ಮುಂಬೈ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಶೂಟಿಂಗ್ ಸೆಟ್‍ನಲ್ಲಿ ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ಇವರಿಬ್ಬರ ಜಗಳವನ್ನು ಬಿಡಿಸಲು ಪೊಲೀಸರು ಹಾಗೂ ಕರಣ್ ಜೋಹರ್ ಸ್ಥಳಕ್ಕೆ ಭೇಟಿ ನೀಡಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ ಅಕ್ಷಯ್ ಹಾಗೂ ರೋಹಿತ್ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಸ್ವತಃ ಪೊಲೀಸರೇ ಸ್ಥಳಕ್ಕೆ ಭೇಟಿ ನೀಡಿ ಇಬ್ಬರ ಜಗಳವನ್ನು ಬಿಡಿಸಿದ್ದಾರೆ. ಈ ವಿಡಿಯೋವನ್ನು ಅಕ್ಷಯ್ ಕುಮಾರ್ ಅವರು ಪೋಸ್ಟ್ ಮಾಡಿದ್ದು, ಈ ವಿಡಿಯೋ ಹಿಂದಿನ ಸತ್ಯಾಂಶ ಬೇರೆ ಇದೆ.
ವೆಬ್‌ಸೈಟ್‌ಯೊಂದರಲ್ಲಿ, ‘ಸೂರ್ಯವಂಶಿ’ ಚಿತ್ರದ ಸೆಟ್‍ನಲ್ಲಿ ಅಕ್ಷಯ್ ಹಾಗೂ ರೋಹಿತ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕರಣ್ ಜೋಹರ್ ಅವರ ಜಗಳವನ್ನು ಬಿಡಿಸಿದ್ದಾರೆ ಎಂದು ಸುದ್ದಿ ಪ್ರಕಟಿಸಿತ್ತು. ಈ ಸುದ್ದಿ ಸಂಪೂರ್ಣ ಫೇಕ್ ಆಗಿದ್ದು, ಇದನ್ನು ನೋಡಿದ ಅಕ್ಷಯ್ ತಮಾಷೆಗಾಗಿ ರೋಹಿತ್ ಜೊತೆ ಜಗಳವಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
#BreakingNews – A fallout which might just make your day ???? pic.twitter.com/gH2jgTQqhT
— Akshay Kumar (@akshaykumar) November 12, 2019
ಈ ವಿಡಿಯೋ ನಟಿ ಕತ್ರಿನಾ ಕೈಫ್ ಕೂಡ ಸಾಥ್ ನೀಡಿದ್ದಾರೆ. ಕತ್ರಿನಾ ಅವರೇ ಮೊದಲು ರೋಹಿತ್ ಹಾಗೂ ಅಕ್ಷಯ್ ಅವರ ಜಗಳವಾಡುತ್ತಿರುವ ವಿಡಿಯೋವನ್ನು ತೋರಿಸಿದ್ದರು. ಅಕ್ಷಯ್ ಈ ವಿಡಿಯೋವನ್ನು ಹಂಚಿಕೊಂಡು ಅದಕ್ಕೆ, “ಬ್ರೇಕಿಂಗ್ ನ್ಯೂಸ್- ಈ ಜಗಳ ನೋಡಿದರೆ ನಿಮ್ಮ ದಿನ ಸರಿಯಾಗುತ್ತೆ” ಎಂದು ಟ್ವೀಟ್ ಮಾಡಿದ್ದಾರೆ.
https://twitter.com/karanjohar/status/1194164205932421120
ಸೂರ್ಯವಂಶಿ ಚಿತ್ರವನ್ನು ಕರಣ್ ಜೋಹರ್ ಹಾಗೂ ರೋಹಿತ್ ಶೆಟ್ಟಿ ಸೇರಿ ನಿರ್ಮಿಸುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ ಹಾಗೂ ರೋಹಿತ್ ಶೆಟ್ಟಿ ಪಿಕ್ಚರ್ಸ್ ಬ್ಯಾನರ್ ಅಡಿ ತಯಾರಾದ ಈ ಚಿತ್ರ ಮುಂದಿನ ವರ್ಷ ಮಾರ್ಚ್ 27ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ದೃಶ್ಯವೊಂದರಲ್ಲಿ ನಟ ರಣ್‍ವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಕಾಣಿಸಿಕೊಳ್ಳುತ್ತಿದ್ದಾರೆ.