಈ ದೇಶದಿಂದ ಓಡಿಸುವಂತೆ ಮಾಡುವೆ ಎಂದು ಗುಡುಗಿದ್ದಾರೆ. ಬಿಜೆಪಿ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುವ ಅಕ್ಷಯ್ ಕುಮಾರ್ ಮೇಲೆ ಸುಬ್ರಹ್ಮಣಿಯನ್ ಸ್ವಾಮಿ ಮುಗಿ ಬಿದ್ದಿರುವುದಕ್ಕೆ ಸ್ವತಃ ಬಿಜೆಪಿಯವರೇ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಇದಷ್ಟೇ ಅಲ್ಲ, ಅಕ್ಷಯ್ ಕುಮಾರ್ ರ ಪೌರತ್ವವನ್ನೂ ಸ್ವಾಮಿ ಪ್ರಶ್ನಿಸಿದ್ದಾರೆ.

akshay kumar 3

ಅಕ್ಷಯ್ ಕುಮಾರ್ ಸದ್ಯ ಸೇತು ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ. ಇನ್ನೇನು ಅದು ತೆರೆಗೆ ಬರಬೇಕು. ಈ ಸಿನಿಮಾದಲ್ಲಿ ರಾಮ ಸೇತು ಕುರಿತು ತಪ್ಪು ಮಾಹಿತಿಯನ್ನು ಕೊಡುವುದಕ್ಕೆ ಚಿತ್ರತಂಡ ಹೊರಟಿದೆಯಂತೆ. ಅಲ್ಲದೇ, ಸಿನಿಮಾದ ಪೋಸ್ಟರ್ ನಲ್ಲಿ ಸುಪ್ರೀಂ ಕೋರ್ಟ್ ನ 2007ರ ಆದೇಶದ ಪ್ರತಿಯನ್ನು ಬಳಸಿಕೊಳ್ಳಲಾಗಿದೆಯಂತೆ. ಈ ಆದೇಶವು ಸ್ವಾಮಿ ಅವರು ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದು ಆಗಿದೆ. ಹಾಗಾಗಿ ಅನುಮತಿ ಇಲ್ಲದೇ ಅದನ್ನೂ ಬಳಸಿಕೊಂಡಿದ್ದಕ್ಕೆ ಅವರು ಗರಂ ಆಗಿದ್ದಾರೆ. ಇದನ್ನೂ ಓದಿ:‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್?

akshay kumar 6

ಈ ಕುರಿತು ಟ್ವಿಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ‘ಈ ಸಿನಿಮಾದ ಹಕ್ಕುಗಳಿಗೆ ಸಂಬಂಧಿಸಿದಂತೆ ನಾನು ಅಕ್ಷಯ್ ಕುಮಾರ್ ಮತ್ತು  ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಕಾಮ್ರಾ ಮೀಡಿಯಾ ಮೇಲೆಯೂ ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ. ರಾಮ ಸೇತುವೆ ಬಗ್ಗೆ ತಪ್ಪು ಮಾಹಿತಿಯನ್ನು ಕೊಡುವುದಕ್ಕೆ ನಾನು ಬಿಡುವುದಿಲ್ಲ. ಅಕ್ಷಯ್ ಕುಮಾರ್ ಭಾರತದ ಪ್ರಜೆಯಲ್ಲ, ಅವರು ಕೆನಡಾದ ಪೌರತ್ವ ಹೊಂದಿದ್ದಾರೆ. ಹಾಗಾಗಿ ಅವರಿಗೆ ಇತಿಹಾಸದ ಅರಿವಿಲ್ಲ ಎಂದೂ ಟ್ವಿಟ್ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article